ಕಾಂಗ್ರೆಸ್ ಒಂದು ನಾಟಕದ ಕಂಪನಿ: ಅನಂತ ಕುಮಾರ್ ಹೆಗಡೆ

ಬೆಳಗಾವಿ, ಏಪ್ರಿಲ್ 30: ಸದಾ ಒಂದಿಲ್ಲೊಂದು ವಿವಾದದಿಂದಲೇ ಹೆಸರಾಗಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ, ಕಾಂಗ್ರೆಸ್ ಮೇಲೆ ಮತ್ತೆ ಟೀಕಾ ಪ್ರಹಾರ ನಡೆಸಿದ್ದಾರೆ.

ಬೆಳಗಾವಿಯ ಕಿತ್ತೂರು ತಾಲೂಕಿನ ತಿಗದೊಳ್ಳಿ ಎಂಬಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಉತ್ತರ ಕನ್ನಡ ಸಂಸದ ಹೆಗಡೆ, 'ಕಾಂಗ್ರೆಸ್ ಒಂದು ನಾಟಕದ ಕಂಪನಿ ಇದ್ದಂತೆ' ಎಂದು ಲೇವಡಿ ಮಾಡಿದ್ದಾರೆ.

"ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಮಸೀದಿಗೆ ಹೋದಾಗ ಸ್ಕಲ್ ಕ್ಯಾಪ್ ಧರಿಸುತ್ತಾರೆ, ಚರ್ಚಿಗೆ ಹೋದಾಗ ಕ್ರಾಸ್ ಧರಿಸುತ್ತಾರೆ. ಅವರಿಗೆ ಈಗ ಹಿಂದು ಧರ್ಮದ ಬೆಲೆ ಅರ್ಥವಾಗಿದೆ. ಅದಕ್ಕೆಂದೇ ಅವರೀಗ ಮಠ, ಮಂದಿರ ಸುತ್ತುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

Anant Kumar Hegde calls Congress a theatre company

"ಕಾಂಗ್ರೆಸ್ಸಿಗರಿಗೆ ನಾಟಕ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅವರಿಗೆ ಯಾವುದೇ ನೈತಿಕತೆ ಇಲ್ಲ. ಅವರಿಗೆ ಎಲ್ಲಿಗೆ ಹೋಗಬೇಕು, ಯಾವ ನಿಯಮ ಪಾಲಿಸಬೇಕು, ಗುರಿ ಏನು ಎಂಬುದೇ ಗೊತ್ತಿಲ್ಲ. ಕಳೆದ 70 ವರ್ಷಗಳಿಂದ ನಾಟಕ ಮಾಡುತ್ತಲೇ ಭಾರತವನ್ನು ಆಳಿದ್ದಾರೆ. ಈ ನಾಟಕ ನಮ್ಮ ದೇಶದ ಭವಿಷ್ಯದಲ್ಲಿ ಪುನರಾವರ್ತನೆ ಆಗಬಾರದು" ಎಂದು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+