ಆಂಬಿಡೆಂಟ್ ಪ್ರಕರಣ ಸಿಬಿಐಗೆ ಒಪ್ಪಿಸಿ: ಸಿಟಿ ರವಿ
ಬೆಳಗಾವಿ, ಡಿಸೆಂಬರ್ 19: ಆಂಬಿಡೆಂಟ್ ಪ್ರಕರಣದ ಸಿಬಿಐಗೆ ಒಪ್ಪಿಸಿದರೆ ಈಗಿರುವ ಮೂರು-ನಾಲ್ಕು ಸಚಿವರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಸಿಟಿ.ರವಿ ಹೇಳಿದರು.
ಅಧಿವೇಶನದಲ್ಲಿ ಆಂಬಿಡೆಂಟ್ ಪ್ರಕರಣದ ವಿಷಯವಾಗಿ ಸರ್ಕಾರವನ್ನು ಕುಟುಕಿದ ಅವರು, 'ಆಂಬಿಡೆಂಟ್ ಪ್ರಕರಣದಲ್ಲಿ ಹಣ ಕಳೆದುಕೊಂಡ ಜನರಿಗೆ ನ್ಯಾಯ ಒದಗಿಸಬೇಕಾದ ಪೊಲೀಸರೇ ಲಂಚ ಪಡೆದಿದ್ದಾರೆ ಎಂಬ ಸುದ್ದಿ ಇದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಡೆದು ಅಪರಾಧಿಗಳ ರಕ್ಷಣೆಗೆ ಪೊಲೀಸರೆ ನಿಂತಿದ್ದಾರೆ, ಇದು ಬಹಳ ಗಂಭೀರ ವಿಚಾರ ಎಂದು ಹೇಳಿದರು.

ಆಂಬಿಡೆಂಟ್ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ಕೇಳಿದ್ದೇವೆ. ಪ್ರಕರಣದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಮೂರ್ನಾಲ್ಕು ಸಚಿವರು ಸಹ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಆಂಬಿಡೆಂಟ್ ಪ್ರಕರಣವನ್ನು ಸರ್ಕಾರವು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿಯ ಆಗ್ರಹವಾಗಿದೆ, ಸಿಬಿಐಗೆ ಪ್ರಕರಣ ಒಪ್ಪಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಅವರು ಹೇಳಿದರು.












Click it and Unblock the Notifications