ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಕ್ ಬ್ಯಾಕ್ ಕೇಸ್, ಯಡಿಯೂರಪ್ಪ ಹಾಗೂ ಫ್ಯಾಮಿಲಿ ನಿರಾಳ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 26 : ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧದ ಕಿಕ್ ಬ್ಯಾಕ್ ಪ್ರಕರಣದ ತೀರ್ಪು ಬುಧವಾರ 11.09ಕ್ಕೆ ಹೊರ ಬಂದಿದೆ. ಯಡಿಯೂರಪ್ಪ ಅವರು ಎಲ್ಲಾ ಐದು ಆರೋಪಗಳಿಂದ ದೋಷಮುಕ್ತಗೊಂಡಿದ್ದಾರೆ.

11.15: ಬಿಎಸ್ ಯಡಿಯೂರಪ್ಪ ಹಾಗೂ ಇತರೆ ಆರೋಪಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿರುವ ಆರೋಪಗಳನ್ನು ಸಾಬೀತು ಪಡಿಸಲು ಸೂಕ್ತ ಸಾಕ್ಷಿಗಳಿಲ್ಲದ ಕಾರಣ, ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾ. ಧರ್ಮಗೌಡರ್ ಅವರು ತೀರ್ಪು ಪ್ರಕಟಿಸಿದ್ದಾರೆ. [2012:ಯಡಿಯೂರಪ್ಪ ಹಾಗೂ ಕುಟುಂಬಕ್ಕೆ ಜಾಮೀನು]

11.10: ಯಡಿಯೂರಪ್ಪ ಹಾಗೂ ಅವರ ಮಕ್ಕಳ ಪ್ರೇರಣಾ ಟ್ರಸ್ಟ್ ತನ್ನ ಅದಾಯವನ್ನು ಬಹುಪಾಲು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿದೆ.ಟ್ರಸ್ಟಿಗೆ ಯಾವುದೇ ಲಂಚದ ಮೊತ್ತ ಬಂದಿಲ್ಲ ಎಂದು ಯಡಿಯೂರಪ್ಪ ಅವರ ಪರ ವಕೀಲ ಸಿವಿ ನಾಗೇಶ್ ರಿಂದ ವಾದಿಸಿದರು. [ಯಡಿಯೂರಪ್ಪಗೆ ಮತ್ತೆ 5 ಡಿನೋಟಿಫಿಕೇಷನ್ ಕಂಟಕ]

Kickback case: BS Yeddyurappa Prerana Trust Corruption CBI Court updates


11.09:
ಎಲ್ಲಾ 5 ಪ್ರಕರಣಗಳಲ್ಲೂ ಯಡಿಯೂರಪ್ಪ ಅವರನ್ನು ದೋಷಮುಕ್ತಗೊಳಿಸಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
10.56:
ಒಟ್ಟು ಐದು ಪ್ರಕರಣದ ವಿಚಾರಣೆ ಹಾಗೂ ತೀರ್ಪು ಪ್ರಕರಣ. ಯಡಿಯೂರಪ್ಪ ಅವರ ಪರ ವಕೀಲ ಸಿವಿ ನಾಗೇಶ್ ರಿಂದ ವಾದ. [ರೆಡ್ಡಿ ಡೈಲಾಗ್ ರಿಪೀಟ್, 'ಸತ್ಯಮೇವ ಜಯತೆ' ಎಂದ ಯಡಿಯೂರಪ್ಪ]
10.55:
ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 7 ವರ್ಷ ಶಿಕ್ಷೆಯಾಗಲಿದೆ. 3 ವರ್ಷಗಳಿಗಿಂತ ಕಡಿಮೆ ಅವಧಿ ಶಿಕ್ಷೆ ಪ್ರಕಟವಾದರೆ, ಜಾಮೀನು ಪಡೆಯಬಹುದಾಗಿದೆ. ಇದಕ್ಕಾಗಿ ಶ್ಯೂರಿಟಿಗಳನ್ನು ಕೂಡಾ ಕರೆದುಕೊಂಡು ಬಂದಿರುವ ಯಡಿಯೂರಪ್ಪ.

10.50: ಕೋರ್ಟ್ ಆವರಣ ಪ್ರವೇಶಿಸಿದ ಬಿಎಸ್ ಯಡಿಯೂರಪ್ಪ, ಬಿವೈ ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸಂಸ್ಥೆ, ಸೌತ್ ವೆಸ್ಟ್ ಸಂಸ್ಥೆಯ ಅಧಿಕಾರಿಗಳು, ಮಾಜಿ ಸಚಿವ ರೇಣುಕಾಚಾರ್ಯ. [ಯಡಿಯೂರಪ್ಪ ಭವಿಷ್ಯ ನಿರ್ಧಾರ?]

10.45:
ಭ್ರಷ್ಟಾಚಾರ ಹಗರಣದ ತೀರ್ಪನ್ನು ನೀಡಲು ಸಿಬಿಐ ವಿಶೇಷ ನ್ಯಾಯಲಯ ಸಿದ್ಧವಾಗಿದೆ. ನ್ಯಾ. ಬಿಆರ್ ಧರ್ಮ ಆರ್ ಬಿ ಧರ್ಮಗೌಡ ಅವರು ಹಾಜರು.

10.42:
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ

10.40:
ಕೋರ್ಟ್ ಆವರಣದಲ್ಲಿ ಕಾರಿನಲ್ಲಿ ಕುಳಿತ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳು.

ಏನಿದು ಪ್ರಕರಣ: ಜಿಂದಾಲ್ ಸ್ಟೀಲ್ ವರ್ಕ್ಸ್, ಸೌತ್ ವೆಸ್ಟ್ ಮೈನಿಂಗ್ ಕಂಪನಿಗಳಿಗೆ ಗಣಿಗಾರಿಕೆ ಗುತ್ತಿಗೆ ನೀಡಲು ಯಡಿಯೂರಪ್ಪನವರು ಪ್ರೇರಣಾ ಟ್ರಸ್ಟ್, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಭಗತ್ ಹೋಂ ಕಂಪನಿಗಳ ಹೆಸರಿನಲ್ಲಿ 20 ಕೋಟಿ ರು. ಲಂಚ ಪಡೆದಿದ್ದರೆಂದು ಆರೋಪಿಸಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ತಮ್ಮ ಅಕ್ರಮ ಗಣಿಗಾರಿಕೆಯ ವರದಿಯಲ್ಲಿಯೂ ಪ್ರಸ್ತಾಪಿಸಿದ್ದರು.

ಆರೋಪಿಗಳು: ಯಡಿಯೂರಪ್ಪ, ಅವರ ಇಬ್ಬರು ಮಕ್ಕಳಾದ ಬಿ.ವೈ. ವಿಜಯೇಂದ್ರ, ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸ್ಟೀಲ್ ವರ್ಕ್ಸ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿ ನಿರ್ದೇಶಕರು ಒಟ್ಟು 13 ಜನ ಆರೋಪಿಗಳು.

ಬಿಎಸ್ ಯಡಿಯೂರಪ್ಪ ಅವರಿಗೆ ಗಣಿ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದ ಪ್ರಕರಣದಲ್ಲಿ ಹೈಕೋರ್ಟ್ ಡಿಸೆಂಬರ್ 10, 2012ರಲ್ಲಿ ಜಾಮೀನು ನೀಡಿತ್ತು.

(ಒನ್ಇಂಡಿಯಾ ಸುದ್ದಿ)

English summary
The Special CBI court today acquitted, B S Yeddyurappa in connection with the Rs 40 crore bribery case. The clean chit was also given to all others including his sons, B Y Raghavendra, Vijendra, his son-in-law, Sohan Kumar and others. In all there were 13 accused in the case. The court observed that it found no evidence to convict Yeddyurappa and others in the case. The CBI is likely to go in appeal against this verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X