ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ
ಬೆಂಗಳೂರು, ನ.3 : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭಾನುವಾರ ನೀರಿನ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಶಾಪಿಂಗ್ ಮಾಲ್ಗಳಿಗೆ ಮತ್ತು ಸೂಪರ್ ಬಜಾರ್ಗಳಿಗೆ ವಿಶೇಷ ಒಳಚರಂಡಿ ಶುಲ್ಕಗಳನ್ನು ವಿಧಿಸಲಾಗಿದೆ.
ಬೆಂಗಳೂರು ಜಲಮಂಡಳಿ ಕಳೆದ ಕೆಲವು ತಿಂಗಳ ಹಿಂದೆ ಸಲ್ಲಿಸಿದ್ದ ದರ ಏರಿಕೆ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದ್ದರಿಂದ ಗೃಹಪಯೋಗಿ ಮತ್ತು ವಾಣಿಜ್ಯ ಉದ್ದೇಶ ಬಳಸುವ ನೀರಿನ ದರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. [ಕಾವೇರಿ ನೀರಿನ ದರ ಏರಿಕೆ ಶಾಕ್]

ನೀರಿನ ದರದ ಜೊತೆಗೆ ಒಳಚರಂಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಮೊದಲ ಬಾರಿಗೆ ಶಾಪಿಂಗ್ ಮಾಲ್ಗಳು ಮತ್ತು ಸೂಪರ್ ಬಜಾರ್ಗಳಿಗೆ ವಿಶೇಷ ಒಳಚರಂಡಿ ದರಗಳನ್ನು ವಿಧಿಸಲಾಗಿದೆ. ಹೋಟೆಲ್ಗಳು ಪ್ರತಿ ತಿಂಗಳು 500 ರೂ. ಬದಲು 2000 ರೂ.ಗಳ ವಿಶೇಷ ಒಳಚರಂಡಿ ಶುಲ್ಕಗಳನ್ನು ಪಾವತಿ ಮಾಡಬೇಕಾಗಿದೆ.
ಕಳೆದ ಒಂಬತ್ತು ವರ್ಷಗಳ ಬಳಿಕ ದರ ಏರಿಕೆ ಮಾಡಿರುವ ತನ್ನ ನಿರ್ಧಾರವನ್ನು ಜಲಮಂಡಳಿ ಸಮರ್ಥಿಸಿಕೊಂಡಿದ್ದು, ವಿದ್ಯುತ್ ದರ ಏರಿಕೆ, ಕಾಮಗಾರಿಗಳಿಗೆ ಅನುದಾನದ ಅಗತ್ಯವಿರುವ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಹೇಳಿದೆ.
| ಗೃಹ ಬಳಕೆ ನೀರಿನ ದರ ಪಟ್ಟಿ | |||
| ಬಳಕೆ ಪ್ರಮಾಣ | ಹಳೇ ದರ | ಹೊಸ ದರ | |
| 0-8000 ಲೀಟರ್ | 6 ರೂ. | 7 ರೂ. | |
| 8000-25000 | 9 ರೂ. | 11 ರೂ. | |
| 25000-50000 | 15 ರೂ. | 26 ರೂ. | |
| 50000-75000 | 30 ರೂ. | 45 ರೂ. | |
| ಗೃಹೇತರ ನೀರಿನ ಬಳಕೆ ದರ | |||
| 0-10000 ಲೀ | 36 ರೂ. | 50 ರೂ. | |
| 10000-25000 ಲೀ | 39 ರೂ. | 57 ರೂ. | |
| 25000-50000 ಲೀ | 44 ರೂ. | 65 ರೂ. | |
| 50000-75000 ಲೀ | 51 ರೂ. | 76 ರೂ. | |
| 75000 ಲೀ ನಂತರ | 57 ರೂ. | 87 ರೂ. | |
| ಒಳಚರಂಡಿ ದರ | |||
| ಬಳಕೆ ಪ್ರಮಾಣ | ಹಳೇ ದರ | ಹೊಸ ದರ | |
| ಎಲ್ಲಾ ರೀತಿಯ ಹೋಟೆಲ್ | 500 ರೂ. | 2000 ರೂ. | |
| ದರ್ಶಿನಿ, ಕೆಫೆಟೇರಿಯಾ, ಕಾಫಿಬಾರ್ | 500 ರೂ. | 1000 ರೂ. | |
| 51ರಿಂದ 100 ಕೊಠಡಿಯ ಸ್ಟಾರ್ ಹೋಟೆಲ್ | 10000 ರೂ. | 15000 ರೂ. | |
| 50ಕ್ಕಿಂತ ಕಡಿಮೆ ಕೊಠಡಿಗಳ ಹೋಟೆಲ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ | |||
| 100ಕ್ಕಿಂತ ಹೆಚ್ಚು ಕೊಠಡಿಗಳು | 10000 ರೂ. | 20000 ರೂ. | |
-
ಬೆಂಗಳೂರಿನ ಸೋಂಪುರ ಕೆರೆ ಉಳಿವಿಗೆ ಜಲಮಂಡಳಿ ಮಾಸ್ಟರ್ ಪ್ಲಾನ್, ಸಂಸ್ಕರಣಾ ಘಟಕಕ್ಕೆ ಕಲುಷಿತ ನೀರು -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್











Click it and Unblock the Notifications