2 ಲಕ್ಷ ಖರ್ಚು ಮಾಡಿ ಬಿಬಿಎಂಪಿ ಹಿಡಿದದ್ದು 20 ಇಲಿ!
ಬೆಂಗಳೂರು,ಜು.10: ಅಕ್ರಮಗಳಿಗೆ ಹೆಸರಾಗಿರುವ ಬಿಬಿಎಂಪಿ ಅಧಿಕಾರಿಗಳು ಈಗ ಇಲಿ ಹಿಡಿಯುದರಲ್ಲೂ ಅಕ್ರಮ ಮಾಡಿದ್ದಾರೆ. ಬಿಬಿಎಂಪಿ ಕಚೇರಿಯ ಅಧಿಕಾರಿಗಳು 2 ಲಕ್ಷ ಖರ್ಚು ಮಾಡಿ ಅತಿ ಹೆಚ್ಚು 20 ಇಲಿಗಳನ್ನು ಹಿಡಿದಿದ್ದಾರೆ.!
ಪಾಲಿಕೆ ಅಧಿಕಾರಿಗಳು ನಡೆಸಿರುವ ಇಂತಹ ದುಂದು ವೆಚ್ಚದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲೂ 2 ಲಕ್ಷದಲ್ಲಿ 20 ಇಲಿ ಹಿಡಿದ ಪ್ರಕರಣ ಪ್ರಸ್ತಾಪವಾಗಿ ಭಾರೀ ಚರ್ಚೆಗೆ ಗ್ರಾಸವಾಯಿತು.
ಈ ಅಕ್ರಮವನ್ನು ಬಯಲು ಮಾಡಿದ ಯಡಿಯೂರು ಕಾರ್ಪೋರೇಟರ್ ಎನ್.ಆರ್. ರಮೇಶ್ ಮಾತನಾಡಿ ಅಧಿಕಾರಿಗಳು ಎಷ್ಟು ಭ್ರಷ್ಟರಾಗಾಗಿದ್ದಾರೆಂದರೆ ಇಲಿ ಹಿಡಿಯುವ ಹೆಸರಿನಲ್ಲೂ ಅಕ್ರಮ ಮಾಡುತ್ತಿದ್ದಾರೆ. ಎಷ್ಟು ಇಲಿಗಳನ್ನು ಹಿಡಿದಿದ್ದೀರಿ ಎಂದು ಆರ್ಟಿಐ ಅಡಿಯಲ್ಲಿ ಪ್ರಶ್ನಿಸಿ ಅಧಿಕಾರಿಗಳಿಂದ ಲಿಖಿತ ಉತ್ತರ ಬಯಸಿ ಪತ್ರ ಬರೆದಿದ್ದೆವು. ಈ ವೇಳೆ ಅಧಿಕಾರಿಗಳು 2 ಲಕ್ಷ ರೂ. ವೆಚ್ಚ ಮಾಡಿ , 20 ಇಲಿ ಹಿಡಿಯಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಮೆರಾ, ಮೇಜುಗಳನ್ನು ಖರೀದಿಯಲ್ಲೂ ಅಧಿಕಾರಿಗಳು ಅವ್ಯವಹಾರ ನಡೆದಿದ್ದು, 6-7 ಅಡಿ ಉದ್ದದ ತೆಳುವಾದ ಅಲ್ಮೆರಾಗಳನ್ನು ಖರೀದಿಸಿ 16-17 ಸಾವಿರ ಬಿಲ್ ಮಾಡುತ್ತಾರೆ ಎಂದು ರಮೇಶ್ ಆರೋಪಿಸಿದರು.
ಬಿಬಿಎಂಪಿ ಇಲಿಗಳ ನಿಯಂತ್ರಣಕ್ಕೆ 08-10-12 ರಿಂದ 08-01-2013 ರವರೆಗೆ 99,000 ರೂ., 01-08-13 ರಿಂದ 31-10-13ರವರೆಗೆ 99,000 ವೆಚ್ಚ ಮಾಡಿರುವ ದಾಖಲೆಯನ್ನು ಎನ್.ಆರ್. ರಮೇಶ್ ಸಭೆಯಲ್ಲಿ ಪ್ರದರ್ಶಿಸಿದರು.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು












Click it and Unblock the Notifications