ಬೆಂಗಳೂರು ಕ್ಲಬ್ ನಿಂದ ಕರ್ನಾಟಕ ಸರ್ಕಾರಕ್ಕೆ ಸವಾಲ್
ಬೆಂಗಳೂರು ಜುಲೈ 22: ನಗರದ ಐತಿಹಾಸಿಕ, ಶ್ರೀಮಂತ ಕ್ಲಬ್ ಗಳಲ್ಲಿ ಒಂದಾದ ಬೆಂಗಳೂರು ಕ್ಲಬ್ ಈಗ ಸರ್ಕಾರದ ಕೈವಶವಾಗುವ ಸಮಯ ಬಂದಿದೆ. ಆದರೆ, ಅಳಿದುಳಿರುವ ಒಂದು ವಾರದಲ್ಲಿ ಕ್ಲಬ್ ಅಸ್ತಿತ್ವ, ಮಾಲೀಕತ್ವ ಉಳಿಸಿಕೊಳ್ಳಲು ಕ್ಲಬ್ ಸದಸ್ಯರು ಸಿದ್ದರಾಗಿದ್ದು, ಸರ್ಕಾರದ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.
ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಮಹೇಶ್‌ಬಾಬು ಅವರ ಆದೇಶದಂತೆ ಈ ವಾರದಲ್ಲೇ ಬೆಂಗಳೂರು ಕ್ಲಬ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಕ್ಲಬ್ ನ ಕಾರ್ಯದರ್ಶಿ ಕೆ.ಡಿ ಮೂರ್ತಿ ಅವರು ನಮಗೆ ಇನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ಬೆಂಗಳೂರು ಕ್ಲಬ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂದಿದ್ದಾರೆ. [ಸರ್ಕಾರದ ವಶಕ್ಕೆ ಐತಿಹಾಸಿಕ, ಶ್ರೀಮಂತ ಬೆಂಗಳೂರು ಕ್ಲಬ್]

ಕಾನೂನು ಹೋರಾಟ ಮುಂದುವರೆಯಲಿದೆ: ಬೆಂಗಳೂರು ಕ್ಲಬಿನ ವಿವಾದಿತ 13 ಎಕರೆ ಭೂಮಿ ಹಾಗೂ ಕ್ಲಬಿನ ಮಾಲೀಕತ್ವದ ಬಗ್ಗೆ ಬಂದಿರುವ ನೋಟಿಸ್ ಪ್ರಶ್ನಿಸಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಹಾಕಲಾಗಿದೆ. ಕಂದಾಯ ಇಲಾಖೆ ಈ ಜಮೀನಿನ ಮಾಲೀಕತ್ವ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಇನ್ನೂ ದಾಖಲೆ ಒದಗಿಸಬೇಕಿದೆ ಎಂದು ಕೆ.ಡಿ ಮೂರ್ತಿ ಹೇಳಿದ್ದಾರೆ. [ಬೆಂಗಳೂರು ಕ್ಲಬ್ಬಿಗೆ ಚರ್ಚಿಲ್ ಬಾಕಿ ಎಷ್ಟು ಗೊತ್ತೆ?]
1896ರಲ್ಲಿ ಸ್ಥಾಪನೆಯಾದ ಬೆಂಗಳೂರು ಯುನೈಟೆಡ್ ಸರ್ವೀಸ್ ಕ್ಲಬ್ ಮೊದಲಿಗೆ ಸೇನಾಧಿಕಾರಿಗಳ ಸೇವೆ ಬಳಕೆಯಾಗುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸಾರ್ವಜನಿಕರಿಗೆ ಪ್ರವೇಶ ನೀಡಲಾಯಿತು. 19ನೇ ಶತಮಾನದ ಆರಂಭದಿಂದ ಇಲ್ಲಿ ತನಕ ಕ್ಲಬ್ ನ ಅಸ್ತಿತ್ವದ ಬಗ್ಗೆ ಇರುವ ಖಾತೆ (ಡೀಡ್), ಎಂಕ್ಬ್ರಾನ್ಸ್ ಸರ್ಟಿಫಿಕೇಟ್, ಆಸ್ತಿ ತೆರಿಗೆ ರಸೀತಿ ಹಾಗೂ ಇನ್ನಿತರ ವಿವರಗಳನ್ನು ಕೋರ್ಟಿಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಬೆಂಗಳೂರು ಕ್ಲಬ್ ಸದಸ್ಯರು ಹೇಳಿದ್ದಾರೆ.
2015ರ ಜುಲೈ 2 ರಂದು ಕ್ಲಬಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧಿಸಲಾಯಿತು. ಮದ್ಯ ಮಾರಾಟ ಲೈಸನ್ಸ್ ನವೀಕರಣ ಅರ್ಜಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ತಿರಸ್ಕರಿಸಿತು. ಮರುದಿನವೇ ಕ್ಲಬ್ಬಿನಲ್ಲಿದ್ದ ಎಲ್ಲಾ ಮದ್ಯವನ್ನು ಜಪ್ತಿ ಮಾಡಿ, ಅಬಕಾರಿ ಇಲಾಖೆ ವಶಕ್ಕೆ ನೀಡಲಾಯಿತು ಎಂದು ಕ್ಲಬ್ ನ ಹಾಲಿ ಅಧ್ಯಕ್ಷ ಜಿ.ವಿ ರಾಧಾಕೃಷ್ಣ ಹೇಳಿದರು. 13 ಎಕರೆಗೆ 5,662 ಕೋಟಿ ರೂ.ಗಿಂತ ಹೆಚ್ಚು ಬೆಲೆ ಇದೆ ಎಂದು ಅಂದಾಜಿಸಲಾಗಿದೆ.(ಐಎಎನ್ಎಸ್)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications