ಬಿಬಿಎಂಪಿ ಚುನಾವಣೆಯಲ್ಲಿ ನೋಟಾ ಅವಕಾಶ ಏಕಿಲ್ಲ?
ಬೆಂಗಳೂರು, ಆಗಸ್ಟ್ 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನೋಟಾ ಬಳಸುವ ಅವಕಾಶವನ್ನು ಮತದಾರರಿಗೆ ಒದಗಿಸಬೇಕು ಎಂದು ಹೈಕೋರ್ಟ್‌ನಲ್ಲಿ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಲಿದೆ. [ಬಿಬಿಎಂಪಿ ಚುನಾವಣೆ ಪ್ರಚಾರದ ಚಿತ್ರಗಳು]
ಬಿಬಿಎಂಪಿ ಚುನಾವಣೆಯಲ್ಲಿ ನೋಟಾ (NOTA- None Of The Above) ಅವಕಾಶವನ್ನು ಏಕೆ ನೀಡಿಲ್ಲ? ಎಂದು ಪ್ರಶ್ನಿಸಿ ಕೆಲವು ಯುವಕರು ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ. ಈಗಾಗಲೇ ಈ ಯುವಕರು ನೋಟಾಗೆ ಅವಕಾಶ ನೀಡಬೇಕು ಎಂದು ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. [ಚುನಾವಣೆಯಲ್ಲಿ 'ನಕಾರಾತ್ಮಕ' ಮತದಾನ ಅವಕಾಶ]

ಚುನಾವಣೆಯಲ್ಲಿ ನೋಟಾ ವ್ಯವಸ್ಥೆಯನ್ನು ಏಕೆ ನೀಡಿಲ್ಲ? ಎಂದು ಪ್ರಶ್ನಿಸಿ ಯುಕವರು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಇಂದು ಈ ಕುರಿತು ಹೈಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಲಿದ್ದಾರೆ. ಆ.22ರಂದು ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ಕೋರ್ಟ್ ಈ ಕುರಿತು ಆದೇಶ ನೀಡಿದರೆ, ನೋಟಾ ಜಾರಿಗೆ ಬರುವ ಸಾಧ್ಯತೆ ಇದೆ.[ಬಿಬಿಎಂಪಿ ಚುನಾವಣೆ, ಬಿಜೆಪಿ ಪ್ರಣಾಳಿಕೆ ಓದಿ]
ಸುಪ್ರೀಂಕೋರ್ಟ್ ಚುನಾವಣೆಯಲ್ಲಿ ನೋಟಾ ಅವಕಾಶ ನೀಡಬೇಕು ಎಂದು ತೀರ್ಪು ನೀಡಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ ನಕಾರಾತ್ಮಕ ಮತದಾನ ಮಾಡುವ ಅವಕಾಶವನ್ನು ಮೊಟ್ಟ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಕಲ್ಪಿಸಲಾಗಿತ್ತು.











Click it and Unblock the Notifications