ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಶಾಸಕ ಸೋಮಶೇಖರ್ ರೆಡ್ಡಿ ಕೊಟ್ಟ ಉತ್ತರವೇನು?
ಬಳ್ಳಾರಿ, ಜನವರಿ 06: ಸಚಿವ ಪುಟ್ಟ ರಂಗಶೆಟ್ಟಿ ಆಪ್ತರ ಬಳಿ ಹಣ ಸಿಕ್ಕರೂ ಪುಟಗೋಸಿ ಹಣ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳ್ತಾರೆ. ಪುಟ್ಟರಂಗಶೆಟ್ಟಿಗೆ ಆ ಹಣ ಪುಟಗೋಸಿಯಾದ ಕಾರಣ ವಿಧಾನಸೌಧಕ್ಕೆ ಕಳಿಸಿರಬಹುದು. ಸರ್ಕಾರ ಜನವಿರೋಧಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಬಳ್ಳಾರಿಯಲ್ಲಿ ಮಾತನಾಡಿದ ಅವರು ಈ ಕೂಡಲೇ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು ಎಂದರು.
ಸಂಕ್ರಾಂತಿ ನಂತರ ಬಿಜೆಪಿ ಸರಕಾರ ರಚನೆ ಮಾಡ್ತೀರಾ? ಎಂಬ ಪ್ರಶ್ನೆಗೆ ಸೋಮಶೇಖರ್ ರೆಡ್ಡಿ ಜೈ ಶ್ರೀರಾಮ್ ಎಂದು ಉತ್ತರಿಸಿ ಆಕಾಶ ನೋಡಿ ಕೈ ಮುಗಿದರು.

ಸರಕಾರ ಹಂಪಿ ಉತ್ಸವ ಮಾಡಲು ಮೀನಾಮೇಷ ಎಣಿಸುತ್ತಿದೆ. ಜನವರಿ ತಿಂಗಳಲ್ಲಿ ಹಂಪಿ ಉತ್ಸವ ಮಾಡದೇ ಇದ್ದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಹಂಪಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇನೆ. ಹಂಪಿ ಉತ್ಸವ ಮಾಡ್ತೀವಿ ಅಂತ ಸರ್ಕಾರ ಹೇಳಿತ್ತು, ಆದರೆ ಮಾಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ವಿಜಯನಗರ ಗತವೈಭವ ಸಾರುವ ಹಂಪಿ ಉತ್ಸವ ಆಚರಣೆ ನಿರ್ಲಕ್ಷ ಖಂಡನೀಯ ಎಂದು ಸೋಮಶೇಖರ್ ರೆಡ್ಡಿ ಆರೋಪಿಸಿದರು.












Click it and Unblock the Notifications