Darshan: ಅಯ್ಯೋ ಡಿ ಬಾಸ್! ದರ್ಶನ್‌ ಸ್ಥಿತಿ ನೋಡಿ ಮರುಗಿದ ಅಭಿಮಾನಿಗಳು

ರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲು ಸೇರಿರುವ ನಟ ದರ್ಶನ್‌ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಮೊದಲೇ ಬೆನ್ನು ನೋವಿನಿಂದ ಬಳಲುತ್ತಿರುವ ಅವರಿಗೆ ಇದೀಗ ನೋವು ಹೆಚ್ಚಾಗಿದ್ದು ಓಡಾಡಲು ಕಷ್ಟಪಡುವಂತಾಗಿದೆ. ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಸಿಗುತ್ತದೆ ಎಂದು ಕಾದಿದ್ದ ಅವರಿಗೆ ನಿರಾಸೆಯಾಗಿದ್ದು, ಇದೀಗ ಜಾಮೀನು ಪಡೆಯಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಸದ್ಯ ದರ್ಶನ್ ಪರಿಸ್ಥಿತಿ ನೋಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.

ಹೊರಗಡೆ ಇದ್ದಾಗ ಪ್ರತಿದಿನ ಜಿಮ್ ಮಾಡುತ್ತಾ, ಪೌಷ್ಠಿಕ ಆಹಾರ ತಿನ್ನುತ್ತಾ ಆರೋಗ್ಯವನ್ನು ಕಾಪಾಡಿಕೊಂಡಿದ್ದ ದರ್ಶನ್‌ಗೆ ಇದೀಗ ಜೈಲು ಊಟಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿದೆ ಅದರ ಜೊತೆಗೆ ಬೆನ್ನು ನೋವು ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ದರ್ಶನ್‌ಗೆ ಬೆನ್ನು ನೋವು ಹೆಚ್ಚಿದ್ದರೂ, ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ.

Darshan Back Pain Struggles Leave Fans in Tears

ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದ ಅವರು ನೋವು ನಿವಾರಕ ಮಾತ್ರೆಗಳನ್ನು ಪಡೆದಿದ್ದರು. ಆದರೆ ಸೆಷನ್ಸ್‌ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವ ಅವರ ಯೋಜನೆ ತಲೆಕೆಳಗಾಗಿತ್ತು. ಬಳಿಕ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು.

ಫಿಸಿಯೋಥೆರಪಿ ಬಳಿಕವೂ ಅವರ ಬೆನ್ನು ನೋವು ಕಡಿಮೆಯಾಗದ ಹಿನ್ನಲೆ ಅವರಿಗೆ ಮೆಡಿಕಲ್ ಬೆಡ್ ಮತ್ತು ದಿಂಬು ಒದಗಿಸಲಾಗಿದೆ. ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚನೆ ಕೊಟ್ಟ ಬಳಿಕ, ಎಂಆರ್ ಐ ಸ್ಯ್ಕಾನಿಂಗ್ ಮಾಡಲು ದರ್ಶನ್ ಒಪ್ಪಿದರು. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಪರ ವಕೀಲರು, ದರ್ಶನ್‌ಗೆ ಬೆನ್ನು ನೋವು ಹೆಚ್ಚಿದ್ದು ಚಿಕಿತ್ಸೆ ಪಡೆಯಬೇಕಾಗಿರುವ ಕಾರಣ ಜಾಮೀನು ನೀಡಬೇಕು ಎಂದು ಕೇಳಿದ್ದಾರೆ. ಹೈಕೋರ್ಟ್ ದರ್ಶನ್‌ರ ವೈದ್ಯಕೀಯ ವರದಿ ಕೊಡುವಂತೆ ಕೇಳಿದೆ.

ಜೈಲು ಅಧಿಕಾರಿಗಳು ಇದೀಗ ದರ್ಶನ್‌ಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಿದ್ದು, ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 28ರಂದು ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್‌ರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಅವರಿಗೆ ಜಾಮೀನು ಕೊಡುವ ಬಗ್ಗೆ ಕೋರ್ಟ್ ತೀರ್ಮಾನ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+