Breaking: ಬಳ್ಳಾರಿ ಬಳಿ ಕಾಲುವೆಗೆ ಬಿದ್ದ ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ, 3 ಸಾವು
ಬಳ್ಳಾರಿ, ಸೆಪ್ಟೆಂಬರ್ 14:ಕೃಷಿ ಕಾರ್ಮಿಕ ಕರೆದೊಯುತ್ತಿದ್ದ ಆಟೋ HLC ಕಾಲುವಗೆ ಬಿದ್ದು, ಮೂವರು ಸಾವನ್ನಪ್ಪಿದ್ದು, ಮೂವರು ಕಾಣೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಒಟ್ಟು ಚಾಲಕ ಸೇರಿ ಒಟ್ಟು 11 ಮಂದಿ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ ಒಟ್ಟು 5 ಜೀವ ಉಳಿಸಿಕೊಂಡಿದ್ದಾರೆ.
ಬುಧವಾರ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಕಾಲುವೆಯಲ್ಲಿ ಪಲ್ಟಿಯಾಗಿದೆ. ಆಟೋದ ಮುಂದಿನ ಚಕ್ರ ಕಲ್ಲಿನ ಮೇಲೆ ಹತ್ತಿದ್ದರಿಂದ ಆಟೋ ಕಾಲುವಿಗೆ ಬಿದ್ದಿದೆ.

ಚಾಲಕ ಭೀಮಾ ಮತ್ತು ಬಾಲಕ ಮಹೇಶ ಆಟೋ ಬಿದ್ದಾಕ್ಷಣ ಹೊರಗಡೆ ಜಿಗಿದ್ದಿದ್ದಾರೆ. ಕೂಗಾಟ ಕೇಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ದಾವಿಸಿ ದಮ್ಮೂರು ಎರ್ರೆಮ್ಮ, ಹೇಮಾವತಿ, ಶಿಲ್ಪ ಎಂಬುವವರನ್ನು ರಕ್ಷಿಸಿದ್ದಾರೆ. ದುರ್ಗಮ್ಮ, ನಿಂಗಮ್ಮ ಪುಷ್ಪವತಿ ಎಂಬುವವರು ಸಾವನಪ್ಪಿದ್ದರೆ, ಆಟೋದಲ್ಲಿದ್ದ ಕುಡತಿನಿ ಲಕ್ಷ್ಮಿ, ಹುಲಿಗೆಮ್ಮ, ನಾಗರತ್ನಮ್ಮ ಎಂಬ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ಸ್ಥಳಕ್ಕೆ ಎಡಿಸಿ ಮಂಜುನಾಥ್, ಎಸಿ ಡಾ.ಆಕಾಶ ಶಂಕರ್, ಎಸ್ಪಿ ಸೈದುಲಾ ಅಡಾವತ್, ಡಿವೈಎಸ್ಪಿ ಶೇಖರಪ್ಪ, ಸತ್ಯನಾರಾಯಣ ರಾವ್, ಇನ್ಸ್ ಪೆಕ್ಟರ್ ನಿರಂಜನ್, ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕಾಣೆಯಾದವರ ಶೋಧ ಕಾರ್ಯ ನಡೆಸುತ್ತಿದೆ.












Click it and Unblock the Notifications