ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿಗೆ ಪತ್ರ ಬರೆದು ಪರಿಹಾರ ಕೇಳಿದ ಬಾಗಲಕೋಟೆ ಯುವಕ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಸೆಪ್ಟೆಂಬರ್ 19: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಸಂಭವಿಸಿ ಜನರ ಬದುಕು ಬೀದಿಗೆ ಬಂದಿದೆ. ಆದರೆ ಪರಿಹಾರ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಗ್ದಾಳಿ ನಡೆಯುತ್ತಲೇ ಇದೆ. ಈ ನಡುವೆ ಹಳ್ಳಿ ಹೈದನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಪರಿಹಾರಕ್ಕಾಗಿ ಆಗ್ರಹಿಸಿ ಗಮನ ಸೆಳೆದಿದ್ದಾನೆ.

ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಸರ್ಕಾರವಿದ್ದರೂ ಬೀದಿ ಪಾಲಾದ ಕನ್ನಡ ಜನರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಸರ್ಕಾರವಿದ್ದರೂ ಬೀದಿ ಪಾಲಾದ ಕನ್ನಡ ಜನ

ಪ್ರವಾಹ ಸಂಭವಿಸಿ ಇಷ್ಟು ದಿನಗಳಾದರೂ ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡಲ್ಲ. ಹೀಗಾಗಿ ಕೂಡಲೇ ಪರಿಹಾರ ನೀಡುವಂತೆ ಬಾಗಲಕೋಟೆ ತಾಲೂಕು ಹಂಡರಗಲ್ಲ ಗ್ರಾಮದ ಎಂ.ಎಸ್.ಗಂಗೂರ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದಾನೆ.

Bagalkot Young Man Wrote Letter To Narendra Modi Demanding Floodrelief

ನೆರೆ ಹಾಗೂ ಬರದಿಂದ ಕರ್ನಾಟಕಕ್ಕೆ ಆಗಿರುವ ಹಾನಿಗೆ ಪರಿಹಾರ ಕೊಡಿ. ನೆರೆಯಿಂದ ರಾಜ್ಯದ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಸಾವಿರಾರು ಹಳ್ಳಿಗಳು ಮುಳುಗಿ ಅಪಾರ ಹಾನಿಯಾಗಿದೆ. ಜನರ ಕಷ್ಟವನ್ನು ಕಣ್ಣಿಂದ ನೋಡಲು ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರ ಬಾಳು ಕಷ್ಟವಾಗಿದೆ. ಹೀಗಾಗಿ ರಾಜ್ಯದ ನೆರವಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಪರಿಹಾರ ಘೋಷಣೆ ಮಾಡಬೇಕು ಎಂದು ಪ್ರಧಾನಿಗೆ ಪತ್ರದಲ್ಲಿ ಮನವಿ ಮಾಡಿದ್ದಾನೆ.

ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಾವಿರ ಕೋಟಿ ಬಿಡುಗಡೆಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಾವಿರ ಕೋಟಿ ಬಿಡುಗಡೆ

ಮಳೆ ಒಂದೆಡೆ ಸಮಸ್ಯೆ ನೀಡಿದ್ದರೆ, ಬರದಿಂದಾಗಿ ಇನ್ನೂ ಕೆಲವೆಡೆ ರೈತರು ಕಷ್ಟದಲ್ಲಿದ್ದಾರೆ. ಹೀಗಾದರೆ ರೈತನ ಮುಂದಿನ ಬಾಳು ಹೇಗಿರುತ್ತದೆ ಎಂದೂ ಪ್ರಶ್ನಿಸಿದ್ದಾನೆ.

English summary
A Young man M.S.Gangura of handaragalla of bagalkot has written letter to Prime minister narendra modi demanding flood relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X