ಲಾಭಕ್ಕಾಗಿ ಮೋದಿ ರಾಜಕಾರಣಿಗಳನ್ನು ಕೊಲ್ಲಲೂ ರೆಡಿ: ನಾಯ್ಡು ವಿವಾದ

ಅಮರಾವತಿ, ಮೇ 11: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಎಂದಿನಂತೆ ತಮ್ಮ ವಾಗ್ದಾಳಿ ಮುಂದುವರಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, "ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಮೋದಿ ಏನು ಬೇಕಾದರೂ ಮಾಡುತ್ತಾರೆ. ರಾಜಕಾರಣಿಗಳನ್ನೂ ಕೊಲ್ಲಲೂ ಅವರು ಸಿದ್ಧರು" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಯಾರನ್ನಾದರೂ ಸಾಯಿಸಲೂ ಬಲ್ಲರು, ಅಥವಾ ಸತ್ತವರನ್ನು ವಾಪಸ್ ಕರೆತರಲೂ ಅವರು ಸಿದ್ಧರು" ಎಂದು ವಿವಾದಾತ್ಮಕ ಹೇಳಿಕೆಯನ್ನು ನಾಯ್ಡು ನೀಡಿದ್ದಾರೆ.

ನಿಧನರಾಗಿರುವ ರಾಜಕಾರಣಿಗಳನ್ನು ಅವರು ರಾಜಕೀಯಕ್ಕೆ ಎಳೆಯುತ್ತಾರೆ, ಸಾಲದೆಂಬಂತೆ ಅವರ ಕುಟುಂಬವನ್ನೂ ವೃಥಾ ರಾಜಕೀಯಕ್ಕೆ ಎಳೆಯುತ್ತಾರೆ ಎಂದು ನಾಯ್ಡು ಕಿಡಿ ಕಾರಿದರು.

Modi can Kill or bring back dead political leaders: Chandrababu Naidu

"ಅಧಿಕಾರಕ್ಕಾಗಿ ಧರ್ಮಯುದ್ದ ನಡೆಸಲೂ, ರಾಜಕಾರಣಿಗಳನ್ನು ಕೊಲ್ಲಲೂ ಅವರು ಸಿದ್ಧರು ಎಂದು ಇದೇ ಸಂದರ್ಭದಲ್ಲಿ ನಾಯ್ಡು ಹೇಳಿದರು.

ಚುನಾವಣಾ ಆಯೋಗ ಸಹ ಮೋದಿ, ಅಮಿತ್ ಶಾ ಪರವಾಗಿದೆ. ಮೋದಿ, ಶಾ ವಿಷಯ ಬಂದಾಗ ಅದು ಯಾವುದನ್ನೂ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕರೆಯುವುದಿಲ್ಲ ಎಂದು ನಾಯ್ಡು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+