ಕೊನೆಯ ಕ್ಷಣದಲ್ಲಿ ನಿರಾಸೆ! ಮೋದಿ ಪ್ರಮಾಣವಚನಕ್ಕೆ ಗೈರಾಗಲಿದ್ದಾರೆ ಜಗನ್, ಕೆಸಿಆರ್
Recommended Video
ಅಮರಾವತಿ, ಮೇ 30: ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೊರಡಲು ಸಿದ್ಧರಾಗಿದ್ದ ಜಗನ್ ಮೋಹನ್ ರೆಡ್ಡಿ ಮತ್ತು ಕೆ ಚಂದ್ರಶೇಖರ್ ರಾವ್ ಅವರು ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಇಂದು(ಮೇ 30) ಬೆಳಗ್ಗೆಯಷ್ಟೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಜಗನ್ ಮೋಹನ್ ರೆಡ್ಡಿ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲು ಅಣಿಯಾಗಿದ್ದರು. ಆದರೆ ಸುರಕ್ಷತೆಯ ದೃಷ್ಟಿಯಿಂದ ದೆಹಲಿಯನ್ನು ಈಗಾಗಲೇ ವಿಮಾನ ಹಾರಾಟ ರಹಿತ ಪ್ರದೇಶ(ನೊ ಫ್ಲೈ ಝೋನ್) ಎಂದು ಘೋಷಿಸಲಾಗಿದ್ದು, ಅವರ ವಿಮಾನ ಲ್ಯಾಂಡ್ ಆಗುವುದಕ್ಕೆ ಅವಕಾಶ ಇಲ್ಲದ ಕಾರಣ ಅವರು ತಮ್ಮ ಪ್ರಯಾಣವನ್ನು ರದ್ದು ಮಾಡಬೇಕಾಗಿದೆ. ಅಲ್ಲದೆ ದೆಹಲಿಯಲ್ಲಿ 4 ಗಂಟೆಯ ನಂತರ ಸಾರ್ವಜನಿಕ ಸಂಚಾರವನ್ನು ಬಂದ್ ಮಾಡಲಾಗುತ್ತಿದೆ. ರಾತ್ರಿ 9 ಗಂಟೆಯವರೆಗೂ ತುರ್ತು ವಾಹನಗಳನ್ನು ಬಿಟ್ಟರೆ ಕೆಲವು ಮಾರ್ಗದಲ್ಲಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ವಿಶ್ವದ ನಾನಾ ಗಣ್ಯರು ಸೇರದಂತೆ ಈ ಅಮೋಘ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು 8000 ಕ್ಕೂ ಹೆಚ್ಚು ಅತಿಥಿಗಳು ಆಗಮಿಸುತ್ತಿದ್ದು, ನಾನಾ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು ಭಾಗಿಯಾಗಲಿದ್ದಾರೆ.

ಆದ್ದರಿಂದ ರಾಜಧಾನಿ ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.












Click it and Unblock the Notifications