ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ 'ಶ್ರಮಿಕ್ ರೈಲು' ರದ್ದುಗೊಳಿಸಿದ್ದಕ್ಕೆ ಕಾರ್ಮಿಕರಿಂದ ಗಲಾಟೆ

|
Google Oneindia Kannada News

ಅಹಮದಬಾದ್, ಮೇ 17: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ದೇಶಾದ್ಯಂತ ಶ್ರಮಿಕ್ ರೈಲುಗಳು ಸಂಚಾರ ಮಾಡುತ್ತಿದೆ. ಆದರೆ, ಗುಜರಾತ್‌ನಲ್ಲಿ ಇಂದು ಎರಡು ಶ್ರಮಿಕ್ ರೈಲು ರದ್ದಾದ ಕಾರಣ ನೂರಾರು ಕಾರ್ಮಿಕರು ಗಲಾಟೆ ಮಾಡಿದ್ದಾರೆ.

ರಾಜ್‌ಕೋಟ್‌ನಿಂದ ಬಿಹಾರ್ ಮತ್ತು ಉತ್ತರ ಪ್ರದೇಶಕ್ಕೆ ತೆರಳಬೇಕಿದ್ದ ರೈಲನ್ನು ರದ್ದುಗೊಳಿಸಲಾಗಿದೆ. ಊರಿಗೆ ಹೋಗಲು ಸಿದ್ಧತೆಗಳೊಂದಿಗೆ ಬಂದಿದ್ದ ಕಾರ್ಮಿಕರು ರೈಲು ರದ್ದು ಎಂದು ತಿಳಿಯುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

ಲಾಕ್‌ಡೌನ್‌ 4.O: ಈ 30 ಪ್ರದೇಶಗಳ ಮೇಲೆ ಕೇಂದ್ರ ಸರ್ಕಾರ ಕಟ್ಟೆಚ್ಚರಲಾಕ್‌ಡೌನ್‌ 4.O: ಈ 30 ಪ್ರದೇಶಗಳ ಮೇಲೆ ಕೇಂದ್ರ ಸರ್ಕಾರ ಕಟ್ಟೆಚ್ಚರ

ರೈಲು ಸಂಚಾರ ರದ್ದಾಗಲು ನಿಖರವಾದ ಕಾರಣ ಇನ್ನು ಗೊತ್ತಾಗಿಲ್ಲ. ಆದರೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಗಲಭೆಗೆ ಕಾರಣವಾಗಿರುವವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಎಸ್‌ಪಿ ಬಲರಾಂ ಮೀನಾ ತಿಳಿಸಿದ್ದಾರೆ.

Migrant Workers Ransack Vehicles In Gujarat For Cancellation 2 Shramik Train

ಇನ್ನು ಹುಬ್ಬಳಿಯಿಂದ ಬಿಹಾರ್‌ಗೆ ಹೋಗಬೇಕಿದ್ದ ಶ್ರಮಿಕ್ ರೈಲು ಕೂಡ ಇಂದು ರದ್ದಾಗಿದೆ, ತಾಂತ್ರಿಕ ಕಾರಣದಿಂದ ಹುಬ್ಬಳ್ಳಿ-ಬಿಹಾರ್ ಎಕ್ಸ್‌ಪ್ರೆಸ್‌ ರೈಲು ಇಂದು ಪ್ರಯಾಣ ನಡೆಸಿಲ್ಲ. ಇದರಿಂದ ಸಾವಿರಾರು ಕಾರ್ಮಿಕರು ನಿರಾಸೆಯಿಂದ ರೈಲು ನಿಲ್ದಾಣದಲ್ಲಿ ಉಳಿಯಬೇಕಿದೆ.

ಲಾಕ್‌ಡೌನ್‌ ಕಾರಣದಿಂದ ದೇಶದ ಹಲವು ಪ್ರಮುಖ ನಗರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ ಸಿಲುಕಿಕೊಂಡಿದ್ದಾರೆ. ಎರಡು ಹಂತದ ಲಾಕ್‌ಡೌನ್‌ ಬಳಿಕ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ರೈಲು ಆರಂಭಿಸಿತ್ತು. ಪ್ರತಿನಿತ್ಯ ಹಲವು ರಾಜ್ಯಗಳಿಂದ ಶ್ರಮಿಕ್ ರೈಲು ಸಂಚಾರ ಮಾಡುತ್ತಿದೆ.

English summary
Migrant workers ransack vehicles in Shapar industrial area in Rajkot following cancellation of two 'Shramik Special' trains to Bihar & Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X