ಕತ್ತರಿ-ಕಲ್ಪನೆ-ಕರಗಳ ಸಮಾಗಮ ಸಾಂಜಿ ಕಲೆ

ಮಂಗಳೂರು, ಆ. 27 : ದ್ವಾಪರ ಯುಗದ ಶ್ರೀಕೃಷ್ಣನಿಗಾಗಿಯೇ ಹುಟ್ಟಿಕೊಂಡಿದ್ದು ಎಂದು ಹೇಳಲಾಗಿರುವ ಅಪರೂಪದ, ಆದರೆ ಕಣ್ಮರೆಯಾಗುತ್ತಿರುವ ಕಾಗದ ಕತ್ತರಿಸುವ ವಿಶಿಷ್ಟ ಕಲೆ 'ಸಾಂಜಿ'ಯ ಕುರಿತು ಆಗಸ್ಟ್ 29, ಗುರುವಾರದಂದು ಮಂಗಳೂರಿನಲ್ಲಿ ವಿಶೇಷವಾದ ಕಾರ್ಯಾಗಾರವನ್ನು ಆಸಕ್ತರಿಗಾಗಿ ಉಚಿತವಾಗಿ ನಡೆಸಲಾಗುತ್ತಿದೆ.

"ಪ್ರಯತ್ನ ಪಟ್ಟರೆ ಏನನ್ನು ಸಾಧಿಸಬಹುದು, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅದನ್ನು ಉಪೇಕ್ಷಿಸದೇ ಮನಸ್ಸಿಟ್ಟು ವ್ಯವಸ್ಥಿತವಾಗಿ ಮಾಡಬೇಕಾಗಿದೆ. ಅದಕ್ಕೆ ಸಾಕಷ್ಟು ಸಮಯ, ಸತತ ಪ್ರಯತ್ನ ಮತ್ತು ಪ್ರೇರಣೆ ಅಗತ್ಯವಿದೆ" ಎಂದು ಹೇಳುತ್ತಾರೆ ಈ ಕಾರ್ಯಾಗಾರವನ್ನು ನಡೆಸುತ್ತಿರುವ ಮೈಸೂರು ಹುಸೇನಿ ಅವರು.

ವಿಶ್ವದಾದ್ಯಂತ ಹಲವಾರು ಹೆಸರುಗಳಲ್ಲಿ ಜನಪ್ರಿಯವಾಗಿರುವ ಕಾಗದ ಕತ್ತರಿಸುವ ವಿಶಿಷ್ಟ ಕಲೆಯಾದ ಸಾಂಜಿ ಭಾರತೀಯ ಮೂಲದ್ದೆ ಆಗಿದೆ. ಪುರಾಣ ಪುರುಷ ಶ್ರೀಕೃಷ್ಣನೊಡನೆ ಸಂಬಂಧ ಬೆಸೆದುಕೊಂಡಿರುವ ಈ ಕಲೆ ಹುಟ್ಟಿಕೊಂಡಿದ್ದೆ ಕೃಷ್ಣನಿಗಾಗಿ ಎನ್ನಲಾಗುತ್ತದೆ. ಇದಕ್ಕೆ"ದೇವಸ್ಥಾನ ಕಲಾ ಸಾಂಜಿ" ಎಂಬ ಹೆಸರೂ ಇದೆ. [ಆಗಸ್ಟ್ 28, ಶ್ರೀ ಕೃಷ್ಣ ಜನ್ಮಾಷ್ಟಮಿ]

ಮೈಸೂರು ಹುಸೇನಿ ಅಪರೂಪದ ಕಲಾವಿದ

ಮೈಸೂರು ಹುಸೇನಿ ಅಪರೂಪದ ಕಲಾವಿದ

ಇಂತಹ ಅಪರೂಪದ ಕಲೆಯನ್ನು ಮತ್ತೆ ಬೆಳಕಿಗೆ ತಂದ ಕಲಾವಿದ "ಮೈಸೂರು ಹುಸೇನಿ" ಸಹ ಒಬ್ಬರು. ಈಗಾಗಲೇ ತಮ್ಮ ಏಕ ರೇಖಾ ಚಿತ್ರ ಹಾಗೂ ಹಲವು ಬಗೆಯ ಪೇಪರ್ ಆರ್ಟ್ ಮತ್ತು ಪೇಪರ್ ಕ್ರಾಫ್ಟ್ ಮೂಲಕ ತಮ್ಮನ್ನು ಭಿನ್ನವಾಗಿ ಗುರುತಿಸಿಕೊಂಡಿರುವ ಹುಸೇನಿ ಕರ್ನಾಟಕದಾದ್ಯಂತ ಸಾಂಜಿ ಜನಪ್ರಿಯತೆಗಾಗಿ ಈ ಕಾರ್ಯಕ್ರಮವನ್ನು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇವರೊಂದಿಗೆ ಸೇರಿಕೊಂಡು ನಡೆಸುತ್ತಿದ್ದಾರೆ.

ಚಿತ್ರಕಲೆ/ಕ್ರಾಫ್ಟ್/ಪೇಪರ್ ಆರ್ಟ್‌

ಚಿತ್ರಕಲೆ/ಕ್ರಾಫ್ಟ್/ಪೇಪರ್ ಆರ್ಟ್‌

ಈ ವಿಶೇಷ ಕಾರ್ಯಾಗಾರದಲ್ಲಿ ಚಿತ್ರಕಲೆ/ಕ್ರಾಫ್ಟ್/ಏಕ ರೇಖಾ ಚಿತ್ರ/ಪೇಪರ್ ಆರ್ಟ್‌ಗಳನ್ನು ಬಿಡಿಸುವ ಬಗ್ಗೆ ಮಾಹಿತಿ ಹಾಗೂ ತಯಾರಿಸುವ ಬಗ್ಗೆ ಗುರುವಾರ, ಆ. 29ರಂದು ತಿಳಿಸಲಾಗುವುದು. ಇದನ್ನು ಅರ್ಪಿಸುತ್ತಿರುವುದು, ಎಸ್.ಎಫ್. ಹುಸೇನಿ ಅವರ ಪರಿಕಲ್ಪನೆಯಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ(ರಿ), ಮಂಗಳೂರು.

ಕಾರ್ಯಾಗಾರ ಎಲ್ಲಿ, ಎಂದು?

ಕಾರ್ಯಾಗಾರ ಎಲ್ಲಿ, ಎಂದು?

ದಿನಾಂಕ : ಗುರುವಾರ, ಆಗಸ್ಟ್ 29, 2013
ಸಮಯ : ಬೆಳಿಗ್ಗೆ 10.00 ರಿಂದ 12.30 ಮತ್ತು ಮಧ್ಯಾಹ್ನ 2.00 ರಿಂದ 4.30.
ಸ್ಥಳ: ಕೆನರಾ ಹೈಸ್ಕೂಲ್, ಉರ್ವ ಸಭಾಂಗಣ, ಮಂಗಳೂರು.

ಕಾರ್ಯಾಗಾರಕ್ಕೆ ಪ್ರವೇಶ ಉಚಿತ

ಕಾರ್ಯಾಗಾರಕ್ಕೆ ಪ್ರವೇಶ ಉಚಿತ

ಕಲಾ ಅಭಿಮಾನಿಗಳು, ಚಿತ್ರಕಲಾ ಅಧ್ಯಾಪಕರು/ಅಧ್ಯಾಪಕಿಯರು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಕಾರ್ಯಾಗಾರದ ಉಚಿತ ಪ್ರವೇಶ ಮತ್ತು ಸದುಪಯೋಗ ಪಡೆದುಕೊಂಡು, ಅಳಿದು ಹೋಗುತ್ತಿರುವ ಈಕಲೆಯನ್ನು ಉಳಿಸುವ ದೃಷ್ಟಿಯಿಂದ ಪಾಲ್ಗೊಳ್ಳಬಹುದು.

ಹೆಚ್ಚಿನ ಮಾಹಿತಿ ಬೇಕಿದ್ದರೆ...

ಹೆಚ್ಚಿನ ಮಾಹಿತಿ ಬೇಕಿದ್ದರೆ...

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಎಂ.ಪ್ರಶಾಂತ್ ಭಟ್ 9448126968, ಕೆ.ಮಂಜುನಾಥ ಶೆಣೈ 9591888616
ಮೈಸೂರು ಹುಸೇನ್ ಬ್ಲಾಗ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+