ತೆಲಂಗಾಣ ರಚನೆ, ಜಗನ್ ಉಪವಾಸ ವ್ರತ

ಹೈದರಾಬಾದ್, ಆ.25:ಅಖಂಡ ಆಂಧ್ರಕ್ಕೆ ಒತ್ತಾಯಿಸಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಕಡಪ ಲೋಕಸಭಾ ಕ್ಷೇತ್ರದ ಸಂಸದ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಚಂಚಲಗೂಡ ಜೈಲಿನಲ್ಲಿ ಆಮರಣಾಂತ ಸತ್ಯಾಗ್ರಹ ಆರಂಭಿಸಿದ್ದಾರೆ. ಆದರೆ, ಜೈಲು ಅಧಿಕಾರಿಗಳು ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

ಭಾನುವಾರ ಬೆಳಗ್ಗಿನಿಂದಲೇ ಚಂಚಲಗೂಡ ಜೈಲಿನಲ್ಲಿ ಉಪಹಾರ, ನೀರು, ಊಟ ಸೇವಿಸುವುದನ್ನು ಬಿಟ್ಟು ಜಗನ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಸಿದಂತೆ ಸಿಬಿಐ ಬಂಧನದಲ್ಲಿರುವ ಜಗನ್ ಶನಿವಾರ ರಾತ್ರಿಯಿಂದಲೇ ಉಪವಾಸ ಕೈಗೊಂಡಿದ್ದಾರೆ ಎಂದು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಿದ್ದಾರೆ.

ಅದರೆ, ಚಂಚಲಗುಡ ಜೈಲಿನ ಮುಖ್ಯ ಅಧಿಕಾರಿ ಸೈದಯ್ಯ ಅವರು ಮಾತನಾಡಿ, ಜಗನ್ ಅವರು ಉಪವಾಸ ಕೈಗೊಳ್ಳುವಂತಿಲ್ಲ. ಒಂದು ವೇಳೆ ಉಪವಾಸ ಸತ್ಯಾಗ್ರಹ ಹೂಡಬೇಕಾದರೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ನಮಗೆ ಯಾವುದೇ ಮನವಿ ಬಂದಿಲ್ಲ.ಸದ್ಯಕ್ಕೆ ಅವರು ಯಾರ ಜೊತೆಯೂ ಮಾತನಾಡಿಲ್ಲ ಎಂದು ಜೈಲಿನ ಅಧಿಕಾರಿ ಸೈದಯ್ಯ ತಿಳಿಸಿದ್ದಾರೆ.

ಜೈಲಿನಲ್ಲಿ ತಮ್ಮನ್ನು ಯಾರೊಬ್ಬರು ಭೇಟಿಯಾಗಬಾರದೆಂದು ಜಗನ್ ಮನವಿ ಮಾಡಿಕೊಂಡಿದ್ದಾರೆ. ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ 24 ಗಂಟೆಗೆ ಸೀಮಿತವೋ ಇಲ್ಲವೇ ಮುಂದುವರೆಯುವುದೇ ಎಂಬುದು ಖಚಿತವಾಗಿಲ್ಲ. ಅಮರಣಾಂತ ಉಪವಾಸ ಸತ್ಯಾಗ್ರಹ ಎಂದು ವೈಎಸ್ ಆರ್ ಪಕ್ಷ ಹೇಳಿಕೊಂಡಿದೆ.

Telangana: Jagan to go on indefinite fast in jail

ಆಂಧ್ರವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಸಿ ಜಗನ್ ಈಗಾಗಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಜಗನ್ ಜೈಲುವಾಸಿಯಾಗಿ ಈಗಾಗಲೇ ಒಂದು ವರ್ಷ ಕಳೆದಿದೆ.

ಇದೇ ರೀತಿ ಜಗನ್ ತಾಯಿ ಹಾಗೂ ವೈಎಸ್ ಆರ್ ಪಕ್ಷದ ಗೌರವ ಅಧ್ಯಕ್ಷೆ ವೈ.ಎಸ್.ವಿಜಯಮ್ಮ ಗುಂಟೂರಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ತೀವ್ರ ಅಸ್ವಸ್ಥರಾದ ವಿಜಯಮ್ಮ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಉಪವಾಸದ ಹಠವನ್ನು ಕೈಬಿಡುವಂತೆ ಜಗನ್ ಫೋನ್ ಮಾಡಿ ಮನವಿ ಮಾಡಿದ ಮೇಲೆ ವಿಜಯಮ್ಮ ಉಪವಾಸ ಕೈಬಿಟ್ಟಿದ್ದಾರೆ.
ವಿಜಯಮ್ಮ ಹಾಗೂ 16 ಶಾಸಕರು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಪಕ್ಷದ ಸಂಸದರೂ ಕೂಡಾ ರಾಜೀನಾಮೆ ನೀಡಿ ಬೆಂಬಲ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಆಂಧ್ರ ವಿಭಜಿಸಿ ತೆಲಂಗಾಣ ರಾಜ್ಯ ರಚನೆ ಮಾಡಬಾರದು ಅಖಂಡ ಆಂಧ್ರ ಇವರ ಪ್ರಮುಖ ಒತ್ತಾಯವಾಗಿದೆ. ಸೀಮಾಂಧ್ರದಲ್ಲಿ ತೆಲಂಗಾಣ ವಿರೋಧಿ ಹೋರಾಟ 25ನೇ ದಿನಕ್ಕೆ ಕಾಲಿಟ್ಟಿದೆ. ಸೀಮಾಂಧ್ರದ 13 ಜಿಲ್ಲೆಗಳ 6 ಲಕ್ಷಕ್ಕೂ ಅಧಿಕ ಸರ್ಕಾರಿ ಉದ್ಯೋಗಿಗಳು, 2 ಲಕ್ಷ ಶಿಕ್ಷಕರು ಮುಷ್ಕರ ನಿರತರಾಗಿದ್ದಾರೆ. ರಸ್ತೆ ಸಂಪರ್ಕ ಅವ್ಯವಸ್ಥೆ 12ದಿನಕ್ಕೆ ಕಾಲಿಟ್ಟಿದೆ. ಆಂಧ್ರ ರಾಜ್ಯ ಸಾರಿಗೆಯ ಎಪಿಎಸ್ಸಾರ್ಟಿಸಿಯ 12,000 ಕ್ಕೂ ಅಧಿಕ ಬಸ್ ಗಳು ಡಿಪೋನಲ್ಲೇ ನಿಂತಿವೆ. ಗುಂಟೂರು ಬಂದ್ ಮಾಡಲು ಟಿಡಿಪಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+