ಆರ್ಥಿಕ ಕುಸಿತ: ಭಾರತ ಮೊದಲೋ ಅಥವಾ ಚೀನಾವೋ?

ಈ ಮಧ್ಯೆ, ನೆರೆಯ ಚೀನಾದ ಆರ್ಥ ವ್ಯವಸ್ಥೆ ಬಿರುಗಾಳಿಗೆ ಪತರಗುಟ್ಟುತ್ತಿರುವ ನಾವೆಯಂತಾಗಿದೆ. ಅಮೆರಿಕವನ್ನಷ್ಟೇ ಅಲ್ಲ ಇತರೆ ಬಲಾಢ್ಯ ರಾಷ್ಟ್ರಗಳನ್ನೂ ಹಿಂದಿಕ್ಕುವತ್ತ ದಾಪುಗಾಲು ಹಾಕಿದ್ದ ಚೀನಾದಲ್ಲಿ ಈಗ ಯಾವುದೂ ಸರಿಯಿಲ್ಲ ಎಂಬಂತಾಗಿದೆ. ಇದಕ್ಕೆ ಮುಖ್ಯವಾಗಿ ಅಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಕಾರಣವಾಗಿದೆ.
ಒಂದೆಡೆ ಉತ್ಪಾದಕತೆ ಹೆಚ್ಚಾಗಿ ವಿದೇಶಗಳಲ್ಲಿ ಬೇಡಿಕೆ ಕಳೆದುಕೊಳ್ಳುತ್ತಿದೆ. ಇನ್ನು ಆಂತರಿಕ ಬೇಡಿಕೆಯೂ ಇಲ್ಲವಾಗಿದೆ. ಎರಡು ವರ್ಷಗಳ ಹಿಂದೆಯೇ ಇಂತಹ ಪರಿಸ್ಥಿತಿ ಮೊಳೆಕಯೊಡೆದು ಇದೀಗ ಹೆಮ್ಮರವಾಗುತ್ತಿದೆ.
ಒಂದೂವರೆ ದಶಕದ ಹಿಂದೆ ಕಂಡುಬಂದಂತಹ ಆರ್ಥಿಕ ಹಿಂಜರಿತ ಚೀನಾವನ್ನು ಸಂಕಷ್ಟಕ್ಕೆ ದೂಡಿದೆ. ಇಡೀ ಅರ್ಥವ್ಯವಸ್ಥೆಯೇ ಕುಸಿಯುವ ಹಂತಕ್ಕೆ ಬಂದಿದೆ. ಅನುತ್ಪಾದಕ ಸಾಲಗಳ ಪ್ರಮಾಣ ವಿಪರೀತವಾಗಿದೆ. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ವಿಶ್ವದ ಎರಡನೆಯ ಅರ್ಥವ್ಯವಸ್ಥೆ ಎನಿಸಿಕೊಂಡಿದ್ದ ಚೀನಾ, ಪ್ರಗತಿ ಕಾಣದೆ ಸ್ಥಗಿತಗೊಂಡಿದೆ. ಇದರಿಂದ ದೇಶದಲ್ಲಿ ಅಶಾಂತಿ ಮನೆಮಾಡುತ್ತಿದೆ. ಸಾಮಾಜಿಕ ಚೌಕಟ್ಟು ಶಿಥಿಲಗೊಳ್ಳುವ ಅಪಾಯವಿದೆ. ನಿರುದ್ಯೋಗ ತಾಂಡವವಾಡುತ್ತಿದೆ. 30 ಲಕ್ಷಕ್ಕೂ ಹೆಚ್ಚು ಪದವೀಧರರು ಕೆಲಸವಿಲ್ಲದ ಬಡಗಿಗಳಾಗಿದ್ದಾರೆ. ಮದುವೆ ಮಾರುಕಟ್ಟೆ ಏರುಪೇರಾಗಿದೆ.
ಚೀನಾ ಇಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಅಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೇರಿಸುವ ಆಲೋಚನೆಯೂ ಇದೆ. ಆದರೆ ಇತ್ತ ಯುವಜನತೆಯಲ್ಲಿ ನಿರುದ್ಯೋಗ ಪರ್ವ ಕಾಣಿಸಿಕೊಂಡಿದೆ.
ಇದೇ ವೇಳೆ ಅತ್ತ ಅಮೆರಿಕ ಸೆಟೆದು ನಿಂತಿದೆ. ದೊಡ್ಡಣ್ಣ ಆರ್ಥಿಕವಾಗಿ ಮತ್ತೆ ಬಲಾಢ್ಯವಾಗುವತ್ತ ದಾಪುಗಾಲು ಹಾಕುತ್ತಿದ್ದಾನೆ.












Click it and Unblock the Notifications