ಸುಷ್ಮಾ ಸ್ವರಾಜ್ ವಿರುದ್ಧ ದಿಗ್ವಿಜಯ್ ಸಿಂಗ್ ಸ್ಪರ್ಧೆ!

ಮಧ್ಯಪ್ರದೇಶದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ನಾನು ಈ ಬಾರಿಯ ಚುನಾವಣೆಗೆ ರಾಜ್ ಘರ್ ನಿಂದ ಸ್ಪರ್ಧಿಸುತ್ತಿಲ್ಲ. ಸುಷ್ಮಾ ಸ್ವರಾಜ್ ಸ್ಪರ್ಧಿಸುವ ವಿದಿಶ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಒಂದು ವೇಳೆ ಸುಷ್ಮಾ ಸ್ವರಾಜ್ ಲೋಕಸಭೆ ಚುನಾವಣೆಗೆ ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿದರೆ, ನೀವು ಅಲ್ಲಿಂದಲೇ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಲು ಸಿಂಗ್ ನಿರಾಕರಿಸಿದರು.
ವಿದಿಶ ಕ್ಷೇತ್ರದಿಂದ ಸ್ಪರ್ಧಿಸಲು ಸಕಲ ರೀತಿಯಲ್ಲಿ ಸಿದ್ಧನಾಗಿದ್ದೇನೆ ಎಂದು ಘೋಷಿಸಿದರು. 2009ರ ಚುನಾವಣೆಯಲ್ಲಿ ವಿದಿಶ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ 4,00,00 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಬಿಜೆಪಿ ನಾಯಕರನ್ನು ಕೆಣಕುತ್ತಿದ್ದಾರೆ. ಎರಡು ದಿನಗಳ ಹಿಂದೆ ಟ್ವೀಟರ್ ಮೂಲಕ ಅರುಣ್ ಜೇಟ್ಲಿ ಅವರ ಆಸ್ತಿಯ ಕುರಿತು ಪ್ರಶ್ನಿಸಿ, ವಿವಾದ ಹುಟ್ಟು ಹಾಕಿದ್ದರು. (ಅರುಣ್ ಜೇಟ್ಲಿ ಆಸ್ತಿ ಬಗ್ಗೆ ದಿಗ್ವಿಜಯ್ ಸಿಂಗ್ ಟ್ವೀಟ್!) (ಪಿಟಿಐ)












Click it and Unblock the Notifications