ಮಾಸ್ಟರ್ ಬ್ಲಾಸ್ಟರ್ ಜತೆ ನಂ.1 ಕ್ರೀಡಾಪಟು
ಬೆಂಗಳೂರು, ಆ.21: ಇಂಡಿಯನ್ ಬಾಡ್ಮಿಂಟನ್ ಲೀಗ್ ನಲ್ಲಿ ಮಂಗಳವಾರ ಎಲ್ಲೆಲ್ಲಿದ ಉತ್ಸಾಹ ತುಂಬಿತ್ತು. ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಮಾಸ್ಟರ್ಸ್ ತಂಡವನ್ನು ಹುರಿದುಂಬಿಸಲು ಬಂದಿದ್ದರು.
ಭಾರಿ ಕುತೂಹಲ ಕೆರಳಿಸಿದ್ದ ಮುಂಬೈ ಮಾಸ್ಟರ್ಸ್ ಹಾಗೂ ಕ್ರಿಷ್ ಡೆಲ್ಲಿ ಸ್ಮಾಷರ್ಸ್ ತಂಡದ ಹಣಾಹಣಿಯಲ್ಲಿ ಮುಂಬೈ ಮಾಸ್ಟರ್ಸ್ ತಂಡ ಗೆಲವು ಸಾಧಿಸಿತು. ಲೀ ಚೊಂಗ್ ವೀ, ಟಿನೆ ಬೌನ್ ಹಾಗೂ ಮಾರ್ಕ್ ಜ್ವಿಬ್ಲರ್ ಅವರು ತಮ್ಮ ಪಂದ್ಯಗಳನ್ನು ಗೆದ್ದು ಮುಂಬೈಗೆ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದದಲ ಪಂದ್ಯ ನಡೆದಿದ್ದು ವಿಶ್ವದ ನಂಬರ್ ಒನ್ ಆಟಗಾರ ಲೀ ಚೊಂಗ್ ವೀ ಹಾಗೂ ಡರೇನ್ ಲ್ಯೂ ನಡುವೆ. ಪುರುಷರ ಸಿಂಗಲ್ಸ್ ನ ಈ ಪಂದ್ಯದಲ್ಲಿ, ನಿರೀಕ್ಷೆಯಂತೆ ಲೀ ಅವರು 21-12, 21-16ರ ಅಂತರದಲ್ಲಿ ಜಯ ಸಾಧಿಸಿದರು. ಇದರಿಂದ, ಮುಂಬೈ ತಂಡ 1-0 ಅಂತರದ ಮುನ್ನಡೆಯನ್ನು ಪಡೆಯಿತು. ನಂತರ ಡೆಲ್ಲಿ ವಿರುದ್ಧ 4-1ರ ಅಂತರದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 11 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು.
ಐಬಿಲ್ ನಲ್ಲಿ ಮುಂಬೈ ಮಾಸ್ಟರ್ಸ್, ಹೈದರಾಬಾದ್, ಪುಣೆ ಪಿಸ್ಟನ್ಸ್, ಬೆಂಗಳೂರಿನ ಬಂಗಾ ಬೀಟ್ಸ್, ಡೆಲ್ಲಿ ಸ್ಮಾಷರ್ಸ್, ಅವಧೆ ವಾರಿಯರ್ಸ್ ಕಣದಲ್ಲಿವೆ. ಐಬಿಎಲ್ ನ ಚಿತ್ರಗಳು ಸೇರಿದಂತೆ ಇನ್ನಷ್ಟು ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು ಇಲ್ಲಿವೆ ನೋಡಿ...

ಮುಂಬೈನಲ್ಲಿ
ಮುಂಬೈ: ಸಚಿನ್ ತೆಂಡೂಲ್ಕರ್ ಅವರು ಮುಂಬೈ ಮಾಸ್ಟರ್ಸ್ ಆಟಗಾರ, ವಿಶ್ವದ ನಂ.1 ಲೀ ಚೊಂಗ್ ವೈ ಜತೆ ಸಂತಸದ ಕ್ಷಣ ಹಂಚಿಕೊಂಡರು. PTI Photo by Shirish Shete

ತಿರುಪತಿಯಲ್ಲಿ
ತಿರುಪತಿ: ಯುನೈಟೆಡ್ ಆಂಧ್ರ ಕಾರ್ಯಕರ್ತರು ಆಂಧ್ರ ವಿಭಜನೆ ಖಂಡಿಸಿ ಪ್ರತಿಭಟನೆ ನಡೆಸಿದರು.

ನವದೆಹಲಿಯಲ್ಲಿ
ನವದೆಹಲಿ: ಭಾರಿ ಮಳೆಯಿಂದಾಗಿ ದೆಹಲಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. PTI Photo by Kamal

ಕೋಲ್ಕತ್ತಾದಲ್ಲಿ
ಕೋಲ್ಕತ್ತಾ : ಭಾರಿ ಮಳೆಗೆ ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರ ನಿಯಂತ್ರಿಸುತ್ತಿರುವ ಪೊಲೀಸ್

ಆಹಾರ ಭದ್ರತೆ
ಇಟಾನಗರ: ಆರುಣಾಚಲ ಮುಖ್ಯಮಂತ್ರಿ ನಬಂ ಟುಕಿ ಅವರು ಆಹಾರ ಭದ್ರತಾ ಕಾಯ್ದೆ ಯೋಜನೆಗೆ ಚಾಲನೆ ನೀಡಿದರು.ಸುದ್ದಿ ವಿವರ ಇಲ್ಲಿದೆ ಓದಿ

ಚೀನಿಗಳಿಗೆ ಉತ್ತರ
ಲಡಾಕ್ : ಐಎಎಫ್ ಸಿ 130ಜೆ-30 ಸೂಪರ್ ಹರ್ಕುಲೆಸ್ ವಿಮಾನ ಇಳಿಸಿದ ಭಾರತ.. ಸುದ್ದಿ ವಿವರ ಇಲ್ಲಿದೆ ಓದಿ

ಶ್ರೀನಗರದಲ್ಲಿ
ಶ್ರೀನಗರ: ಕ್ರಿಕೆಟರ್ ಯೂಸುಫ್ ಪಠಾಣ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಡೌನ್ ಟೌನ್ ಚಾಂಪಿಯನ್ಸ್ ಲೀಗ್ (ಡಿಸಿಎಲ್) ಟೂರ್ನಿ ಟ್ರೋಫಿ ಅನಾವರಣಗೊಳಿಸಿದರು. PTI Photo by S Irfan

ಮೊರಾದಾಬಾದ್
ಮೊರಾದಾಬಾದಿನಲ್ಲಿ ರಕ್ಷಾ ಬಂಧನ್ ದಿನದಂದು ರೈಲ್ವೆ ನಿಲ್ದಾಣದಲ್ಲಿ ಭಾರಿ ಜನಸಂದಣಿ ನೆರೆದಿತ್ತು

ಗುಂಟೂರಿನಲ್ಲಿ
ಗುಂಟೂರು: ವೈಎಸ್ ಆರ್ ಕಾಂಗ್ರೆಸ್ ನಾಯಕಿ ವಿಜಯಮ್ಮ ಅವರು ಅನಿರ್ಧಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಆಂಧ್ರಪ್ರದೇಶ ವಿಭಜನೆಯನ್ನು ಖಂಡಿಸಿ ವಿಜಯಮ್ಮ ಕೈಗೊಂಡಿರುವ ಉಪವಾಸ 2ನೇ ದಿನಕ್ಕೆ ಕಾಲಿಟ್ಟಿದೆ.

ಬೋಡೋ ಲ್ಯಾಂಡ್ ಗಾಗಿ
ಸೋನಿತ್ ಪುರ: ಅಸ್ಸಾಂನ ಸೋನಿತ್ ಪುರ ಜಿಲ್ಲೆಯಲ್ಲಿ ಬೋಡೋ ಜನಾಂಗದವರು ಬೃಹತ್ ಮೆರವಣಿಗೆ ನಡೆಸಿ ಬೋಡೋ ಲ್ಯಾಂಡ್ ರಚನೆಗಾಗಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ
ಬೆಂಗಳೂರು: ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಅವರು ಕಾರು ತೊಳೆಯುವ ಉತ್ಪನ್ನದ ಉದ್ಘಾಟನೆಗಾಗಿ ಆಗಮಿಸಿದ್ದಾಗ ಕಂಡಿದ್ದು ಹೀಗೆ PTI Photo by Shailendra Bhojak

ಪಶ್ಚಿಮ ಬಂಗಾಳದಲ್ಲಿ
ಬಂಕುರಾ: ಕನ್ಸಾಬಾತಿ ನದಿ ಪ್ರವಾಹಕ್ಕೆ ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡಿದೆ.

ಡ್ರಾಸ್ ನಲ್ಲಿ
ಕಾಶ್ಮೀರಿ ಅಲೆಮಾರಿಗಳು ತಮ್ಮ ಮೇಕೆಗಳ ಜತೆ ಬೆಟ್ಟ ಗುಡ್ಡ ಹತ್ತಿ ಇಳಿದು ರಸ್ತೆಯಲ್ಲಿ ಸಾಗುವ ದೃಶ್ಯ












Click it and Unblock the Notifications