ಪಂಚತಾರಾ ಹೋಟೆಲ್ ಗಳಿಗೆ ಬಂತು ಮಾರ್ಗಸೂಚಿ

ನವದೆಹಲಿ, ಆ.14 : ಪರಿಸರ ಮಾಲಿನ್ಯ ಕಾಪಾಡಲು ಕೇಂದ್ರ ಸರ್ಕಾರ ಪಂಚತಾರಾ ಹೋಟೆಲ್ ಗಳಿಗೆ ಮಾರ್ಗಸೂಚಿ ಸಿದ್ಧಪಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ಹೋಟೆಲ್ ಗಳು ಪರಿಸರ ಸ್ನೇಹಿ ವಾತಾವರಣ ನಿರ್ಮಿಸಿಕೊಳ್ಳಬೇಕು.

ಮಂಗಳವಾರ ಲೋಕಸಭೆಗೆ ಹೇಳಿಕೆ ನೀಡಿದ ಕೇಂದ್ರ ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್, ಪಂಚತಾರಾ ಹೋಟೆಲ್ ಗಳಲ್ಲಿ ಆಹಾರ ವ್ಯಯಮಾಡುವುದು, ಕಸಗಳ ಸಂಸ್ಕರಣೆ, ನೀರಿನ ಪುನರ್ ಬಳಕೆ ಬಗ್ಗೆ ಮಾರ್ಗಸೂಚಿ ಕೆಲವೊಂದು ನಿಯಮಗಳನ್ನು ಒಳಗೊಂಡಿದೆ ಎಂದು ಹೇಳಿದರು.

five-star hotel

ಮಾರ್ಗಸೂಚಿಯಂತೆ ಸ್ಟಾರ್ ಹೋಟೆಲ್ ಗಳಲ್ಲಿ ಆಹಾರ ಹಾಳಾಗದಂತೆ ಸೂಚನೆ ನೀಡಲಾಗಿದೆ. ಹೋಟೆಲ್ ನಲ್ಲಿ ಆಹಾರ ಉಳಿದರೆ, ಸ್ಥಳೀಯರಿಗೆ ಅಥವ ಪುಷಡ್ ಬ್ಯಾಂಕ್ ಗಳಿಗೆ ದಾನ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಪುನರ್ ಬಳಕೆ ಮಾಡಬಹುದಾದ ಟಾಯ್ಲೆಟ್ ಟಿಶ್ಯೂ, ಫೇಶಿಯಲ್ ಟಿಶ್ಯೂ, ಪೇಪರ್ ಟವೆಲ್ ಹಾಗೂ ಸ್ಟೇಷನರಿ ವಸ್ತಗಳನ್ನು ಅತಿಥಿಗಳಿಗೆ ಬಳಸುವಂತೆ ನೀಡಲು ಮಾರ್ಗಸೂಚಿಯಲ್ಲಿ ನಿರ್ದೇಶೀಸಲಾಗಿಎ ಎಂದು ಮಾಹಿತಿ ನೀಡಿದರು.

100 ಶೇ ಹತ್ತಿಯಿಂದ ತಯಾರಿಸಿದ ಟವಲ್ ಮತ್ತು ಶೀಟ್ ಗಳನ್ನು ಬಳಸಬೇಕು. ರಾಸಾಯನಿಕ ಮುಕ್ತ ವಸ್ತು, ಸಂಸ್ಕರಿಸದ ಸೋಪ್, ಕೂದಲಿಗೆ ಹಚ್ಚುವ ಬಣ್ಣ, ಔಷಧ ದ್ರವ್ಯಗಳನ್ನು ಉಪಯೋಗಿಸಬೇಕು ಅರ್ಧ ಬಳಸಿದ ಮತ್ತು ನಾರು ಬಟ್ಟೆಗಳನ್ನು ಸ್ಥಳೀಯರಿಗೆ ದಾನ ಮಾಡಬೇಕು ಎಂದು ನಿಯಮ ರೂಪಿಸಲಾಗಿದೆ.

ನೀರಿನ ಬಳಕೆ : 200 ರೂಂ ಗಳಿರುವ ಹೋಟೆಲ್ ಗಳು ಪ್ರತಿವರ್ಷ ಸುಮಾರು 80 ಲಕ್ಷ ಗ್ಯಾಲನ್ ನೀರು ಬಳಸಿಕೊಳ್ಳುತ್ತವೆ ಎಂದು ಅಂದಾಜಿಸಲಾಗಿದ್ದು, ನೀರನ್ನು ಮಿತವಾಗಿ ಬಳಸಿದರೆ, 25 ಲಕ್ಷ ಗ್ಯಾಲನ್ ನೀರನ್ನು ಉಳಿಸಬಹುದು. ಅಡುಗೆ ಮತ್ತು ಲಾಂಡ್ರಿಯ ಅಶುದ್ಧ ನೀರನ್ನು ಕಡ್ಡಾಯವಾಗಿ ಪುನರ್ಬಳಕೆ ಮಾಡುವಂತೆ ಮಾರ್ಗಸೂಚಿ ನಿರ್ದೇಶನ ನೀಡಿದೆ.

(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+