ಸ್ವಾತಂತ್ರ್ಯ ಸಂಭ್ರಮಕ್ಕೆ ಸಜ್ಜಾದ ಭಾರತ

ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಭ್ರಮಾಚರಣೆಗೆ ದೇಶದೆಲ್ಲೆಡೆ ಭರದ ಸಿದ್ಧತೆ ನಡೆದಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯ ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಿಸಲಿದೆ. ಅಭೂತಪೂರ್ವ ಭದ್ರತೆಯ ನಡುವೆ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ವೇದಿಕೆ ಸಜ್ಜಾಗಿದೆ. ಇದೆಲ್ಲದರ ನಡುವೆ ಸ್ವತಂತ್ರ ದಿನವೆಂದರೆ ಅದು ಮಕ್ಕಳಿಗೆ ಮಾತ್ರ ಹಬ್ಬವಾಗಿ ಮಾರ್ಪಾಡುವ ಭೀತಿ ನಮ್ಮ ಮುಂದಿದೆ.

ರಾಜಕೀಯವಾಗಿ ಬ್ರಿಟಿಷರಿಂದ 1947ಕ್ಕೆ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡರು. ಭಾರತ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವಾಗೇ ಉಳಿದಿದೆ. ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಅಪಾರ ಸಂಪತ್ತು ಹೊಂದಿರುವ ರಾಷ್ಟ್ರ ಆರ್ಥಿಕವಾಗಿ ಅವನತಿ ಹಾದಿ ಹಿಡಿಯುತ್ತಿದೆ.

ಮಹಾತ್ಮಾ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಚಂದ್ರಶೇಖರ್ ಅಜಾದ್ ಸೇರಿದಂತೆ ಅಸಂಖ್ಯಾತ ಮಂದಿ ಭಾರತದ ಬಗ್ಗೆ ಕಂಡ ಕನಸು ನನಸು ಮಾಡುವ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ. ರಾಜಕಾರಣಿಗಳು ಧ್ವಜಾರೋಹಣ, ಭಾಷಣ ಕಂಠಪಾಠದ ರಿಹರ್ಸಲ್ ಜತೆಗೆ ವೀರಯೋಧರು, ಶಾಲಾ ಮಕ್ಕಳು ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳಲು ಅಣಿಯಾಗಿದ್ದಾರೆ.

ಆಗಸ್ಟ್ 15 ರಂದು ಭಾರತದ ಜತೆಗೆ ಕೊರಿಯಾ, ಕಾಂಗೊ ಹಾಗೂ ಲಿಚೆಸ್ಟೈನ್ ಗಳಲ್ಲೂ ಸ್ವಾತಂತ್ರೋತ್ಸವ ಸಂಭ್ರಮ ಕಾಣಬಹುದು. ಭಾರತದಿಂದ ವಿಭಜನೆಗೊಂಡು ಹೊಸ ರಾಷ್ಟ್ರವಾದ ಪಾಕಿಸ್ತಾನ ಆಗಸ್ಟ್ 14ರಂದೇ ಸ್ವಾತಂತ್ರೋತ್ಸವ ಆಚರಿಸುತ್ತದೆ. ಬನ್ನಿ ಭಾರತ ತನ್ನ 67ನೇ ಹುಟ್ಟುಹಬ್ಬ ಆಚರಣೆಗೆ ಹೇಗೆ ಸಿದ್ಧತೆ ನಡೆಸಿದೆ ನೋಡೋಣ...

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

ಅಣ್ಣಾ ಹಜಾರೆ

ಅಣ್ಣಾ ಹಜಾರೆ

ಭ್ರಷ್ಟಾಚಾರ ರಹಿತ ಭಾರತದ ಕನಸು ಕಂಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಅಮೆರಿಕದಲ್ಲಿ ನಡೆಯುವ ಭಾರತದ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್ ನಲ್ಲಿ ಆಗಸ್ಟ್ 18 ರಂದು ನಡೆಯುವ ಪರೇಡ್ ನಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿದೆ ಎಂದು ಸ್ವತಃ ಅಣ್ಣಾ ಹಜಾರೆ ಅವರೇ ಹೇಳಿದ್ದಾರೆ.

ಸಮಸ್ಯೆಗಳಿಂದ ಮುಕ್ತವಾಗಿಲ್ಲ

ಸಮಸ್ಯೆಗಳಿಂದ ಮುಕ್ತವಾಗಿಲ್ಲ

ವಿಶ್ವದ ಅತಿದೊಡ್ಡ ಗಣರಾಜ್ಯ ಭಾರತಕ್ಕೆ ಸ್ವತಂತ್ರ ಬಂದು 66 ವರ್ಷಗಳು ಕಳೆದರೂ ಬಡತನ, ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ, ಮಹಿಳೆ ಮಕ್ಕಳ ಮೇಲೆ ದೌರ್ಜನ್ಯದಿಂದ ಮುಕ್ತವಾಗಿಲ್ಲ. ನಕ್ಸಲರು, ಉಗ್ರರ ಜತೆ ಕಾದಾಟದ ಜತೆಗೆ ಕೋಮು ಗಲಭೆಗಳು, ರಾಜ್ಯ ವಿಭಜನೆಯ ಕೂಗು ಕಾಡುತ್ತಲೇ ಇದೆ.

ಶ್ರೀನಗರದಲ್ಲಿ

ಶ್ರೀನಗರದಲ್ಲಿ

ಕೇಂದ್ರ ಮೀಸಲು ಪಡೆ ಯೋಧರು(CRPF) ಭಕ್ಷಿ ಸ್ಟೇಡಿಯಂ ಡ್ರೆಸ್ ರಿಹರ್ಸಲ್ ನಲ್ಲಿ ತೊಡಗಿದ ದೃಶ್ಯ

ಪುರಿಯಲ್ಲಿ

ಪುರಿಯಲ್ಲಿ

ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಜೈ ಜವಾನ್ ಎಂದು ಯೋಧರ ಬಗ್ಗೆ ಹೆಮ್ಮೆಯಿಂದ ಒಡಿಶಾ ಕಡಲಿನಲ್ಲಿ ಶಿಲ್ಪ ರಚಿಸಿದ್ದಾರೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ....

ನೋ ಪ್ಲಾಸ್ಟಿಕ್

ನೋ ಪ್ಲಾಸ್ಟಿಕ್

ಪ್ಲಾಸ್ಟಿಕ್ ಮುಕ್ತ ನಗರಗಳು ಹೆಚ್ಚಾಗಿರುವುದರಿಂದ ಪ್ಲಾಸ್ಟಿಕ್ ಧ್ವಜದ ಬದಲು ಖಾದಿ ಬಟ್ಟೆಯ ಧ್ವಜಗಳಿಗೆ ಈ ಬಾರಿ ಬೇಡಿಕೆ ಹೆಚ್ಚಿದೆ.

ಶ್ರೀನಗರದಲ್ಲಿ

ಶ್ರೀನಗರದಲ್ಲಿ

ಕೇಂದ್ರ ಮೀಸಲು ಪಡೆ ಯೋಧರು(CRPF) ಭಕ್ಷಿ ಸ್ಟೇಡಿಯಂ ಡ್ರೆಸ್ ರಿಹರ್ಸಲ್ ನಲ್ಲಿ ತೊಡಗಿದ ದೃಶ್ಯ

ಜೋಧ್ ಪುರಯಲ್ಲಿ

ಜೋಧ್ ಪುರಯಲ್ಲಿ

ಜೋಧ್ ಪುರಯಲ್ಲಿ ಶಾಲಾ ಮಕ್ಕಳು ಸ್ವತಂತ್ರ ದಿನದ ಶುಭ ಕೋರಿದ್ದಾರೆ.

ರಾಂಚಿಯಲ್ಲಿ

ರಾಂಚಿಯಲ್ಲಿ

ಜಾರ್ಖಂಡ್ ನಲ್ಲಿ ಪೊಲೀಸರು ತಪಾಸಣೆ ನಡೆಸಿ ಸುರಕ್ಷತೆಯ ಕಾಯುತ್ತಿದ್ದಾರೆ.

ಗುರ್ ಗಾಂವ್ ನಲ್ಲಿ

ಗುರ್ ಗಾಂವ್ ನಲ್ಲಿ

ಸ್ವಾತಂತ್ರೋತ್ಸವ ಅಂಗವಾಗಿ ಶಾಲಾ ಮಕ್ಕಳು ವಿವಿಧತೆಯಲ್ಲಿ ಏಕತೆ ಸಾರಲು ಸಾಂಸ್ಕೃತಿಕ ಕಾರ್ಯಕ್ರಮದ ರಿಹರ್ಸಲ್ ನಡೆಸಿದ್ದಾರೆ.

ದೆಹಲಿಯಲ್ಲಿ

ದೆಹಲಿಯಲ್ಲಿ

67ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ.

ಹುಬ್ಬಳ್ಳಿಯಲ್ಲಿ

ಹುಬ್ಬಳ್ಳಿಯಲ್ಲಿ

ಕರ್ನಾಟಕದ ಹುಬ್ಬಳ್ಳಿಯ ಶಾಲಾ ಮಕ್ಕಳು ಸ್ವಾತಂತ್ರ್ಯ ನಾಯಕರ ನೆನಪಿನ ಉಡುಗೆ ತೊಟ್ಟು ಪೋಷಕರೊಡನೆ ನೀಡಿದ ಪೋಸ್

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರದ ಕರಾಡ್ ನಲ್ಲಿ ಮುಸ್ಲಿಂ ಶಾಲಾ ಮಕ್ಕಳು ಸ್ವಾತಂತ್ರೋತ್ಸವ ಅಂಗವಾಗಿ ರಿಹರ್ಸಲ್ ನಲ್ಲಿ

ಪಟಿಯಾಲಾದಲ್ಲಿ

ಪಟಿಯಾಲಾದಲ್ಲಿ

ಪಟಿಯಾಲಾದಲ್ಲಿ ಶಾಲಾ ಮಕ್ಕಳು ರಚಿಸಿದ ತ್ರಿವರ್ಣದ ರಂಗು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+