ಮೋಟಮ್ಮಗೆ ಮಂತ್ರಿಗಿರಿ: ಇಂದಿರಾ ಫೋಟೋನೇ ಜೀವಾಳ

motamma-displays-photo-card-to-rahul-gandhi-to-get-ministership
ನವದೆಹಲಿ, ಆಗಸ್ಟ್ 2: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮೇಲ್ಮನೆ ಸದಸ್ಯೆ ಮೂಡಿಗೆರೆಯ ಮೋಟಮ್ಮ ಅವರು ಸಿದ್ದರಾಮಯ್ಯ ಸಂಪುಟ ಸೇರುವ ಪ್ರಯತ್ನವನ್ನು ಇನ್ನೂ ಜಾರಿಯಲ್ಲಿಟ್ಟಿದ್ದಾರೆ.

ದಶಕಗಳ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಸೇವೆ ಸಲ್ಲಿಸುತ್ತಾ ಬಂದಿದ್ದರೂ, ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಸರಕಾರ ಇದ್ದರೂ, ಇನ್ನೂ ತಮಗೆ ಸಚಿವರಾಗುವ ಭಾಗ್ಯ ಪ್ರಾಪ್ತಿಯಾಗಿಲ್ಲ ಎಂದು ಚಿಂತಿತರಾಗಿರುವ ಮೋಟಮ್ಮ ಅವರು ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವೊಲಿಸುವ ಕಾರ್ಯಕ್ರಮ ಮುಂದುವರಿಸಿದ್ದಾರೆ.

ಸದ್ಯದ ಮಟ್ಟಿಗೆ ಅದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಚೆಂಡು ಈಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಂಗಳದಲ್ಲಿದೆ. ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿಯಾಗುವಲ್ಲಿ ಯಶಸ್ವಿಯಾದ ಮೋಟಮ್ಮ, ಅವರ ಜತೆ ಒಂದಿಷ್ಟು ಕಾಲ ಚರ್ಚೆ ನಡೆಸುವ ಸದವಕಾಶವನ್ನೂ ಪಡೆದರು.

ಹಿರಿತನದ ಆಧಾರದ ಮೇಲೆ ಮತ್ತು ಪಕ್ಷಕ್ಕೆ ತಾವು ನೀಡಿರುವ ಕೊಡುಗೆಯನ್ನು ಪರಿಗಣಿಸಿ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಮೋಟಮ್ಮನವರು ರಾಹುಲ್ ಎದುರು ಅಲವತ್ತುಕೊಂಡಿದ್ದಾರೆ.

ಇಂದಿರಾ ಗಾಂಧಿ ಅವರ ಕಾಲದಿಂದಲೂ ತಾವು ಪಕ್ಷದಲ್ಲಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಉನ್ನತ ಮಟ್ಟಕ್ಕೆ ಸಾಗಲು ತಾವೂ ದುಡಿದಿರುವುದು ಹೆಗ್ಗಳಿಕೆ ಎಂದು ಮೋಟಮ್ಮ ತಮ್ಮ ಸಾಧನೆಗಳನ್ನು ರಾಹುಲ್ ಮುಂದೆ ಬಿಚ್ಚಿಟ್ಟರು.

ಮೋಟಮ್ಮನವರ ಮಾತನ್ನು ಆಲಿಸಿದ ರಾಹುಲ್, 'ಎಲ್ಲಿ ನಿಮ್ಮ ಬಯೋಡೇಟಾ ಕೊಡಿ. ಪರಿಶೀಲಿಸುತ್ತೇನೆ' ಎಂಬ ಭರವಸೆಯ ಮಾತನ್ನಾಡಿದ್ದಾರೆ. ಆದರೆ ಭೇಟಿ ಸಮಯದಲ್ಲಿ ಮೋಟಮ್ಮ ತಮ್ಮ ಬಯೋಡೇಟಾವನ್ನು ತೆಗೆದುಕೊಂಡು ಹೋಗಿರಲಿಲ್ಲ. ಆದರೆ ಅದಕ್ಕಿಂತ 'ಅಮೂಲ್ಯವಾದ' ಫೋಟೋ ಒಂದು ಅವರ ಬ್ಯಾಗಿನಲ್ಲಿತ್ತು. ಅದು ಮೋಟಮ್ಮ ನವರ ಮದುವೆಗೆ ಇಂದಿರಾ ಗಾಂಧಿ ಅವರು ಬಂದಿದ್ದಾಗ ತೆಗೆದ ಫೋಟೊ. ಆಗ ತೆಗೆಸಿಕೊಂಡಿದ್ದ ಫೋಟೋವನ್ನು ಜೋಪಾನವಾಗಿಟ್ಟುಕೊಂಡಿರುವ ಮೋಟಮ್ಮ, ತಾವು ಎಲ್ಲೇ ಹೋಗಲಿ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಅದನ್ನು ಇಟ್ಟುಕೊಂಡಿರುತ್ತಾರೆ.

ಇಂದಿರಾ ಜತೆಗಿನ ತಮ್ಮ ಫೋಟೋ ಬ್ಯಾಗಿನಲ್ಲಿ ಭದ್ರವಾಗಿರುವುದು ಮೋಟಮ್ಮನವರಿಗೆ ತಕ್ಷಣ ಜ್ಞಾಪಕಕ್ಕೆ ಬಂದಿದೆ. ಸರಕ್ಕಂತ ಬ್ಯಾಗಿಗೆ ಕೈಹಾಕಿದವರೇ 'ಸಚಿವ ಪದವಿ ಸಿಕ್ಕೇ ಬಿಟ್ಟಿತು' ಎಂಬ ಸಂತೋಷ/ಸಂಭ್ರಮದಲ್ಲಿ ಫೋಟೋವನ್ನು ರಾಹುಲ್ ಮುಂದೊಡ್ಡಿದ್ದಾರೆ.

ಅಜ್ಜಿಯ ಮುಖ ನೋಡಿ ರಾಹುಲ್ ಮುಖಾರವಿಂದ ಅರಳುತ್ತಿದ್ದಂತೆ... ಇದೇ ಸುಸುಮಯ ಎಂದು ಮೋಟಮ್ಮನವರು 'ಮತ್ತೆ ನನ್ನ ಸಚಿವ ಪದವಿ ವಿಷಯ ಏನಾಯ್ತು?' ಎಂದು ರಾಹುಲರನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ರಾಹುಲ್ ಮುಗುಳ್ನಕ್ಕಿದ್ದಾರೆ. ಅಲ್ಲಿಗೆ ತಮ್ಮ ಕೆಲಸ ಆಯ್ತು ಅಂತ ಅಂದುಕೊಂಡಿರುವ ಮೋಟಮ್ಮನವರು ಯಾವುದಕ್ಕೇ ಆಗಲಿ ಇರಲಿ ಅಂತ ಹಾಗೆಯೇ ಸೋನಿಯಾರನ್ನೂ ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದು, ಇನ್ನೂ ಸಮಯ ನಿಗದಿಯಾಗಿಲ್ಲ.

ಮೋಟಮ್ಮ ರಾಜ್ಯಸಭೆಗೆ?
ಈ ಮಧ್ಯೆ, ಮೇಲ್ಮನೆ ಸದಸ್ಯೆ ಮೋಟಮ್ಮನವರನ್ನು ರಾಜ್ಯಸಭೆಗೆ ಆರಿಸಿಕಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+