ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮತ್ತೊಂದು ಉಪ ಚುನಾವಣೆ ಘೋಷಣೆ

|
Google Oneindia Kannada News

anil lad
ನವದೆಹಲಿ, ಜು.26 : ರಾಜ್ಯದಲ್ಲಿ ಮತ್ತೊಂದು ಉಪ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಅನಿಲ್‌ ಲಾಡ್‌ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಆಗಸ್ಟ್‌ 29 ರಂದು ಚುನಾವಣೆ ನಡೆಯಲಿದೆ.

ಪ್ರತಿಕಾ ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗದ ಕಾರ್ಯದರ್ಶಿ ಸುಮಿತ್ ಮುಖರ್ಜಿ, ಆ.12 ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದ್ದು, 29 ರಂದು ಚುನಾವಣೆ ನಡೆಯಲಿದೆ. ಅಂದು ಸಂಜೆಯೇ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತ್ತು ಮೈಸೂರು ಕ್ಷೇತ್ರದ ವಿಧಾನಪರಿಷತ್ ಉಪ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಚುನಾವಣಾ ಆಯೋಗ, ರಾಜ್ಯಸಭಾ ದಿನಾಂಕ ಪ್ರಕಟಿಸುವ ಮೂಲಕ ಮತ್ತೊಂದು ಉಪ ಚುನಾವಣೆ ಘೋಷಿಸಿದೆ. (ವಿಧಾನಪರಿಷತ್ ಉಪ ಚುನಾವಣೆ ವೇಳಾಪಟ್ಟಿ)

ರಾಜ್ಯಸಭಾ ಸದಸ್ಯರಾಗಿದ್ದ ಅನಿಲ್ ಲಾಡ್ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ರಾಜ್ಯಸಭಾ ಸ್ಥಾನಕ್ಕೆ ಮೇ 20 ರಂದು ರಾಜೀನಾಮೆ ನೀಡಿದ್ದರು. ಅವರ ಸದಸ್ಯತ್ವ ಅವಧಿ 2014ರ ಜೂನ್‌ 25ರವರೆಗೆ ಇತ್ತು. (ಲೋಕಸಭೆ ಉಪ ಚುನಾವಣೆ ವೇಳಾಪಟ್ಟಿ)

ಆದ್ದರಿಂದ ನೂತನ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ರಾಜ್ಯದ ವಿಧಾನಸಭಾ ಸದಸ್ಯರು ನೂತನ ರಾಜ್ಯಸಭಾ ಸದಸ್ಯರನ್ನು ಚುನಾಯಿಸಲಿದ್ದಾರೆ.

ಚುನಾವಣಾ ವೇಳಾಪಟ್ಟಿ ಹೀಗಿದೆ

ಆ.12 - ಅಧಿಸೂಚನೆ ಪ್ರಕಟ
ಆ. 19 - ನಾಮಪತ್ರ ಸಲ್ಲಿಸಲು ಕೊನೆಯ ದಿನ
ಆ.20 - ನಾಮಪತ್ರಗಳ ಪರಿಶೀಲನೆ
ಆ. 22 - ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಆ.29 - ಮತದಾನ (ಬೆಳಗ್ಗೆ 9 ರಿಂದ ಸಂಜೆ 4 ಗಂಟೆ)
ಆ.29 - ಸಂಜೆ 5 ಗಂಟೆಯ ನಂತರ ಮತ ಎಣಿಕೆ ಫಲಿತಾಂಶ ಪ್ರಕಟ

English summary
The Election Commission announced bye-election schedule of Karnataka. On August 29 election held for Rajya Sabha seat to fill the vacancy caused by the resignation of sitting MLA Anil Lad. The notification for the bye-election will be issued on August 12 and the last date for making nominations is August 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X