ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧಕ್ಕರ್ಧ ಬಸ್ಸುಗಳು ರಸ್ತೆಗಿಳಿಯುವುದಕ್ಕೆ ನಾಲಾಯಕ್

By Srinath
|
Google Oneindia Kannada News

half-of-govt-buses-not-road-worthy-according-to-rto-law
ಬೆಂಗಳೂರು, ಜುಲೈ 26: ಯಾವುದೇ ಬಸ್ಸು 7.5 ಲಕ್ಷ ಕಿಮೀ ಸಂಚರಿಸಿದ್ದರೆ ಅಥವಾ 10 ವರ್ಷ ಹಳೆಯದಾಗಿದ್ದರೆ (ಯಾವುದು ಮೊದಲೋ ಅದು) ಅಂತಹ ಬಸ್ಸನ್ನು ಗ್ಯಾರೇಜಿನಲ್ಲೇ ನಿಲ್ಲಿಸಬೇಕು ಎನ್ನುತ್ತದೆ ರಾಜ್ಯ ಸಾರಿಗೆ ಇಲಾಖೆ. ಇದು ಸರಕಾರಿ ಬಸ್ಸುಗಳನ್ನು ಹೊಂದಿರುವ ಬಿಎಂಟಿಸಿ/ಕೆಎಸ್ಆರ್ ಟಿಸಿಗೂ ಅನ್ವಯಿಸುತ್ತದೆ.

ಆದರೆ ಬಿಎಂಟಿಸಿ/ಕೆಎಸ್ಆರ್ ಟಿಸಿ ಸಂಸ್ಥೆಗಳೆರಡೂ ಈ ನಿಯಮವನ್ನು ತನೆಗ ಅನ್ವಯಿಸಿಕೊಂಡಿಲ್ಲ. ಏನು ಹಾಗೆಂದರೆ? ಏನಪ್ಪಾ ಅಂದರೆ...

KSRTCಯಲ್ಲಿರುವ 3,295 ಬಸ್ಸುಗಳು 7.5 ಲಕ್ಷ ಕಿಮೀ ದಾಟಿ ಬಹು ದೂರ ಸಾಗಿ ಯಾವುದೋ ಕಾಲವಾಗಿದೆ. ಅಂದರೆ ಮತ್ತೊಂದು ಷರತ್ತಾದ 10 ವರ್ಷ ಪ್ರಾಯವನ್ನೂ ದಾಟಿದೆ. ಇದರಲ್ಲಿ 444 ಬಸ್ಸುಗಳು 10 ಲಕ್ಷ ಕಿಮೀ ದೂರವನ್ನೂ ದಾಟಿದೆ. ಇದರರ್ಥ ಸರಳ- KSRTCಯಲ್ಲಿರುವ 7,864 ಬಸ್ಸುಗಳು ಪೈಕಿ ಅರ್ಧದಷ್ಟು ಬಸ್ಸುಗಳು ರಸ್ತೆಗಿಳಿಯುವುದಕ್ಕೆ ನಾಲಾಯಕ್ ಆಗಿವೆ. ಆದರೂ ಜನರನ್ನು ದಿನಾ ಹೊತ್ತೊಯ್ಯುತ್ತಿವೆ!

ಮೊನ್ನೆ ಮಂಗಳವಾರ ರಾಜ್ಯದಲ್ಲಿ ಭೀಕರ ಅಪಘಾತವಾಗಿರುವ ಬೆನ್ನಿಗೆ ಇಂತಹ KSRTC ಬಸ್ಸುಗಳು ಮೇಲೆ ಬೆಳಕು ಚೆಲ್ಲಲಾಗಿದೆ. ಹಾಸನ ಬಳಿ ಸಂಭವಿಸಿದ ಬಸ್ಸು ಸಹ 7.5 ಲಕ್ಷ ಕಿಮೀ ಮಿತಿಯನ್ನು ದಾಟಿತ್ತು.

ಆದರೆ KSRTC ಸಂಸ್ಥೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇದೆಲ್ಲಾ ವಾಸ್ತವಕ್ಕೆ ದೂರ. ಅದರಲ್ಲೂ ಅಗಘಾತಕ್ಕೀಡಾದ ಬಸ್ಸು ತಾಂತ್ರಿಕವಾಗಿ ಅಸಮರ್ಥವಾಗಿತ್ತು ಎಂಬುದು ಸತ್ಯಕ್ಕೆ ದೂರವಾದ ಮಾತು. ಆರ್ ಟಿಒ, ಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರುಗಳು, ಟಾಟಾ ಕಂಪನಿ ಅವರೆಲ್ಲ ಪ್ರಮಾಣೀಕರಿಸಿ ಹೇಳುವಂತೆ ಬಸ್ಸಿನಲ್ಲಿ ಯಾವುದೇ ದೋಷ ಇರಲಿಲ್ಲ. ನಮ್ಮಲ್ಲಿರುವ ಬಸ್ಸುಗಳ ಆಯಸ್ಸು ಇನ್ನೂ ಸರಾಸರಿ 3.49 ವರ್ಷವಷ್ಟೇ ಆಗಿದೆ ಎನ್ನುತ್ತಾರೆ ಸಂಸ್ಥೆಯ ಎಂಡಿ ಎನ್ ಮಂಜುನಾಥ್.

ಈ ಮಧ್ಯೆ ಸಂಸ್ಥೆಯೇ ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ. ರಾಜ್ಯ ಸಾರಿಗೆ ಇಲಾಖೆಯ ನಿಮಗಳನ್ನು ಗಾಳಿಗೆ ತೂರಿ ಬಸ್ಸು 7.5 ಲಕ್ಷ ಕಿಮೀ ಸಂಚರಿಸಿದ್ದರೂ ಅದು ಇನ್ನೂ ಸದೃಢವಾಗಿದೆ ಎಂದು ಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರುಗಳು ಮತ್ತು ಡಿಪೋ ಮ್ಯಾನೇಜರುಗಳು ವರದಿ ನೀಡಿದರೆ ಅಂತಹ ಬಸ್ಸನ್ನು ಇನ್ನೂ ಒಂದು ಲಕ್ಷ ಕಿಮೀ ಹೆಚ್ಚಿನ ಸಂಚಾರಕ್ಕೆ ಬಿಡುತ್ತೇವೆ ಎಂಬ ಪ್ರತಿವಾದ ಮುಂದೊಡ್ಡುತ್ತಾರೆ ಮಂಜುನಾಥ್.

BMTC ಬಸ್ಸುಗಳೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಸಂಸ್ಥೆಯ 6,554 ಬಸ್ಸುಗಳ ಪೈಕಿ 400 ಬಸ್ಸುಗಳು 7.5 ಲಕ್ಷ ಕಿಮೀ ಮಿತಿಯನ್ನು ದಾಟಿವೆ. ಆದರೂ ಅವಿನ್ನೂ ರಸ್ತೆಯಲ್ಲಿ ಸಂಚರಿಸುತ್ತಿವೆ.

English summary
According to RTO laws in Karnataka, half of the government buses in KSRTC and BMTC are not road worthy. A bus that has logged more than 7.5 lakh km or is 10 years old (whichever is early) must be rested. So says the rulebook of the state transport department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X