ಸಂಸ್ಕೃತ ವಿವಿ ನಿಷ್ಕ್ರಿಯವಾಗಿದೆ : ರಾಜ್ಯಪಾಲರು

ಭಾನುವಾರ ಭಾರತೀಯ ವಿದ್ಯಾಭವನ ಇಸ್ಕಾನ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೇದ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಹೊತ್ತಿರುವ ರಾಜ್ಯದ ಸಂಸ್ಕೃತ ವಿಶ್ವವಿದ್ಯಾಲಯ ತನ್ನ ಕೆಲಸದಲ್ಲಿ ನಿರ್ವಹಿಸಲು ವಿಫಲವಾಗಿದೆ ಎಂದು ದೂರಿದರು.
ಎಲ್ಲಾ ಭಾಷೆಗಳಿಗೆ ಸಂಸ್ಕೃತ ಭಾಷೆ ತಾಯಿ ಇದ್ದಂತೆ. ಇಂತಹ ಸಂಸ್ಕೃತ ಭಾಷೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಲು ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಆರಂಭಿಸಲಾಯಿತು. ಆದರೆ, ವಿಶ್ವವಿದ್ಯಾಲಯ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಸಂಸ್ಕೃತ ವಿಶ್ವವಿಶ್ವವಿದ್ಯಾನಿಲಯ, ಜನರಿಗೆ ತನ್ನ ಉದ್ದೇಶ ತಲುಪಿಸುವಲ್ಲಿ ವಿಫಲವಾಗಿದೆ. ಸರ್ಕಾರ ಸಹ, ವಿಶ್ವವಿದ್ಯಾನಿಲಯಕ್ಕೆ, ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು.
ವಿವಿ ಅಭಿವೃದ್ಧಿಗೊಳಿಸಿ : ಸಂಸ್ಕೃತ ಪರ್ಶಿಯನ್ ಭಾಷೆಯಷ್ಟೇ ಪುರಾತನವಾದದ್ದು, ಸಂಸ್ಕೃತವನ್ನು ಪರ್ಶಿಯನ್ನರು ತಮ್ಮ ತಾಯಿ ಎಂದು ಒಪ್ಪಿಕೊಂಡಿದ್ದಾರೆ. ಹಾರ್ವಾಡ್ ವಿಶ್ವವಿದ್ಯಾಲಯ ಸಹ ಸಂಸ್ಕೃತ ಭಾಷೆ ಉಳಿವಿಗಾಗಿ ಪ್ರತ್ಯೇಕ ಕೋರ್ಸ್‌ಗಳನ್ನು ನಡೆಸುತ್ತಿದೆ.
ಆದರೆ, ಕರ್ನಾಟಕದಲ್ಲಿ ಸಂಸ್ಕೃತ ಭಾಷೆಯ ಉಳಿವಿಗಾಗಿ ವಿಶ್ವವಿದ್ಯಾಲಯ ಆರಂಭಿಸಲಾಗಿದ್ದರೂ, ವಿವಿ ನೆಪ ಮಾತ್ರಕ್ಕೆ ಎಂದು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸರ್ಕಾರ ಸಂಸ್ಕೃತ ವಿಶ್ವವಿದ್ಯಾಲದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು.












Click it and Unblock the Notifications