ಚಿತ್ರಗಳಲ್ಲಿ: ಕಳೆದ ವಾರದ ಸುದ್ದಿಗಳ ಕಥೆ ವ್ಯಥೆ
ಬೆಂಗಳೂರು, ಜು.21: ಕಳೆದ ವಾರದ ಸುದ್ದಿಗಳತ್ತ ಹಿಂತಿರುಗಿ ನೋಡಿದಾಗ ಮೊದಲಿಗೆ ಕಣ್ಣಾಲಿಗಳು ತುಂಬಿ ಬರುತ್ತವೆ. ಬಿಹಾರದ ಚಾಪ್ರಾದಲ್ಲಿನ ಬಿಸಿಯೂಟ ದುರಂತ ದೇಶಕ್ಕೆ ದೊಡ್ಡ ಪಾಠವಾಗಿದೆ. ಸುಮಾರು 20ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡ ಈ ಪ್ರಕರಣಕ್ಕೆ ಶಾಲಾ ಮುಖ್ಯಸ್ಥರೇ ಹೊಣೆ ಎನ್ನಲಾಗಿದೆ.
ಬಿಸಿಯೂಟದಿಂದ ಮಕ್ಕಳ ಸಾವು ನೋವು ಕಂಡು ಹಲವಾರು ಸಂಘಟನೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಪೊಲೀಸರು ಪರಿಸ್ಥಿತಿ ಮಿತಿ ಮೀರಿದಾಗ ಲಾಠಿ ಬೀಸಿದ್ದಾರೆ. ಆಹಾರದಲ್ಲಿ ರಸಗೊಬ್ಬರದ ಅಂಶ ಮಿಶ್ರಣವಾಗಿತ್ತು ಬಲವಂತವಾಗಿ ಮಕ್ಕಳಿಗೆ ಆಹಾರ ತಿನ್ನುವಂತೆ ಶಾಲಾ ಮುಖ್ಯಸ್ಥ ತಾಕೀತು ಮಾಡಿದ್ದರು ಎನ್ನಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಪರಿಹಾರ ರೂಪದಲ್ಲಿ ಕಳುಹಿಸಿ ಕೋಟಿಗಟ್ಟಲೆ ಹಣವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಪಸ್ ಕಳುಹಿಸಿದ್ದಾರೆ.
ಉಳಿದಂತೆ ಪಶ್ಚಿಮ ಬಂಗಾಳ ಎಲೆಕ್ಷನ್ ಗಲಭೆ, ಗೊಂದಲ, ಹಿಂಸಾಚಾರ ಅಮಾಯಕ ಪೊಲೀಸರ ಬಲಿ, ಅಮೆರಿಕ ಪಾಲಿಗೆ ತಲೆಬೇನೆಯಾಗಿರುವ ಎಡ್ವರ್ಡ್ ಸ್ನೊಡೆನ್ ಗೆ ನೊಬೆಲ್ ನಾಮಾಂಕಣ. ನರೇಂದ್ರ ಮೋದಿ ಜನಪ್ರಿಯತೆ ಒರಿಸ್ಸಾದತ್ತ ಸಾಗಿರುವುದು, ಬಿಜೆಪಿ ತನ್ನ ಹೊಸ ಟೀಂ ಘೋಷಿಸಿದ್ದು, ಭಾರತದೆಲ್ಲೆಡೆ ಮಳೆ ಆರ್ಭಟ ಇವೆ ಮುಂತಾದ ಸುದ್ದಿಗಳು ಸದ್ದು ಮಾಡಿದವು. ಭಾನುವಾರದ ಹೊತ್ತಿಗೆ ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆ ಪ್ರಮುಖವಾಗಿತ್ತು.
ಕ್ರೀಡಾರಂಗದ ಪ್ರಮುಖ ಬೆಳವಣಿಗೆಯಲ್ಲಿ ಕ್ರಿಕೆಟ್ 'ದೇವರು'ಸಚಿನ್ ಬದಲಿಗೆ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಹೆಸರು ಭಾರತ ರತ್ನ ಪ್ರಶಸ್ತಿಗೆ ಕಳಿಸಿದ್ದು ದೊಡ್ಡ ಚರ್ಚೆಯಾಗುತ್ತಿದೆ. ಕಳೆದ ವಾರ ಘಟಿಸಿದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ. ತಪ್ಪದೇ ನೋಡಿ

ಧ್ಯಾನ್ ಚಂದ್ vs ಸಚಿನ್ ತೆಂಡೂಲ್ಕರ್
ಕೇಂದ್ರ ಕ್ರೀಡಾ ಸಚಿವಾಲಯ ಸಚಿನ್ ತೆಂಡೂಲ್ಕರ್ ಬದಲಿಗೆ ಹಾಕಿ ಪಟು ಧ್ಯಾನ್ ಚಂದ್ ಅವರ ಹೆಸರನ್ನು ಪ್ರಸಕ್ತ ಸಾಲಿನ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಬಿಸಿಯೂಟ ದುರಂತ
ಬಿಹಾರಾದ ಚಾಪ್ರಾದಲ್ಲಿನ ಶಾಲೆಯೊಂದರಲ್ಲಿ ನಡೆದ ಬಿಸಿಯೂಟ ಉಂಡ ಮಕ್ಕಳು ಸಾವಿಗೆ ಶರಣಾಗಿದ್ದು ದುರಂತ.

ವಿದೇಶಿ ನೇರ ಬಂಡವಾಳ ಹೂಡಿಕೆ
ಆರ್ಥಿಕ ಸುಧಾರಣೆ ನೆಪದಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಏರಿಕೆ ಮಾಡಿತು. ಟೆಲಿಕಾಂ ಕ್ಷೇತ್ರದಲ್ಲಿ ಶೇ 100 ಎಫ್ ಡಿಐ ಸೇರಿದಂತೆ ಸುಮಾರು 13 ಕ್ಷೇತ್ರಗಳಲ್ಲಿನ ಹೂಡಿಕೆ ಪ್ರಮಾಣ ಮೇಲಕ್ಕೇರಿದೆ.

ಪುರಿಯಲ್ಲಿ ಮೋದಿ
ಕಳೆದ ವಾರ ಪುರಿ ಜಗನ್ನಾಥ ರಥ ಯಾತ್ರೆ ಜೊತೆಗೆ ಒಡಿಸ್ಸಾದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಜೋರಾಗಿ ಬೀಸಿತ್ತು.

ಪಶ್ಚಿಮ ಬಂಗಾಳ ಎಲೆಕ್ಷನ್
ಪಶ್ಚಿಮ ಬಂಗಾಳದ ಗ್ರಾಮ ಪಂಚಾಯಿತಿ ಚುನಾವಣೆ ಕುರಿತ ಭಾನುವಾರದ ಸುದ್ದಿ ಪ್ರಕಾರ ಘರ್ಷಣೆಯಲ್ಲಿ ಸುಮಾರು 7 ಜನ ಅಮಾಯಕ ಪೊಲೀಸರು ಬಲಿಯಾಗಿದ್ದಾರೆ. ಆದರೆ, ಈ ನಡುವೆ ಮಹಿಳಾ ಮತದಾರರು ಧೈರ್ಯವಾಗಿ ಮತದಾನಕ್ಕಾಗಿ ಆಗಮಿಸುತ್ತಿದ್ದಾರೆ.

ಬಿಜೆಪಿ ಕೋರ್ ಕಮಿಟಿ
ನರೇಂದ್ರ ಮೋದಿ ನೇತೃತ್ವದ ಚುನಾವಣಾ ಪ್ರಚಾರ ಸಮಿತಿ ಸಾಮಾಜಿಕ ಜಾಲ ತಾಣ ರಚಿಸಿದ ನಂತರ ಹೊಸ ಟೀಂ ಪ್ರಕಟಿಸಿತು. ವಿವರ ಇಲ್ಲಿದೆ.

ರಂಬಾನಿ ಗಲಭೆ
ಶ್ರೀನಗರದಲ್ಲಿ ಇತ್ತೀಚಿಗೆ ರಾಂಬನ್ ಗಲಭೆಯಲ್ಲಿ ಹಲವರಿಗೆ ಗಾಯಗಳಾಗಿತ್ತು. ಶ್ರೀನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಅಮರನಾಥ ಯಾತ್ರೆ ಕೂಡಾ ಸ್ಥಗಿತಗೊಳಿಸಲಾಗಿತ್ತು.

ಅಸ್ಸಾಂನಲ್ಲಿ ಮಳೆ
ಮಳೆ ನಡುವೆ ಸಾಗುತ್ತಿರುವ ಮೋಟರ್ ಸೈಕಲ್ ಸವಾರ. ಮಧ್ಯಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ದೆಹಲಿಯಲ್ಲೂ ಇದೇ ಪರಿಸ್ಥಿತಿ

ಸ್ನೊಡೆನ್ ಗೆ ನೊಬೆಲ್?
ಯುಎಸ್ ಬೇಹುಗಾರಿಕೆ ರಹಸ್ಯ ಬಿಚ್ಚಿಟ್ಟ ಎಡ್ವರ್ಡ್ ಸ್ನೊಡೆನ್ ಗೆ ಆಶ್ರಮ ನೀಡಲು ಹಲವು ದೇಶಗಳು ಮುಂದೆ ಬಂದರೂ ಸೂಕ್ತ ನೆಲೆ ಸಿಕ್ಕಿಲ್ಲ. ಈ ನಡುವೆ ಸ್ವೀಡನ್ನಿನ ಪ್ರೊಫೆಸರ್ ಒಬ್ಬರ್ ಸ್ನೊಡೆನ್ ಅವರ ಹೆಸರನ್ನು ನೊಬೆಲ್ ಶಾಂತಿ ಪಾರಿತೋಷಕಕ್ಕೆ ನಾಮಾಂಕಿತಗೊಳಿಸಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ ಓದಿ

ಕೆಂಪೇಗೌಡರ ಹೆಸರು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿತು. ಸುದ್ದಿ ವಿವರ ಇಲ್ಲಿದೆ ಓದಿ

ಟೆಲಿಗ್ರಾಂ ಅವಸಾನ
160 ವರ್ಷ ಇತಿಹಾಸವುಳ್ಳ ಟೆಲಿಗ್ರಾಂ ಅವಸಾನ ಕಂಡಿದೆ. ಕಟ್ಟಕಡೆಯ ಸಂದೇಶ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಳಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ ಓದಿ

ವಿಶ್ವಕ್ಕೆ ಹೊಸ ಭಾಷೆ
ಆಸ್ಟ್ರೇಲಿಯಾದಲ್ಲಿ ಹೊಸ ಭಾಷೆ ಕಂಡು ಆವಿಷ್ಕರಿಸಲಾಗಿದೆ. ಸುಮಾರು 350 ಜನರು ಮಾತನಾಡುವ ಈ ಭಾಷೆಯನ್ನು Light Warlpiri ಎಂದು ಗುರುತಿಸಲಾಗಿದೆ.

ತಂಬಾಕು ನಿಷೇಧ
ಕಳೆದ ವಾರ ಅಸ್ಸಾಂ ಅಸೆಂಬ್ಲಿಯಲ್ಲಿ ತಂಬಾಕು ನಿಷೇಧಗೊಳಿಸಲು ಸಶಕ್ತ ಕಾಯ್ದೆಯನ್ನು ಅಂಗೀಕರಿಸಲಾಯಿತು. ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಈಗಾಗಲೇ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಿವೆ.

ನೆಲ್ಸನ್ ಮಂಡೇಲ @95
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾದ ಹಿರಿಯ ಮುಖಂಡ ನೆಲ್ಸನ್ ಮಂಡೇಲ ಅವರ 95ನೇ ಹುಟ್ಟು ಹಬ್ಬ ಕಳೆದ ವಾರ ಆಚರಿಸಲಾಯಿತು.

ಬೆಂಗಳೂರು FC
ಬೆಂಗಳೂರು: ಎಐಎಫ್ಎಫ್ ಅಧ್ಯಕ್ಷ, ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ಬೆಂಗಳೂರು ಫುಟ್ಬಾಲ್ ಕ್ಲಬ್ ನಾಯಕ ಸುನಿಲ್ ಛೆಟ್ರಿಗೆ ಜರ್ಸಿ ನೀಡಿ ತಂಡಕ್ಕೆ ಚಾಲನೆ ನೀಡಿದರು. ಜಿಂದಾಲ್ ಸ್ಟೀಲ್ ಒಡೆತನದ ತಂಡ ಇದಾಗಿದೆ.

ಚೀನಾ ಸ್ಫೋಟ
ಬೀಜಿಂಗ್: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ವ್ಹೀಲ್ ಚೇರ್ ಮೇಲೆ ಕುಳಿತ ವ್ಯಕ್ತಿ ಬಾಂಬ್ ಸ್ಫೋಟಿಸಿದ ನಂತರ ಪೊಲೀಸ್ ಅಧಿಕಾರಿಯೊಬ್ಬರು ಸ್ಯಾಂಪಲ್ ಸಂಗ್ರಹಿಸುತ್ತಿದಾರೆ.

ಆಷ್ಯಸ್ ಸರಣಿ
ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಸೋತಿರುವ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ನಲ್ಲಿ ಜೋ ರೂಟ್ ಆಟಕ್ಕೆ ಶರಣಾಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ರೂಟ್ 180 ರನ್ ಹೊಡೆದು ಇಂಗ್ಲೆಂಡ್ ಗೆಲುವಿನ ಕನಸು ಭದ್ರ ಪಡಿಸಿದರು












Click it and Unblock the Notifications