ಕರ್ನಾಟಕದ ಜಿಲ್ಲಾ ಸುದ್ದಿಗಳ ಕ್ವಿಕ್ ಲುಕ್

Karnataka
ಹುಬ್ಬಳ್ಳಿ : ಹುಬ್ಬಳ್ಳಿಯ ಗುರುಸಿದ್ದೇಶ್ವರ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 5.30 ಕೋಟಿ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕಿನ ನಿರ್ದೇಶಕರು ಹಣದ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಹುಬ್ಬಳ್ಳಿಯ ಹೊಸನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬ್ಯಾಂಕ್ ನಿರ್ದೇಶಕರಾದ ಪರಣ್ಣ ಮನುವಳ್ಳಿ ಸೇರಿದಂತೆ 13 ಮಂದಿ ಹಾಗೂ ಆಡಳಿತ ಸಲಹೆಗಾರರ ವಿರುದ್ಧ ಪ್ರಕರಣ ದಾಖಲಾಗಿದೆ. ರೈತರ ಸಾಲ ಮನ್ನಾ ಯೋಜನೆಗೆ ಬಂದ ಹಣ ದುರುಪಯೋಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಳಗಾವಿ : ಐಷಾರಾಮಿ ಜೀವನ ನಡೆಸಲು ಮನೆಗಳವು ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬೆಳಗಾವಿಯ ಮಾರುತಿ ನಗರ ಪೊಲೀಸರು ಬಂಧಿಸಿದ್ದಾರೆ. ಮಂಜಿತ್ ಮತ್ತು ಸಜೀತ್ ಬಂಧಿತ ವಿದ್ಯಾರ್ಥಿಗಳು. 2 ವರ್ಷಗಳಲ್ಲಿ ವಿದ್ಯಾರ್ಥಿಗಳು 9 ಮನೆಗಳನ್ನು ಕಳವು ಮಾಡಿದ್ದಾರೆ. ಬಂಧಿತರಿಂದ 2 ಬೈಕ್, 1 ಕಾರು, 2 ಲ್ಯಾಪ್ ಟಾಪ್ ಮತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು : ಬೆಂಗಳೂರಿನ ವಿಪ್ರೋ ಕಂಪನಿಯ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿದೆ. ಸರ್ಜಾಪುರದ ಪೊಲೀಸ್ ಠಾಣೆ ಬಂದಿರುವ ಪತ್ರದಲ್ಲಿ ಶುಕ್ರವಾರ ಕಚೇರಿಯನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿಲಾಗಿದೆ. ಪೊಲೀಸರು ಪತ್ರ ಬರೆದಿರುವುದು ಯಾರು? ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಸರ್ಜಾಪುರ ಪೊಲೀಸ್ ಠಾಣೆಗೆ ಶುಕ್ರವಾರ ಬೆಳಗ್ಗೆ ಬಂದಿರುವ ಪತ್ರದಲ್ಲಿ ವಿಪ್ರೋದಲ್ಲಿ ಶುಕ್ರವಾರ ಮಧ್ಯಾಹ್ನ 12.30 ಮತ್ತು ಸಂಜೆ 4 ಗಂಟೆಗೆ ಎರಡು ಸ್ಫೋಟಗಳನ್ನು ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ಪೊಲೀಸರು ಪತ್ರ ಬರೆದಿರುವ ವ್ಯಕ್ತಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ತುಮಕೂರು : ತುರುವೇಕೆರೆ ತಾಲೂಕಿನ ಕರುಡಗೆರೆ ಗ್ರಾಮದಲ್ಲಿ ಒಂದು ವರ್ಷದ ಮಗು ವಿಶಾಲ್ ಅನ್ನು ಕತ್ತು ಕಿಸುಕಿ ಕೊಲೆಮಾಡಿರುವ ದಾರುಣ ಘಟನೆ ನಡೆದಿದೆ. ಮಗುವಿನ ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತಂದೆ, ಅಜ್ಜ, ಮತ್ತು ಅಜ್ಜಿ ಸೇರಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳೂರು : ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕೊಣಾಜೆ ಗ್ರಾಮದ ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಕೆ‌ಎಸ್‌ಆರ್ ಪಿ ಏಳನೇ ಬೆಟಾಲಿಯನ್ ಹೆಡ್‌ಕಾನ್ಸ್‌ಟೇಬಲ್ ಅಪ್ಪೂಸ್ ಅವರ ಪತ್ನಿ ಜೂಲಿಯಟ್ ಮಸ್ಕರೇನಸ್(೫೦) ಮೃತಪಟ್ಟವರು. ಕಳೆದ ಮೂರು ತಿಂಗಳಿನಿಂದ ಇವರು ಜ್ವರದಿಂದ ಬಳಲುತ್ತಿದ್ದರು.

ಬೆಂಗಳೂರು : ಮಗನೇ ತಂದೆಯನ್ನು ಕೊಲೆ ಮಾಡಿ ಹೂತು ಹಾಕಿರುವ ಪ್ರಕರಣದ ನಗರದ ಬೈಚುಕುಪ್ಪೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣಪ್ಪ (55) ಮೃತ ವ್ಯಕ್ತಿ. ಕೃಷ್ಣಪ್ಪ ಪುತ್ರ ಕಾಂತರಾಜು ಆಸ್ತಿ ವಿವಾದ ಹಿನ್ನೆಲೆಯಲ್ಲಿ ತಂದೆಯನ್ನು ಕೊಲೆ ಮಾಡಿದ್ದ. ಮೇ 28ರಂದು ಕೃಷಪ್ಪ ನಾಪತ್ತೆಯಾಗಿದ್ದರು.

ಜೂನ್ 27 2013ರಂದು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.ತನಿಖೆ ನಡೆಸಿದ ಪೊಲೀಸರು ಕೃಷ್ಣಪ್ಪ ಮಗ ಕಾಂತರಾಜು, ಅವರನ್ನು ಬಂಧಿಸಿದ್ದಾರೆ. ಕಾಂತರಾಜುವಿಗೆ ಸಹಾಯ ಮಾಡಿದ್ದ ವ್ಯಕ್ತಿ ಜಯರಾಜು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+