ಸೌದಿಯಲ್ಲಿನ ಭಾರತೀಯರಿಗೆ ಕೊಂಚ ನೆಮ್ಮದಿ!

Saudi Arabia
ಕೊಚ್ಚಿ, ಜು.4 : ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯಿಂದಾಗಿ ದೇಶ ತೊರೆಯಬೇಕಾಗಿದ್ದ ಭಾರತೀಯರಿಗೆ ಕೊಂಚ ಸಮಾಧಾನ ಸಿಕ್ಕಿದೆ. ಅಕ್ರಮ ವಲಸಿಗರಿಗೆ ತಾಯ್ನಾಡಿಗೆ ಮರಳಲು ನೀಡಿದ್ದ ಗಡುವನ್ನು ಸೌದಿ ಸರ್ಕಾರ ನವೆಂಬರ್ ವರೆಗೆ ವಿಸ್ತರಿಸಿದೆ.

ಸ್ಥಳೀಯರಿಗೆ ಉದ್ಯೋಗವಕಾಶ ಒದಗಿಸುವ ನಿತಾಕತ್ ನಿಯಮದಿಂದಾಗಿ ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಳ್ಳುವ ವಿದೇಶಿಯರು. ಜುಲೈ 3ರಂದು ದೇಶ ತೊರೆಯಬೇಕೆಂದು ಸೌದಿ ಸರ್ಕಾರ ಗಡುವು ನೀಡಿತ್ತು.

ನಂತರ ದೇಶದಲ್ಲಿ ವಾಸಿಸುವ ಜನರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಆದರೆ, ಹೊಸ ಆದೇಶ ಹೊರಡಿಸಿರುವ ಸರ್ಕಾರ, ನವೆಂಬರ್ 4ರವರೆಗೆ ದೇಶದಲ್ಲಿ ವಾಸಿಸಬಹುದು ಎಂದು ಗಡುವನ್ನು ವಿಸ್ತರಿಸಿದೆ.

ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ 92 ಸಾವಿರ ಜನರು ತಾಯ್ನಾಡಿಗೆ ಮರಳಲು ತುರ್ತು ಪ್ರಮಾಣ ಪತ್ರಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ರಾಯಭಾರ ಕಚೇರಿ ಮುಖ್ಯಸ್ಥ ಸಿ.ಬಿ.ಜಾರ್ಜ್ ಹೇಳಿದ್ದಾರೆ. (ಭಾರತೀಯರಿಗೆ ತಕ್ಷಣ ವೀಸಾ ಪಡೆದುಕೊಳ್ಳಿ)

ಸೌದಿಯಲ್ಲಿರುವ ಶೇ 50ರಷ್ಟು ಮಂದಿ ಭಾರತಕ್ಕೆ ವಾಪಸಾಗಲು ಬಯಸಿದ್ದಾರೆ. ಉಳಿದವರು ತಮ್ಮ ವಾಸವನ್ನು ಅಧಿಕೃತಗೊಳಿಸಲು ವೀಸಾ ಮತ್ತು ಇತರ ಅಗತ್ಯ ದಾಖಲೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ರಾಯಭಾರಿ ಕಚೇರಿ ತಿಳಿಸಿದೆ. (ನಿತಾಕತ್ ಎಂದರೇನು)

ಕೇರಳ ರಾಜ್ಯದ 5,167 ಜನರು ಭಾರತಕ್ಕೆ ಮರಳಲು ತುರ್ತು ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಸದ್ಯ ದೇಶದಲ್ಲಿ ವಾಸ ಮಾಡುವ ಗಡುವು ವಿಸ್ತರಣೆ ಆಗಿರುವುದರಿಂದ ಭಾರತೀಯರಿಗೆ ಕೊಂಚ ನೆಮ್ಮದಿ ದೊರಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+