ಚೀಪ್ ಗಿಮಿಕ್ ಮಾಡೋದು ಡಿಗ್ಗಿ ಖಯಾಲಿ

ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ಕೋಮುಗಲಭೆ ಹುಟ್ಟುಹಾಕುವ ಹುನ್ನಾರ ನಡೆಸಿದೆ ಎಂದು ಹೇಳಿದ್ದಾರೆ. ಅವರನ್ನು ಸುಳ್ಳು ಪತ್ತೆ ಯಂತ್ರದ ಮೂಲಕ ಪರೀಕ್ಷೆಗೆ ಒಳಪಡಿಸಿ ಸತ್ಯಾಸತ್ಯತೆ ಹೊರ್ಗೆ ತೆಗೆಯಬೇಕು ಎಂದು ಶಾಸಕ ಸಿ.ಟಿ ರವಿ ಒತ್ತಾಯಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಂದಂತಿದೆ. ತಾವೇ ಗಲಭೆ ಮಾಡಿಸಿ ಅದನ್ನು ಬಿಜೆಪಿ ತಲೆಗೆ ಕಟುವ ತುತಂತ್ರವೂ ನಡೆದಿದೆ. ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಸಿ.ಟಿ ರವಿ ಹೇಳಿದರು.
ಪ್ರಚೋದನಕಾರಿ ಹೇಳಿಕೆ ನೀಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಕಾಂಗ್ರೆಸ್ ಗೆ ಮೋದಿ ಜ್ವರ ಕಾಡುತ್ತಿದೆ. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಕೋಮಾ ಸ್ಥಿತಿ ತಲುಪಲಿದೆ. 25 ಸೀಟು ಗೆಲ್ಲುವುದು ಕನಸಿನ ಮಾತು ಎಂದು ರವಿ ಹೇಳಿದರು.
ರುಪಾಯಿ ಮೌಲ್ಯ ಕುಸಿಯುತ್ತಿದೆ. ಕಚ್ಚಾತೈಲಕ್ಕೆ ವಿದೇಶಿ ವಿನಿಮಯ ಇಲ್ಲದಂತೆ ಮಾಡಿದೆ. ಬೆಲೆ ಏರಿಕೆ ಶಾಕ್ ಕೊಟ್ಟು ಜನರನ್ನು ಹಿಂಸಿಸಿದ ಯುಪಿಎ ಬದಲು ಬಿಜೆಪಿಯೇ ಸೂಕ್ತ ಎಂದು ಜನರು ಉತ್ತರ ನೀಡಲಿದ್ದಾರೆ ಎಂದು ರವಿ ತಿಳಿಸಿದರು.
ಯಡಿಯೂರಪ್ಪ ಕರೆತರಲು ನಾವು ಮಂಡಿಯೂರಿದ್ದೇವೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ಖಂಡನಾರ್ಹ. ಬಂಗಾರಪ್ಪ, ಶರದ್ ಪವಾರ್ ಮುಂದೆ ಯಾರು ಮಂಡಿಯೂರಿದ್ದರು ಎಂಬುದು ಜನರಿಗೆ ಗೊತ್ತಿದೆ ಎಂದರು.
ಎಫ್ ಡಿಐ ವಿರೋಧ: ವಿದೇಶಿ ನೇರ ಬಂಡವಾಳ ಹೂಡಿಕೆ ವಿರೋಧಿಸಿ ಬಿಜೆಪಿ ರಾಜ್ಯದೆಲ್ಲೆಡೆ ಪ್ರತಿಭಟನೆ ಹಮ್ಮಿಕೊಳ್ಳಲಿದೆ.ಎಂದರು. ಈ ನಡುವೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದೇಶಿ ನೇರ ಬಂಡವಾಳ ಹೂಡಿಕೆ ಪದ್ಧತಿ(ಎಫ್ಡಿಐ)ಗೆ ಅವಕಾಶ ನೀಡಬಾರದು ಎಂದು ರಾಷ್ಟ್ರೀಯ ಕಿಸಾನ್ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ದಕ್ಷಿಣ ಭಾರತ ಕಿಸಾನ್ ಸಂಘದ ಅಧ್ಯಕ್ಷ ಪಿ. ರಾಮರೆಡ್ಡಿ , ಚಿಲ್ಲರೆ ವ್ಯಾಪಾರಿಗಳ ಜೀವನಕ್ಕೇ ಕುತ್ತು ತರುವ ಎಫ್ಡಿಐನ್ನು ಬಹುತೇಕ ರಾಜ್ಯಗಳು ವಿರೋಧಿಸಿವೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಸಾಧಕ ಬಾಧಕಗಳ ಚರ್ಚೆಯನ್ನೂ ನಡೆಸದೆ ಏಕಾಏಕಿ ಎಫ್ಡಿಐಯನ್ನು ಸ್ವಾಗತಿಸಿರುವುದು ಸರಿಯಲ್ಲ ಎಂದು ದೂರಿದರು.












Click it and Unblock the Notifications