ಬೆಂಗಳೂರು ವಿದ್ಯಾರ್ಥಿಗಳಿಗೆ 1 ಕೋಟಿ ವೇತನ ಆಫರ್
ಬೆಂಗಳೂರು, ಜು.4: ಅಮೆರಿಕ ಮೂಲದ ಇ ಕಾಮರ್ಸ್ ಕಂಪನಿ ಅಮೆಜಾನ್ ಭಾರತಕ್ಕೆ ಕಾಲಿಟ್ಟು ಸದ್ದು ಮಾಡಿದ್ದಕ್ಕಿಂತ ದೊಡ್ಡ ಸುದ್ದಿ ಐಐಎಂ-ಬಿನಿಂದ ಬಂದಿದೆ. ಅಮೆಜಾನ್ ಹಾಗೂ ಮತ್ತೊಂದು ಕಂಪನಿ ಇಬ್ಬರು ವಿದ್ಯಾರ್ಥಿಗಳಿಗೆ 1 ಕೋಟಿ ರು ವೇತನ ನೀಡಲು ಮುಂದೆ ಬಂದಿದೆಯಂತೆ.
ಎಕನಾಮಿಕ್ ಟೈಮ್ಸ್ ವರದಿಯಂತೆ ಬೆಂಗಳೂರಿನ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಪೂರ್ಣಾವಧಿ ಕಾರ್ಯಕಾರಿ ಸ್ನಾತಕೋತ್ತರ ಪದವಿ(EPGP) ಪಡೆಯಲು ಇಚ್ಛಿಸಿರುವ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರುವ ಬಹುರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿಗೆ ಭಾರಿ ಸಂಬಳದ ಆಫರ್ ನೀಡಿದೆ.
ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬನ ಕಾರ್ಯಸ್ಥಾನ ಭಾರತದಲ್ಲಿದ್ದರೆ ಮತ್ತೊಬ್ಬನದು ಅಮೆರಿಕದಲ್ಲಿ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನೀಡಲು ಅಮೆಜಾನ್ ಸಂಸ್ಥೆ ನಿರಾಕರಿಸಿದೆ.
ಐಐಎಂ-ಬಿಯಲ್ಲಿ ಕಳೆದ ವರ್ಷ ಸರಾಸರಿ ಸಂಬಳ ಸುಮಾರು 26 ಲಕ್ಷ ರು ನಷ್ಟಿತ್ತು. ಕಳೆದ ವರ್ಷ ಒಬ್ಬ ವಿದ್ಯಾರ್ಥಿಗೆ 23 ಲಕ್ಷ ರು ಆಫರ್ ನೀಡಿದ್ದೇ ಅತಿ ಹೆಚ್ಚಿನ ವೇತನ ನೀಡಿಕೆಯಾಗಿತ್ತು. ಆದರೆ, ಈ ಬಾರಿ ಕ್ಯಾಂಪಸ್ ಸಂದರ್ಶನಕ್ಕೆ ಬರುವ ಕಂಪನಿಗಳ ಸಂಖ್ಯೆಯೂ ಅಧಿಕವಾಗಿದೆ. ಸಂಬಳ/ವೇತನ ಪ್ರಮಾಣವೂ ಮೇಲಕ್ಕೇರಿದೆ. ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು ಮುಂದಿನ ಚಿತ್ರ ಸರಣಿಯಲ್ಲಿ ತಪ್ಪದೇ ನೋಡಿ

ಐಐಎಂ -ಬಿ
ಸುಮಾರು 55 ಕಂಪನಿಗಳು EPGP ವಿಷಯ ಆಯ್ಕೆ ಮಾಡುವ ವಿದ್ಯಾರ್ಥಿಗಳನ್ನು ಆರಿಸಲು ಬರುತ್ತವೆಯಾದರೂ ಇದರಲ್ಲಿ ಶೇ 50ರಷ್ಟು ಮಾತ್ರ ಹೊಸ ಕಂಪನಿಗಳಿರುತ್ತವೆ.
ಒಂದು ವರ್ಷ ಓದು, ಅಂತಾರಾಷ್ಟ್ರೀಯ ವಿವಿಗಳ ಜೊತೆ ವಿನಿಮಯ ಕಾರ್ಯಕ್ರಮ, ಆಕರ್ಷಕ ವೇತನ ಎಲ್ಲವೂ ಐಐಎಂಬಿಯಲ್ಲಿ ಉತ್ತಮ ಅವಕಾಶಗಳ ಹೆಬ್ಬಾಗಿಲು ತೆರೆದಿದೆ ಎಂದು ವೃತ್ತಿ ಮಾರ್ಗದರ್ಶನ ಕೇಂದ್ರದ ಮುಖ್ಯಸ್ಥ ಸಂಕರ್ಷಣ್ ಬಸು ಹೇಳಿದ್ದಾರೆ.
ಕಂಪನಿಗಳ ನೆಚ್ಚಿನ ಬೇಟೆ
ಐಐಎಂ ಬೆಂಗಳೂರು, ಐಐಎಂ ಲಕ್ನೋ, ಎಂಡಿಐ ಗುರ್ ಗಾಂವ್ ಹಾಗೂ ಎಸ್ ಪಿ ಜೈನ್ ಮುಂಬೈ ಸಂಸ್ಥೆಗಳು ಬಹುರಾಷ್ಟ್ರೀಯ ಕಂಪನಿಗಳ ನೆಚ್ಚಿನ ತಾಣಗಳಾಗಿವೆ.

ಸಂಸ್ಥೆಗಳ ಆಫರ್
ಎಸ್ ಪಿ ಜೈನ್ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಒಂದು ವರ್ಷದ ಎಂಬಿಎ ಹಾಗೂ ಸಂಶೋಧನೆಗೆ 40.5 ಲಕ್ಷ ರು ಆಫರ್ ನೀಡುತ್ತಿದೆ. ಕಳೆದ ವರ್ಷ ಸರಾಸರಿ 28.5 ಲಕ್ಷ ರು ವೇತನ ನೀಡಲಾಗುತ್ತಿತ್ತು.

ವೇತನ ದರ ಏರಿಕೆ
ಟಾಪ್ ಕಂಪನಿಗಳ ಪಟ್ಟಿಯಲ್ಲಿ ಅಮೆಜಾನ್, ಕೆಪಿಎಂಜಿ, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಹಾಗೂ ಮೆಕ್ ಕಿಂಗ್ಸೆ ಸೇರಿದೆ.
ಎಂಡಿಐ ಗುರ್ ಗಾಂವ್ ಸಂಸ್ಥೆ ವೇತನ ದರ ಏರಿಕೆಯಾಗಿದ್ದು 18.2 ಲಕ್ಷ ರು ಗೆ ಏರಿದೆ. ಕಳೆದ ವರ್ಷ 16.8 ಲಕ್ಷ ರು ಮಾತ್ರ ಇತ್ತು. ಸರಾಸರಿ ವೇತನ ದರ 10 ರಿಂದ 13.2 ಲಕ್ಷ ರು ಮಾತ್ರ ಇತ್ತು.

ಹೆಚ್ಚಿನ ನೇಮಕಾತಿ
ಐಐಎಂ ಲಕ್ನೋ ಸಂಬಳ/ವಿದ್ಯಾರ್ಥಿ ವೇತನ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲವಾದರೂ ನೋಯ್ಡಾ ಕ್ಯಾಂಪಸ್ ನಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ. ಡೆಲೊಟ್, ಐಬಿಎಂ, ಇಎಕ್ಸ್ ಎಲ್ ಸರ್ವಿಸಸ್ ಹಾಗೂ ಟಿಸಿಎಸ್ ಟಾಪ್ ಸಂಸ್ಥೆ ಗಳಾಗಿದೆ.

ಈ ಹಿಂದಿನ ಭರ್ಜರಿ ಆಫರ್
ಆಂಧ್ರಪ್ರದೇಶದ ವಾರಂಗಲ್ ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್ಐಟಿ) ನಾಲ್ಕನೇ ವರ್ಷದ ಬಿಟೆಕ್ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ವಿದ್ಯಾರ್ಥಿಯೊಬ್ಬರಿಗೆ, ಸಾಮಾಜಿಕ ಜಾಲ ತಾಣಗಳ ದಿಗ್ಗಜ ಸಂಸ್ಥೆಯಾದ ಫೇಸ್ ಬುಕ್ ವಾರ್ಷಿಕ 45 ಲಕ್ಷ ರೂಪಾಯಿ ವೇತನ ನೀಡುವ ಭರ್ಜರಿ ಆಫರ್ ನೀಡಿತ್ತು.












Click it and Unblock the Notifications