Get Updates
Get notified of breaking news, exclusive insights, and must-see stories!

ಅಧಿಕೃತ: ಆಧಾರ್ ಕಾರ್ಡ್ ಇನ್ನು ಅಡ್ರೆಸ್ ಪ್ರೂಫ್ ಸಹ

Its Official - Aadhaar Card valid proof of identity- address
ಬೆಂಗಳೂರು, ಜುಲೈ2: ಆಧಾರ್ ಕಾರ್ಡ್ ಗುರುತಿನ ಚೀಟಿಗೆ ಮಹತ್ವವೇ ಇಲ್ಲ. ಅದನ್ನೆಲ್ಲಾ ಏಕೆ ಮಾಡಿಸಬೇಕು? ಎಂದೆಲ್ಲಾ ಕಾಲಹರಣ ಮಾಡುವ ಮಂದಿಗಾಗಿ ಕೇಂದ್ರ ಸರಕಾರದಿಂದ ಅಧಿಕೃತ ಸಂದೇಶವೊಂದು ಹೊರಬಿದ್ದಿದೆ.

ಉದ್ದನೆಯ ಆಧಾರ್ ಕಾರ್ಡಿನಲ್ಲಿ ಕೆಳಗಿನ ಭಾಗದಲ್ಲಿ ವಿಳಾಸ ಸಹಿತ ವಿವರವಿರುತ್ತದಲ್ಲಾ ಅದನ್ನು ಇನ್ನು ಮುಂದೆ ಅಡ್ರೆಸ್ ಪ್ರೂಫ್ ಗಾಗಿಯೂ ಬಳಸಬಹುದು. ಅಲ್ಲಿಗೆ ಕಾರ್ಡ್ ಮಾತ್ರವೇ ಗುರುತಿನ ಚೀಟಿಯೂ ಆಗುತ್ತದೆ ಮತ್ತು ಅಡ್ರೆಸ್ ಪ್ರೂಫ್ ಸಹ ಆಗುತ್ತದೆ.

ಹಾಗಂತ ಅಡ್ರೆಸ್ ಪ್ರೂಫ್ ಗೆ ನಮ್ಮಲ್ಲಿ ಬೇರೆಯದೇ ಇದೆ. ಇದ್ಯಾಕೆ ಎಂದು ಮತ್ತೆ ಮೂಗೆಳೆಯಬೇಡಿ. ಮನೆಗೆ ವಿತರಣೆಯಾಗುವ ಅಡುಗೆ ಸಿಲಿಂಡರ್ ಸಬ್ಸಿಡಿಯನ್ನು ಪಡೆಯುವುದರಿಂದ ಹಿಡಿದು ಇನ್ನೂ ಕೆಲ ಸೌಲಭ್ಯಗಳ ಫಲಾನುಭವಿಯಾಗಲು ಈ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಹಾಗಾಗಿ ಇಂದೇ ಆಧಾರ್ ಕಾರ್ಡ್ ಮಾಡಿಸಿಟ್ಟುಕೊಳ್ಳಿ. ಈಗಂತೂ ಅದು ಮತ್ತಷ್ಟು ಸುಲಭವಾಗಿದೆ. ಮೊದಲಿನಂತೆ ಉದ್ದನೆಯ ಕ್ಯೂಗಳಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ.

ದೇಶದ ನೂರು ಕೋಟಿಗೂ ಹೆಚ್ಚು ಮಂದಿಗೆ ಆಧಾರ್ ಕಾರ್ಡ್ ಅನ್ನು ವಿತರಿಸುವ ಹೊಣೆಹೊತ್ತಿರುವ Unique Identification Authority of India (UIDAI) ಪ್ರಾಧಿಕಾರವೇ ಇದನ್ನು ಸ್ಪಷ್ಟಪಡಿಸಿದೆ.

Information Technology Act-2000 ಅನುಸಾರ ವಿದ್ಯುನ್ಮಾನ ದಾಖಲಾತಿಗಳನ್ನು ಕಾನೂನಿನಡಿ ಗುರುತಿಸಲು ಅವಕಾಶವಿರುದರಿಂದ ಆಧಾರ್ ಕಾರ್ಡಿಗೂ ಈ ಮಾನ್ಯತೆ ಪ್ರಾಪ್ತಿಯಾಗಿದೆ.

ಇದುವರೆಗೂ ಆಧಾರ್ ಕಾರ್ಡಿನ ಕೆಳಗಿನ ಭಾಗದಲ್ಲಿರುವ ವಿಳಾಸವನ್ನು ಅಧಿಕೃತ ದಾಖಲಾತಿಯನ್ನಾಗಿ ಮಾನ್ಯ ಮಾಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಧಿಕಾರವು ಸೋಮವಾರ ಈ ಸ್ಪಷ್ಟೀಕರಣ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+