ಎಚ್ಡಿಕೆ ಕಾರಿಗೆ ಅಸ್ತು, ಆದ್ರೆ ಅಪ್ಪ ಚೆಕ್ ಹರಿದ್ಹಾಕಿದ್ದರಂತೆ!

opposition-leader-kumaraswamy-gets-toyota-fortuner-car
ಬೆಂಗಳೂರು, ಜೂನ್ 27- ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ತನಗೆ ಸಾಂವಿಧಾನಿಕವಾಗಿ ಸಲ್ಲಬೇಕಾದ ಯಾವುದೇ ಸವಲತ್ತು ಸಲ್ಲುತ್ತಿಲ್ಲ. ಕಾಂಗ್ರೆಸ್ ಸರಕಾರ ಅದಕ್ಕೆ ಅಡ್ಡಿಪಡಿಸುತ್ತಿದೆ ಎಂದು ಅಲವತ್ತುಕೊಂಡಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಒಂದು ಬೇಡಿಕೆ ಈಡೇರಿದೆ.

ರಾಮನಗರದ ಶಾಸಕ ಕುಮಾರಸ್ವಾಮಿಗೆ ಅಧಿಕೃತ ವಾಹನ ಸೌಲಭ್ಯ ನೀಡಲು ಹೊಸ ಕಾರು ಖರೀದಿಗೆ ಸಚಿವಾಲಯ ಒಪ್ಪಿದೆ. ಈ ಮಧ್ಯೆ, ಕುಮಾರಸ್ವಾಮಿ ಅವರ ಅಪ್ಪ ಎಚ್ ಡಿ ದೇವೇಗೌಡರು ಬೇಲೂರಿನಲ್ಲಿ ಇಂಟರೆಸ್ಟಿಂಗ್ ಸಂಗತಿಯೊಂದನ್ನು ಹೇಳಿದ್ದಾರೆ.

ಏನಪ್ಪಾ ಅಂದರೆ 'ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಭತ್ಯೆ ವೇತನದ ಚೆಕ್ ಅನ್ನು ಹರಿದು ಹಾಕಿದ್ದೆ. ಕೇವಲ ಭತ್ಯೆ ಹಾಗೂ ಸಂಬಳಕ್ಕಾಗಿ ತಾನು ಸಂಸದನಾದವನಲ್ಲ. ಟಿಎ- ಡಿಎಗಾಗಿ ಸಂಸತ್ತಿಗೆ ಹೋಗುವ ಜಾಯಮಾನ ನನ್ನದಲ್ಲ' ಎಂದು ತಿಳಿಸಿದ್ದಾರೆ.

ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ್ದು, ಬಿಳಿ ಬಣ್ಣದ ಟೊಯೋಟಾ ಫಾರ್ಚೂನರ್ ಕಾರನ್ನು 23.22 ಲಕ್ಷ ರೂ. ವೆಚ್ಚದಲ್ಲಿ ಟೊಯೋಟಾ ಮೋಟಾರ್ಸ್‌ ಕಂಪನಿಯಿಂದ ಖರೀದಿಸಲು ಸಚಿವಾಲಯದಿಂದ ಆದೇಶ ಹೊರಬಿದ್ದಿದೆ.

ಸೋ, ಸದ್ಯದಲ್ಲೇ ಕುಮಾರಸ್ವಾಮಿ ಅವರ ಸಂಚಾರಕ್ಕಾಗಿ ಫಾರ್ಚೂನರ್ ಸರಕಾರಿ ಕಾರು ಮನೆ ಮುಂದೆ ನಿಲ್ಲಲಿದೆ. ಆದರೆ ಮನೆ ಯಾವುದು ಎಂಬುದು ಇನ್ನೂ ಇರ್ತ್ಯರ್ಥವಾಗಿಲ್ಲ.

ಏಕೆಂದರೆ 'ಸರಕಾರಿ ಬಂಗಲೆಗಳು ಯಾವುವೂ ಖಾಲಿ ಇಲ್ಲ. ಎಲ್ಲಾ ಅಲಾಟ್ ಆಗಿಬಿಟ್ಟಿವೆ. ಬಾಡಿಗೆ ಮನೆ ಕೇಳಿದರೆ ಕೊಡಲಾಗುವುದು. ಇತೀಚೆಗೆ ಸರಕಾರಿ ಬಾಡಿಗೆಯನ್ನು 50 ಸಾವಿರ ರೂ. ನಿಂದ 1 ಲಕ್ಷ ರೂ. ಗೆ ಏರಿಸಲಾಗಿದೆ' ಎಂದು ಸಿಎಂ ಸಿದ್ದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+