ಕೋಲಾರ : ರಿಯಲ್ ಎಸ್ಟೇಟ್ ಉದ್ಯಮಿ ಭೀಕರ ಹತ್ಯೆ

ಕೊಲೆಯಾದ ಉದ್ಯಮಿಯನ್ನು ಬೆಂಗಳೂರಿನ ಮಹದೇವಪುರದ ನಿವಾಸಿ ಮಂಜುನಾಥ್ (40) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಕೆಸರನಹಳ್ಳಿಯ ಬಳಿ ಮಂಜುನಾಥ್ ಶವ ಅರೆನಗ್ನವಾಗಿ, ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಶವದ ಬಳಿ ಲಾಂಗ್, ಮಚ್ಚುಗಳು ಪತ್ತೆಯಾಗಿದ್ದು, ರಕ್ತದ ಕಲೆಗಳು ಕಂಡು ಬಂದಿದೆ. ಮಂಜುನಾಥ್ ಅವರನ್ನು ಅಪಹರಿಸಿ ಕೋಲಾರಕ್ಕೆ ಕರೆತಂದು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾರು ಕಾಡುಗೋಡಿ ಬಳಿ ಪತ್ತೆ : ಮಂಗಳವಾರ ಬೆಳಗ್ಗೆ ಕಾಡುಗೋಡಿ ಬಳಿ ಇನ್ನೋವಾ ಕಾರೊಂದು ಪತ್ತೆಯಾಗಿದೆ. ಕಾರಿನ ವಿವರ ಸಂಹ್ರಹಿಸಿದ ಪೊಲೀಸರು ಇದು ಕೊಲೆಯಾದ ಮಂಜುನಾಥ್ ಅವರಿಗೆ ಸೇರಿದ ಕಾರು ಎಂದು ಸ್ಪಷ್ಟಪಡಿಸಿದ್ದಾರೆ.
ಕಾಡುಗೋಡಿಯಿಂದ ಮಂಜುನಾಥ್ ಅವರನ್ನು ಅಪಹರಿಸಿ ಕೋಲಾರದ ಕೆಸರನಹಳ್ಳಿಗೆ ಕರೆತಂದು ಕೊಲೆ ಮಾಡಿ, ಶವನ್ನು ಸುಟ್ಟು ಹಾಕಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಕೃತ್ಯ ನಡೆಸಿರಬಹುದು ಎಂದು ಅವರು ಹೇಳಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications