ಚಿತ್ರಗಳಲ್ಲಿ: ವಿದ್ಯಾರ್ಥಿನಿ ಅತ್ಯಾಚಾರ, ವೈದ್ಯರ ಪ್ರತಿಭಟನೆ

ಮಂಗಳೂರು. ಜೂ.24: ಐಜಿಪಿ ಪ್ರತಾಪ್ ರೆಡ್ಡಿ ಅವರು ಮಣಿಪಾಲ ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ರೇಖಾಚಿತ್ರವನ್ನು ಸೋಮವಾರ(ಜೂ.24) ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಮಣಿಪಾಲದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬದಿಂದ ರೊಚ್ಚಿಗೆದ್ದ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಾಶ್ಮೀರದ ಕಣಿವೆಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದಿನ ಮೊರೆತ ಶುರುವಾಗಿದೆ. ತುಂತುರು ಮಳೆಯಿಂದ ತಂಪಾಗಿದ್ದ ಕಣಿವೆ ರಾಜ್ಯದ ಶ್ರೀನಗರದಲ್ಲಿ ಸೋಮವಾರ (ಜೂ.24) ಇಬ್ಬರು ಯೋಧರನ್ನು ಉಗ್ರರು ಕೊಂದು ಹಾಕಿದ್ದಾರೆ. ಗಡಿಭಾಗದ ಭದ್ರತಾ ಪಡೆ ಯೋಧರು ಶ್ರೀನಗರದ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಕ್ಷಣಾ ನಿರತ ಯೋಧರ ಚಿತ್ರ ಇಲ್ಲಿದೆ

ಭಾನುವಾರ ಪೂರ್ಣ ಚಂದ್ರ ದರ್ಶನಕ್ಕಾಗಿ ಹಲವಾರು ಮಂದಿ ಕೆಮೆರಾ ತೆಗೆದು ಕಾದು ಕುಳಿತ್ತಿದ್ದರು. ಲಕ್ ಇದ್ದವರಿಗೆ ಮೋಡಗಳ ಮರೆಯಿಂದ ಸೂಪರ್ ಚಂದಮಾಮ ಕಾಣಿಸಿಕೊಂಡಿದ್ದಾನೆ. ಹಲವೆಡೆ ಹುಣ್ಣಿಮೆ ಸ್ನಾನ, ಜಲ ಯಾತ್ರೆ, ಕಲಶ ಯಾತ್ರೆ, ರಥ ಯಾತ್ರೆ, ಭಜನೆ, ಕೀರ್ತನೆ, ಪವಿತ್ರ ಸ್ನಾನ ನಡೆದಿದೆ.

ಬೋಧ್ ಗಯಾದ ಮಹಾಬೋಧಿ ದೇಗುಲದ ಬಳಿ ಸೂಪರ್ ಚಂದ್ರ ಕಾಣಿಸಿದ್ದು ಹೇಗೆ ವರ್ಷಕ್ಕೊಮ್ಮೆ ಮಾತ್ರ ಈ ಪರಿ ಭೂಮಿಗೆ ಹತ್ತಿರಕ್ಕೆ ಬರುವ ಚಂದ್ರನ ಪ್ರಭೆಯನ್ನು ಚಿತ್ರದಲ್ಲಿ ನೋಡಿ ಆನಂದಿಸಿ

ಉಳಿದಂತೆ, ಪ್ಯಾರೀಸ್ ನ ವೈಮಾನಿಕ ಪ್ರದರ್ಶನದಲ್ಲಿ ಸುಖೋಯ್ ಯುದ್ಧವಿಮಾನ,ಭೋಪಾಲ್ ನಲ್ಲಿ ಕೆಸರು ಹಾದಿಯಲ್ಲಿ ಕಾರಿನ ಸವಾರಿ, ನಂಗಾ ಪರ್ವತ ಹತ್ತಲು ಬಂದ ಟ್ರೆಕ್ಕರ್ಸ್ ಕೊಂದ ತಾಲಿಬಾನಿಗಳ ವಿರುದ್ಧ ಹತಾಶೆ, ಆಕ್ರೋಶ ಪ್ರತಿಭಟನೆ, ಭಾರತಕ್ಕೆ ಬಂದಿರುವ ಯುಎಸ್ ಕಾರ್ಯದರ್ಶಿ ಜಾನ್ ಕೆರಿ ಚಿತ್ರ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ

ವೈದ್ಯರ ಪ್ರತಿಭಟನೆ

ವೈದ್ಯರ ಪ್ರತಿಭಟನೆ

ಮಣಿಪಾಲದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬದಿಂದ ರೊಚ್ಚಿಗೆದ್ದ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಆರೋಪಿ ರೇಖಾಚಿತ್ರ

ಆರೋಪಿ ರೇಖಾಚಿತ್ರ

ಮಂಗಳೂರು: ಐಜಿಪಿ ಪ್ರತಾಪ್ ರೆಡ್ಡಿ ಅವರು ಮಣಿಪಾಲ ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ರೇಖಾಚಿತ್ರವನ್ನು ಸೋಮವಾರ(ಜು.24) ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಗುಂಡಿನ ಮೊರೆತ, ಯೋಧರ ಬಲಿ

ಗುಂಡಿನ ಮೊರೆತ, ಯೋಧರ ಬಲಿ

ಕಾಶ್ಮೀರದ ಕಣಿವೆಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದಿನ ಮೊರೆತ ಶುರುವಾಗಿದೆ. ತುಂತುರು ಮಳೆಯಿಂದ ತಂಪಾಗಿದ್ದ ಕಣಿವೆ ರಾಜ್ಯದ ಶ್ರೀನಗರದಲ್ಲಿ ಸೋಮವಾರ (ಜೂ.24) ಇಬ್ಬರು ಯೋಧರನ್ನು ಉಗ್ರರು ಕೊಂದು ಹಾಕಿದ್ದಾರೆ.

ಪೂರ್ಣ ಚಂದಿರ ದರ್ಶನ

ಪೂರ್ಣ ಚಂದಿರ ದರ್ಶನ

ಭಾನುವಾರ ಪೂರ್ಣ ಚಂದ್ರ ದರ್ಶನಕ್ಕಾಗಿ ಹಲವಾರು ಮಂದಿ ಕೆಮೆರಾ ತೆಗೆದು ಕಾದು ಕುಳಿತ್ತಿದ್ದರು. ಲಕ್ ಇದ್ದವರಿಗೆ ಮೋಡಗಳ ಮರೆಯಿಂದ ಸೂಪರ್ ಚಂದಮಾಮ ಕಾಣಿಸಿಕೊಂಡಿದ್ದಾನೆ. ಹಲವೆಡೆ ಹುಣ್ಣಿಮೆ ಸ್ನಾನ, ಜಲ ಯಾತ್ರೆ, ಕಲಶ ಯಾತ್ರೆ, ರಥ ಯಾತ್ರೆ, ಭಜನೆ, ಕೀರ್ತನೆ, ಪವಿತ್ರ ಸ್ನಾನ ನಡೆದಿದೆ.

ಸುಖೋಯ್ 35

ಸುಖೋಯ್ 35

ಪ್ಯಾರೀಸ್ ನ ವೈಮಾನಿಕ ಪ್ರದರ್ಶನದಲ್ಲಿ ಸುಖೋಯ್ ಯುದ್ಧವಿಮಾನ

ನವದೆಹಲಿಯಲ್ಲಿ ಕೆರಿ

ನವದೆಹಲಿಯಲ್ಲಿ ಕೆರಿ

ಯುಎಸ್ ಕಾರ್ಯದರ್ಶಿ ಜಾನ್ ಕೆರಿ ಯುಎಸ್ ಇಂಡಿಯಾ ರಾಜತಾಂತ್ರಿಕ ಸಂಬಂಧದ ಬಗ್ಗೆ ಮಾತುಕತೆ ನಡೆಸಲು ಭಾರತಕ್ಕೆ ಭೇಟಿ ನೀಡಿದ್ದಾರೆ. ನವದೆಹಲಿಯಲ್ಲಿ ಜಾನ್ ಕೆರಿ ಕಾಣಿಸಿಕೊಂಡಿದ್ದು ಹೀಗೆ ಪಿಟಿಐ ಚಿತ್ರ: ವಿಜಯ್ ವರ್ಮ

ಕೆಸರಿನಲ್ಲಿ ಸವಾರಿ

ಕೆಸರಿನಲ್ಲಿ ಸವಾರಿ

ಭೋಪಾಲ್:ಕೇರ್ವಾ ಅಣೆಕಟ್ಟು ಬಳಿ ನಡೆದ 'Mud Challenge Car' ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಕಾರು ಚಲಾಯಿಸುತ್ತಿರುವ ಚಿತ್ರ

ಈ ಸಾವು ನ್ಯಾಯವೇ

ಈ ಸಾವು ನ್ಯಾಯವೇ

ಕರಾಚಿ: ನಂಗಾ ಪರ್ವತ ಹತ್ತಲು ಬಂದಿದ್ದ ವಿದೇಶಿ ಸಾಹಿಸಿಗಳನ್ನು ಅಮಾನುಷವಾಗಿ ಕೊಂದ ತಾಲಿಬಾನಿಗಳ ಕೃತ್ಯವನ್ನು ಖಂಡಿಸಿ ಮುತ್ತಾಹಿದ ಕ್ವಾಮಿ ಸಂಘಟನೆಯ ಕಾರ್ಯಕರ್ತರು ಮೇಣದ ಬತ್ತಿ ಹಚ್ಚಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಟ್ರೆಕರ್ಸ್ ಪರ ಪ್ರತಿಭಟನೆ

ಟ್ರೆಕರ್ಸ್ ಪರ ಪ್ರತಿಭಟನೆ

ಎಂಕ್ಯೂಎಂ ಸಂಘಟನೆಗಳು ಟ್ರೆಕರ್ಸ್ ಸಾವಿಗೆ ಕಂಬನಿ ಮಿಡಿದು ತಾಲಿಬಾನಿಗಳ ಕೃತ್ಯವನ್ನು ಖಂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+