ಇಸ್ರೋ, ಬಿಇಎಲ್ ಧ್ವಂಸ, ಉಗ್ರರ ಬೆದರಿಕೆ ಪತ್ರ

Terror threat on Bangalore, LJPBU takes onus,
ಬೆಂಗಳೂರು, ಜೂ.21: ನಾಲ್ಕು ಪುಟಗಳ ಪತ್ರ ಕಂಡು ಜಾಲಹಳ್ಳಿಯಲ್ಲಿರುವ ಇಸ್ರೋ ಕೇಂದ್ರ ಬೆಚ್ಚು ಬಿದ್ದಿತ್ತು. ಉರ್ದು ಹಾಗೂ ಇಂಗ್ಲೀಷಿನಲ್ಲಿ ಬರೆದಿರುವ ಈ ಪತ್ರದಲ್ಲಿ ಏನಿದೆ? ಇದು ಅಸಲಿಯೇ? ನಕಲಿಯೇ? ಎಂಬುದರ ಬಗ್ಗೆ ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ. ಈ ನಡುವೆ ಈ ಪತ್ರ ಬರೆದಿದ್ದು ಲಷ್ಕರ್ ಜಂಗ್ ಪಾಕಿಸ್ತಾನ ಬಲೂಚಿಸ್ತಾನ ಘಟಕದ ಸದಸ್ಯರು ಎಂಬುದು ದೃಢಪಟ್ಟಿದೆ.

ಕೈಬರಹದಲ್ಲಿ ಒಂದು ಪತ್ರವಿದ್ದರೆ ಉಳಿದಿದ್ದು ಟೈಪ್ ಮಾಡಲಾಗಿದೆ. ಮೂರು ಪುಟ ಉರ್ದು ಭಾಷೆಯಲ್ಲಿದ್ದರೆ ಮಿಕ್ಕಿದ್ದು ಇಂಗ್ಲೀಷ್ ನಲ್ಲಿದೆ.ನಮ್ಮದು 40 ಮಂದಿ ಸದಸ್ಯರ ತಂಡ ನಮ್ಮ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದು, ಕಾರು ಬಾಂಬ್, ಮಾನವ ಬಾಂಬ್ ಇನ್ನಿತರ ಬಾಂಬ್ ಸ್ಫೋಟಗಳಲ್ಲಿ ತರಬೇತಿ ಪಡೆದ ಯೋಧರಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇಂಗ್ಲೀಷಿನಲ್ಲಿರುವ ಪತ್ರದಲ್ಲಿ ನಗರದ ಪ್ರಮುಖ ಕಟ್ಟಡ ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಲಾಗಿದೆ. ಇಸ್ರೋ, ಬಿಎಚ್ಇಎಲ್, ಬಿಎಲ್ ಎರಡು ದೇಗುಲಗಳು ಹಾಗೂ ಎರಡು ಫೈವ್ ಸ್ಟಾರ್ ಹೋಟೆಲ್ ಗಳು ಉಗ್ರರ ಟಾರ್ಗೆಟ್ ಪಟ್ಟಿಯಲ್ಲಿದೆ.

ಉಮರ್ ಅಲ್ಲಾ ಭಕ್ಷ್ ನೇತೃತ್ವದ 40 ಮಂದಿ ತಂಡ ಬೆಂಗಳೂರಿಗೆ ಬಂದಿದ್ದೇವೆ. ಇಲ್ಲಿನ ಸಂಪೂರ್ಣ ಮಾಹಿತಿ ನಾವು ಪಡೆದಿದ್ದೇವೆ. ಮಾನವ ಬಾಂಬ್, ಕಾರು ಬಾಂಬ್ ಹಾಗೂ ಇನ್ನೂ ಮುಂತಾದ ಭಯಾನಕ ವಿಧಾನಗಳನ್ನು ಬಳಸಿ ಅಶಾಂತಿ ಸೃಷ್ಟಿಸುತ್ತೇವೆ. ಬೆಂಗಳೂರಿನ ಇತಿಹಾಸದಲ್ಲಿ ಕಾಣದ ರಕ್ತದೋಕುಳಿ ನೀವು ನಿರೀಕ್ಷಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ಇತ್ತೀಚೆಗೆ ಭಯೋತ್ಪಾದಕರ ಭೀತಿ ಇರುವ ಬಗ್ಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಪತ್ರ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ನ್ಯಾನೋ ಕಾರು ಪ್ರಕರಣ ಸುಖಾಂತ್ಯ ಕಂಡರೂ ಉಗ್ರರ ನುಸುಳುವಿಕೆ ಬಗ್ಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ನಕಲಿ ಪತ್ರವೇ?: ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು, ಇದೊಂದು ನಕಲಿ ಪತ್ರ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯಕ್ಕೆ ಪತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜನರು ಆತಂಕ ಪಡಬೇಕಾದ ಸನ್ನಿವೇಶ ಎದುರಾಗಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆಜೆ ಜಾರ್ಜ್ ಅವರು ಮಾತ್ರ ಇದು ಎಚ್ಚರಿಕೆ ಗಂಟೆ ಎಂದು ಭಾವಿಸುತ್ತೇವೆ. ಈ ಬಗ್ಗೆ ತೀವ್ರವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ಇಸ್ರೋ, ಬಿಎಚ್ ಇಎಲ್, ಬಿಇಎಲ್, ಎನ್ಎಎಲ್ ಸೇರಿದಂತೆ ಪ್ರಮುಖ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು ಹಾಗೂ ಪ್ರಮುಖ ದೇಗುಲಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ಕಮಲ್ ಪಂತ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+