ಮಳೆಕೊಯ್ಲು : ಬೆಂಗಳೂರು ಸಂಪೂರ್ಣ ಫ್ಲಾಪ್
ಬೆಂಗಳೂರಿನಂಥ ನಗರ ಸೇರಿದಂತೆ ಹಳ್ಳಿಗಳಲ್ಲಿಯೂ ಈಗ ನೀರಿನ ಕೊರತೆ ಕಿತ್ತು ತಿನ್ನುತ್ತಿದೆ. ಕುಡಿಯುವ ನೀರಿನ ಕೊರತೆ ಭೀತಿ ಜೊತೆ ನಿತ್ಯ ಬಳಕೆಗೆ ನೀರು ಸಾಲುವುದಿಲ್ಲ ಎಂಬ ಎಚ್ಚರಿಕೆ ಸಂದೇಶದ ನಡುವೆಯೂ ಬೆಂಗಳೂರಿನಲ್ಲಿ ಮಳೆಕೊಯ್ಲು ಸಂಪೂರ್ಣ ವಿಫಲವಾಗಿದೆ.
ರಾಜ್ಯದ ವಿವಿಧೆಡೆ ಮುಂಗಾರು ಮಳೆ ತನ್ನ ಎಂದಿನ ಅರ್ಭಟ ತೋರುತ್ತಿರುವ ಸುದ್ದಿ ಬಂದಿದೆ. ನಾಡಿನ ಜೀವ ನದಿಗಳಾದ ತುಂಗ ಭದ್ರಾ ಕಾವೇರಿ ತುಂಬಿ ಹರಿಯುತ್ತಿವೆ. ಕೃಷ್ಣಾನದಿ ತಪ್ಪಲಿನಲ್ಲೂ ಮಳೆಯಾಗುವ ನಿರೀಕ್ಷೆಯಿದೆ. ಆದರೆ, ಬೆಂಗಳೂರಿನಲ್ಲಿ ಮಳೆ ಇನ್ನೂ ಹೆಚ್ಚು ಕಾಣಿಸಿಕೊಂಡಿಲ್ಲ. ಆದ್ದರಿಂದ, ನೀರಿನ ಉಳಿತಾಯಕ್ಕಾಗಿ ಸಿದ್ಧತೆ ಮಾಡಿಕೊಂಡರೆ ಒಳ್ಳೆಯದಲ್ಲವೆ? ಮಳೆನೀರು ಕೊಯ್ಲು ಅಥವಾ ರೇನ್ ವಾಟರ್ ಹಾರ್ವೆಸ್ಟಿಂಗ್ ಕುರಿತು ಸ್ವಲ್ಪ ವಿವರ ಇಲ್ಲಿದೆ ನೋಡಿ..
ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ವಸತಿಗಳಿದ್ದರೆ ಅದರಲ್ಲಿ 6 ಲಕ್ಷ ವಸತಿಗಳು ಪ್ರಮುಖ ಪ್ರದೇಶಗಳಲ್ಲಿದೆ. ಇದರಲ್ಲಿ 44,470 ಮನೆಗಳಲ್ಲಿ ಮಾತ್ರ ಮಳೆಕೊಯ್ಲು ಅಳವಡಿಕೆಗೆಯಾಗಿದೆ. ಸರಿಯಾಗಿ ಲೆಕ್ಕ ಹಾಕಿದರೆ ಶೇ 1 ರಷ್ಟು ಕೂಡಾ ಮಳೆಕೊಯ್ಲು ವಿಧಾನ ನಗರದ ಮನೆಗಳನ್ನು ತಲುಪಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ.
ಮಳೆಕೊಯ್ಲು ಇಲ್ಲದ ಮನೆ, ಅಪಾರ್ಟ್ಮೆಂಟ್ ಗೆ ಹೆಚ್ಚಿನ ತೆರಿಗೆ ಅಥವಾ ಜಲ ಮಂಡಳಿ ಹಾಗೂ ಒಳ ಚರಂಡಿ ವ್ಯವಸ್ಥೆ ಕಟ್ ಮಾಡಲಾಗುವುದು ಇನ್ನಿತರ ಡೆಡ್ ಲೈನ್ ಗಳು ವರ್ಕ್ ಔಟ್ ಆಗಿಲ್ಲ. ಜಲಮಂಡಳಿ ಸುಮಾರು 7.50 ಕ್ಕೂ ಅಧಿಕ ಸಂಪರ್ಕವನ್ನು ನೀಡಿದ್ದು ಇದರಲ್ಲಿ ಸುಮಾರು 1 ಲಕ್ಷ ನಿವಾಸಗಳಿಗಾದರೂ ಮಳೆಕೊಯ್ಲಿ ಕಡ್ಡಾಯವಾಗಿ ಅಳವಡಿಸುವ ಯೋಜನೆ ಹಾಕಿಕೊಂಡಿದೆ. ಇದು ಸಾಧ್ಯವಾಗಲಿ ಎಂದು ಆಶಿಸುತ್ತಾ. ಮಳೆ ಕೊಯ್ಲು ಬಗ್ಗೆ ಒಂದಿಷ್ಟು ಸಾಮಾನ್ಯ ಮಾಹಿತಿ ಇಲ್ಲಿದೆ ನೋಡಿ

ಏನಿದು ಮಳೆಕೊಯ್ಲು
ಅಂತರ್ಜಲದ ಮಟ್ಟ ಹೆಚ್ಚಿಸಲು ರೈನ್ ವಾಟರ್ ಹಾರ್ವೆಸ್ಟಿಂಗ್ ಅಥವಾ ಮಳೆಕೊಯ್ಲಿನ ಮೂಲಕ ಎಲ್ಲರೂ ತಮ್ಮ ಅಳಿಲುಸೇವೆ ನೀಡಬಹುದು. ಹೆಚ್ಚು ಖರ್ಚಿಲ್ಲದೆ ಸರಳವಿಧಾನದಲ್ಲಿ ಮಳೆಕೊಯ್ಲು ಮಾಡಬಹುದು.
ಆಗಸದಿಂದ ಬೀಳುವ ಶುದ್ಧ ಮಳೆ ನೀರು ಸುಮ್ಮನೇ ಹರಿದು, ಚರಂಡಿ ಸೇರಿ ಮುಂದೆ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಮಳೆ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು ಅಥವಾ ಅಂತರ್ಜಲಕ್ಕೆ ಅದನ್ನು ಸೇರಿಸುವುದು ಮಳೆಕೊಯ್ಲಿನ ಹಿಂದಿರುವ ಸಿದ್ಧಾಂತ.
ಮಳೆಕೊಯ್ಲು ಮಾಡುವ ಸರಳ ರೀತಿ
1. ತಾರಸಿ ಮನೆ ನಿಮ್ಮದಾಗಿದ್ದರೆ, ಮನೆಯ ತಾರಸಿಯಿಂದ ಮಳೆ ನೀರು ಹೊರ ಹೋಗಲು ಪೈಪ್ ಇದ್ದೇ ಇರುತ್ತದೆ. ಆ ಪೈಪನ್ನು ನೇರವಾಗಿ ಪ್ಲಾಸ್ಟಿಕ್ ಡ್ರಮ್ ಅಥವಾ ಸಿಮೆಂಟಿನ ಸಂಪಿಗೆ ಜೋಡಿಸಿ.
2. ನಿಮ್ಮದು ಹೆಂಚಿನ ಮನೆಯಾದರೆ ಅಡ್ಡಡ್ಡ ಕತ್ತರಿಸಿದ ದೊಡ್ಡ ಪಿವಿಸಿ ಪೈಪುಗಳನ್ನು ಹೆಂಚುಗಳ ಕೊನೆಗೆ ಜೋಡಿಸಿ, ನೀರನ್ನು ಡ್ರಮ್ ಅಥವಾ ಸಂಪಿನೊಳಗೆ ಹೋಗುವಂತೆ ಮಾಡಿ.
3. ಜಾಳಿಗೆಯೊಂದನ್ನು ಅಳವಡಿಸುವ ಮೂಲಕ ಪೈಪಿನಿಂದ ಬರುವ ನೀರಿನಲ್ಲಿರುವ ಕಸ ಕಡ್ಡಿ ಡ್ರಮ್-ಗೆ ಅಥವಾ ಸಂಪಿನೊಳಗೆ ಸೇರುವುದನ್ನು ತಡೆಯಿರಿ.
4. ನೀರನ್ನು ಬಳಸಲು ಆರಂಭಿಸಿ.

ದೊಡ್ಡ ಪ್ರಮಾಣದ ಕೊಯ್ಲು
ನೆಲ ಮಟ್ಟಕ್ಕಿಂತ ಕೆಳಗಿರುವ ನೀರು ಸಂಗ್ರಹಿಸುವ ತೊಟ್ಟಿ ಅಥವಾ ಸಂಪು ನಿಮ್ಮ ಮನೆಯಲ್ಲಿದ್ದರೆ, ದೊಡ್ಡ ಪ್ರಮಾಣದಲ್ಲಿ ಮಳೆಕೊಯ್ಲು ಮಾಡಬಹುದು.
1. ಸಂಗ್ರಹವಾದ ಮಳೆನೀರನ್ನು ಪೈಪೊಂದರಲ್ಲಿ ಬರುವಂತೆ ಮಾಡಬೇಕು.
2. ನೆಲಮಟ್ಟದಲ್ಲಿ 4ರಿಂದ 6 ಅಡಿ ಎತ್ತರ - 3 ಅಡಿ ಅಗಲದ ಫಿಲ್ಟರ್ ನಿರ್ಮಿಸಬೇಕು.
3. ನೀರನ್ನು ಶುದ್ಧಗೊಳಿಸಲು 4 ಇಂಚು ಇದ್ದಿಲು ಮತ್ತು 4 ಇಂಚು ಮರಳನ್ನು ಫಿಲ್ಟರ್ ಗೆ ಸೇರಿಸಬೇಕು.
4. ಇದರ ಮೂಲಕ ಹಾದ ಮಳೆ ನೀರು ಶುದ್ಧಗೊಂಡು ಪೈಪ್ ಮುಖಾಂತರ ಸಂಪನ್ನು ಸೇರುತ್ತದೆ.
5. ಸಂಪಿನಲ್ಲಿ ಸಂಗ್ರಹಗೊಂಡ ನೀರನ್ನು over head tankಗೆ ಸೇರಿಸಿ ಬಳಸಬಹುದು.

ಹೊಸ ಮನೆಗೆ ಸಲಹೆ
ಹೊಸದಾಗಿ ಮನೆ ಕಟ್ಟುತ್ತಿರುವವರು 6,000 ಲೀಟರ್ ನಿಂದ 9,000 ಲೀಟರ್ ಸಾಮರ್ಥ್ಯವಿರುವ ಸಂಪನ್ನು ಕಟ್ಟಿಸುವುದು ಒಳ್ಳೆಯದು.
ಒಮ್ಮೆ ಬೀಳುವ ಸಾಧಾರಣ ಮಳೆಗೆ ಮೂರರಿಂದ ಮೂರೂವರೆ ಸಾವಿರ ಲೀಟರ್ ನೀರು ಸಂಪಲ್ಲಿ ಸಂಗ್ರಹವಾಗುತ್ತದೆ. ನಿಮ್ಮ ಬಳಿ ಸಂಪು ಇಲ್ಲದಿದ್ದರೂ ಚಿಂತೆ ಮಾಡಬೇಕಿಲ್ಲ.ಮನೆಯ ಪಕ್ಕದಲ್ಲೇ 8-12 ಅಡಿಗಳ ಎತ್ತರದಲ್ಲಿ ಟ್ಯಾಂಕೊಂದನ್ನು ನಿರ್ಮಿಸಿ, ನೀರೆಲ್ಲವನ್ನು ಅಲ್ಲಿ ಸಂಗ್ರಹಿಸಿ ನಂತರ ಆ ನೀರನ್ನು ಬಳಸಿಕೊಳ್ಳಬಹುದು.ಈ ವ್ಯವಸ್ಧೆಯಲ್ಲಿ ಟ್ಯಾಂಕ್ ನಿಂದ ನಲ್ಲಿಗಳಿಗೆ ಸಂಪರ್ಕ ಕೊಟ್ಟು, ನೀರನ್ನು ನೇರವಾಗಿ ನಿಮ್ಮ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿದೆ.
ಇನ್ನಿತರ ಸಲಹೆಗಳು
1. ಮನೆಯ ಹಂಚು, ತಾರಸಿಯ ಮೇಲ್ಮೈಯನ್ನು ಗಲೀಜಾಗದಂತೆ ನೋಡಿಕೊಳ್ಳಿ.
2. ತಾರಸಿಯಲ್ಲಿ ರಾಸಾಯನಿಕಗಳು, ಕ್ರಿಮಿನಾಶಕಗಳನ್ನು ಸಂಗ್ರಹಿಸಬೇಡಿ.
3. ಮಳೆಗಾಲದ ಆರಂಭಕ್ಕೆ ಮುನ್ನ ಹಂಚು, ತಾರಸಿಯನ್ನು ಗುಡಿಸಿ ಚೊಕ್ಕಟವಿರಿಸಿಕೊಳ್ಳಿ.
4. ಮೊದಲ ಮಳೆಯ ನೀರಿನ ಸಂಗ್ರಹ ಬೇಡ.
5. ಮಳೆಗಾಲ ಮುಗಿದ ನಂತರ ಪೈಪುಗಳನ್ನು ಕಳಚಿಡಿ.
6. ಎರಡು ವರ್ಷಗಳಿಗೊಮ್ಮೆ ಫಿಲ್ಟರ್ ನ ಇದ್ದಿಲು ಮತ್ತು ಮರಳು ಬದಲಾಯಿಸಿ.
7. ಕುಡಿಯಲು ಮಳೆ ನೀರನ್ನು ಬಳಸುತ್ತೀರಾದರೆ:
a. ಪಾದರಕ್ಷೆ ಬಳಸಿ ತಾರಸಿಯಲ್ಲಿ ಓಡಾಡಬೇಡಿ.
b. ಡಿಟರ್ಜಂಟ್ ಯುಕ್ತ ನೀರು ಇರುವ ಬಟ್ಟೆಗಳನ್ನು ತಾರಸಿಯಲ್ಲಿ ಒಣಗಿಸಬೇಡಿ.

ಕೊನೆ ಸಲಹೆ
ಒಂದು ಲೆಕ್ಕಾಚಾರದ ಪ್ರಕಾರ ಅರವತ್ತರಿಂದ ಅರವತ್ತೈದು ಮಳೆ ದಿನಗಳು ಸಿಗುತ್ತವೆ. ದಿನವೊಂದಕ್ಕೆ ಸರಾಸರಿ 30 ಮಿಲಿಮೀಟರ್ ಮಳೆ ಆಗುತ್ತದೆ. ಮೂವತ್ತು ಅಡಿ ಉದ್ದ ನಲವತ್ತು ಚದರಡಿ ವಿಸ್ತೀರ್ಣದ ನೆಲದ ಮೇಲೆ ವರ್ಷಕ್ಕೆ ಸುಮಾರು ಒಂದು ಲಕ್ಷ ಲೀಟರ್ ನೀರಿನಷ್ಟು ಮಳೆ ಸುರಿಯುತ್ತದೆ. ಒಮ್ಮೆ ಆಲೋಚಿಸಿ ನೋಡಿ, ಎಷ್ಟೊಂದು ನೀರು ಪೋಲಾಗುತ್ತಿದೆ!
ಮಳೆಕೊಯ್ಲಿನಿಂದ ಸಂಗ್ರಹಿಸಿದ ಮಳೆನೀರನ್ನು ಎಷ್ಟುದಿನ ಬೇಕಾದರೂ ಇಡಬಹುದು. ಗಾಳಿ, ಬೆಳಕು ಬೀಳದ ಜಾಗದಲ್ಲಿ ನೀರನ್ನು ಸಂಗ್ರಹಿಸಿಟ್ಟು ನಿಮಗೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಮಳೆ ಬರುತ್ತಿರುವಾಗ ಅದರ ಪ್ರಾಮುಖ್ಯತೆ ತಿಳಿಯುವುದಿಲ್ಲ. ಹೀಗಾಗಿ, ಈ ಬಿರು ಬೇಸಗೆಯಲ್ಲೇ, ಮಳೆ ನೀರು ಕೊಯ್ಲಿಗೆ ಬೇಕಾದ ಸಿದ್ಥತೆ ಮಾಡಿಕೊಂಡರೆ ಮುಂದೆ ಅನುಕೂಲವಾದೀತು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications