ಹೆಂಡತಿ ಅಶ್ಲೀಲ ಚಿತ್ರ ಕಳುಹಿಸಿ ಸಿಕ್ಕಿಬಿದ್ದ ಬೆಂಗಳೂರು ಟೆಕ್ಕಿ

cyber crime
ಬೆಂಗಳೂರು, ಜೂ.18 : ವಿಚ್ಛೇದಿತ ಪತ್ನಿಯ ಅಶ್ಲೀಲ ಫೋಟೋಗಳನ್ನು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕಳುಹಿಸುತ್ತಿದ್ದ ನಗರದ ಸಾಫ್ಟ್‌ವೇರ್ ಇಂಜಿನಿಯರ್ ನನ್ನು ಆಂಧ್ರಪ್ರದೇಶದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ, ಬೆಂಗಳೂರಿನ ಜೆ.ಪಿ.ನಗರದ ನಿವಾಸದಿಂದ ಟೆಕ್ಕಿ ನಂದ ಕುಮಾರ್ ಜೈ ಅವರನ್ನು ಆಂಧ್ರ ಪ್ರದೇಶದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಐಡಿ ಪೊಲೀಸರು ಕಾರ್ಯಚರಣೆಗೆ ನೆರವಾಗಿದ್ದು, ಬಂಧನವಾಗಿರುವ ಕುರಿತು ಸ್ಪಷ್ಟಪಡಿಸಿದ್ದಾರೆ.

ಬಂಧಿತ ಆರೋಪಿ ನಂದಕುಮಾರ್, ವಿರುದ್ಧ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು, ಸೋಮವಾರ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಆರೋಪವೇನು : ಗುಂಟೂರು ಜಿಲ್ಲೆಯ ಯುವತಿಯನ್ನು ನಂದಕುಮಾರ್ ಮೊದಲು ವಿವಾಹವಾಗಿದ್ದರು. ನಂತರ ಇಬ್ಬರು ಪರಸ್ಪರ ಒಪ್ಪಿಗೆ ಪಡೆದು ವಿಚ್ಛೇದನ ಪಡೆದಿದ್ದರು. ನಂತರ ಆಕೆ, ಅಮೆರಿಕಾಕ್ಕೆ ಹೋಗಿ ನೆಲೆಸಿದರು. ನಂದಕುಮಾರ್ ಸಹ ಎರಡನೇ ವಿವಾಹವಾದರು.

ಆದರೆ, ಕಳೆದ ಕೆಲವು ದಿನಗಳಿಂದ ಮೊದಲ ವಿಚ್ಛೇದಿತ ಪತ್ನಿಯ ಅಶ್ಲೀಲ ಫೋಟೋಗಳನ್ನು, ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ನಂದಕುಮಾರ್ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ಹೆಸರಿನಲ್ಲಿ ಐದು ನಕಲಿ ಇ-ಮೇಲ್ ಐಡಿ ಸೃಷ್ಠಿಸಿ ಪೋಟೋಗಳನ್ನು ಕಳಿಸಲಾಗುತ್ತಿದೆ.

ಈ ಕುರಿತು ಮಾಹಿತಿ ತಿಳಿದ ಆಕೆ, ನನ್ನ ವಿಚ್ಛೇದಿತ ಪತಿಯ ಕೈವಾಡ ಇದರಲ್ಲಿ ಇದೆ ಎಂದು ಗುಂಟೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ನನ್ನ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಸೃಷ್ಠಿಸಿ ಅದರ ಮೂಲಕ, ಅಶ್ಲೀಲ ಫೋಟೋವನ್ನು ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ನಂದಕುಮರ್ ಇ-ಮೇಲ್ ಐಡಿಗಳು ಮತ್ತು ಪೋಟೋಗಳು ರವಾನೆಯಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಿ ನಂದಕುಮಾರ್ ಅವರನ್ನು ಬಂಧಿಸಿದ್ದಾರೆ. ಕರ್ನಾಟಕ ಸಿಐಡಿ ಅಧಿಕಾರಿಗಳ ಸಹಾಯದೊಂದಿಗೆ ನಂದಕುಮಾರ್ ವಿಚಾರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+