ಪೆಟ್ರೋಲ್ ಲೀಟರಿಗೆ 2 ರು. ಹೆಚ್ಚಳ ಸಂಭವ

ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸುವ ಅಧಿಕಾರವನ್ನು ತೈಲ ಕಂಪನಿಗಳು ಹೊಂದಿವೆ. ಪೆಟ್ರೋಲಿಯಂ ಸಚಿವಾಲಯ ಅನುಮತಿ ನೀಡಿದರೆ ಜುಲೈ 15ರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ ಪರಿಷ್ಕೃತವಾಗಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮೇ 31ರಂದು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 75 ಪೈಸೆಯಷ್ಟು ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಇಲ್ಲಿಯವರೆಗೆ ಆಗಿರುವ ಎಲ್ಲ ನಷ್ಟವನ್ನು ತುಂಬಿಕೊಳ್ಳಲು ಪ್ರತಿ 15 ದಿನಗಳಿಗೊಮ್ಮೆ 50 ಪೈಸೆಯಷ್ಟು ಹೆಚ್ಚಿಸಲು ಕಳೆದ ಜನವರಿಯಲ್ಲಿ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಮುಕ್ತಹಸ್ತ ನೀಡಲಾಗಿದೆ.
ನವದೆಹಲಿಯಲ್ಲಿ ಪ್ರಸ್ತುತ 63.99 ಪೈಸೆಗೆ 1 ಲೀಟರ್ ಪೆಟ್ರೋಲ್ ಮಾರಾಟವಾಗುತ್ತಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಲೀಟಲಿರೆ ಗ್ರಾಹಕರು 69.79 ರು.ಯಷ್ಟು ತೆತ್ತುತ್ತಿದ್ದಾರೆ. ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ಕರ್ನಾಟಕದಲ್ಲಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಡೀ ದೇಶದಲ್ಲಿ ಅತಿ ಹೆಚ್ಚಾಗಿದೆ.












Click it and Unblock the Notifications