ಸುಳ್ಯ ಸ್ಕೂಲಿನಲ್ಲಿ ಇದೇನಿದು ಕರ್ಮ: ಎಲ್ಲ ಸಿಬ್ಬಂದಿ ಸಸ್ಪೆಂಡ್

Campus Quarrels - Sullia taluk Aletti village govt high school staff suspended,
ಮಂಗಳೂರು, ಜೂ. 5: ಈ ಬಾರಿ ಹೊಸ ಸರಕಾರ ಶೈಕ್ಷಣಿಕ ವರ್ಷಾರಂಭವನ್ನು ಅದ್ದೂರಿಯಿಂದ ಆಚರಿಸಿತು. ಎಲ್ಲೆಲ್ಲೂ ಸಂಭ್ರಮ ಸಡಗರ ನೆಲೆಸಿತ್ತು. ಆದರೆ ಸುಳ್ಯದ ಆ ಹೈಸ್ಕೂಲಿನಲ್ಲಿ ಆ ಸಂಭ್ರಮ ಕ್ಷಣಿಕವಾಗಿತ್ತು.

ಏಕೆಂದರೆ ಅಲ್ಲಿದ್ದ ಸಿಬ್ಬಂದಿಯೆಲ್ಲ ಅದೇ ಹಳಬರು. ಅವರು ಪಾಲಿಸಿಕೊಂಡು ಬಂದಿದ್ದ ಹವ್ಯಾಸಗಳೂ ಶಾಲೆಗೆ ಮಾದರಿಯಾಗಿರಲಿಲ್ಲ. ಹಾಗಾಗಿ ಅಲ್ಲಿನ ಶಿಕ್ಷಣಾಧಿಕಾರಿಗಳು ಅಷ್ಟೂ ಸಿಬ್ಬಂದಿಯನ್ನು ಸೋಮವಾರ ಮನೆಗೆ ಕಳಿಸಿದ್ದಾರೆ. ಯಾಕಪ್ಪಾ ಅಂಥಾ ತಪ್ಪೇನು ಮಾಡಿದರು ಅಂದರೆ ಮಕ್ಕಳಿಗೆ ಮಾದರಿಯಾಗಬೇಕಿದ್ದ ಅಲ್ಲಿನ ಬೋಧಕ ಸಿಬ್ಬಂದಿ ಸೇರಿದಂತೆ ಎಲ್ರೂ ಚಿಕ್ಕಮಕ್ಕಳಂತೆ ಶಾಲಾ ಆವರಣದಲ್ಲೇ ಅಬೋಧ ಮಕ್ಕಳೆದುರೇ ದಿನಾ ಬೈದಾಡಿಕೊಳ್ಳುತ್ತಿದ್ದರು. ಕೆಲವೊಮ್ಮ ಹೊಡೆದಾಡಿಕೊಳ್ಳುವ ಹಂತಕ್ಕೂ ಹೋಗುತ್ತಿತ್ತು.

ಇದರಿಂದ ಬೇಸತ್ತ ಡಿಡಿಪಿಐ ಮೋಸೆಸ್ ಜಯಶೇಖರ್ ಅವರು ಅಷ್ಟೂ ಮಂದಿಯನ್ನು ಮನೆಗಟ್ಟಿದ್ದಾರೆ. ಮಕ್ಕಳಿಗೆ ತೊಂದರೆಯಾಗಬಾರದು ಎಂದು ತಕ್ಷಣ 6 ಶಿಕ್ಷಕರನ್ನು ಬೇರೆ ಶಾಲೆಗಳಿಂದ ಇಲ್ಲಿಗೆ ಕಳಿಸಿಕೊಟ್ಟಿದ್ದಾರೆ.

ಅಂದಹಾಗೆ, ಅಲೆಟಿ ಗ್ರಾಮದ ಸರಕಾರಿ ಹೈಸ್ಕೂಲಿನಲ್ಲಿ ಈ ವಿಚಿತ್ರ ಸನ್ನಿವೇಶ ನಡೆದಿದ್ದು, ಇಲ್ಲಿ 68 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಶಾಲಾ ಸಿಬ್ಬಂದಿ ಎಷ್ಟೊಂದು ಕುಖ್ಯಾತರಾಗಿದ್ದರು ಅಂದರೆ ಪ್ರಸಕ್ತ ವರ್ಷ ಕೇವಲ 3 ವಿದ್ಯಾರ್ಥಿಗಳಷ್ಟೇ ಈ ಶಾಲೆಗೆ ದಾಖಲಾಗಿದ್ದರು. ಶಾಲೆಯ ವಾತಾವರಣದಿಂದ ಆತಂಕಿತಗೊಂಡ ಪೋಷಕರು ತಮ್ಮ ಮಕ್ಕಳನ್ನು ಸುತ್ತಮುತ್ತಲ ಶಾಲೆಗಳಿಗೆ ಕಳಿಹಿಸುತ್ತಿದ್ದಾರೆ.

ಯಾರೆಲ್ಲ ಸಸ್ಪೆಂಡು?: ಆರು ಶಿಕ್ಷಕರು ಒಬ್ಬರು ದ್ವಿತೀಯ ದರ್ಜೆ ಗುಮಾಸ್ತರು ಈಗ ಮನೆಯ ಹಾದಿ ಹಿಡಿದಿದ್ದಾರೆ. ಯಾರಪ್ಪಾ ಅವರು, ಅವರ ನಾಮಧೇಯವೇನು ಅಂದರೆ ಹೆಡ್ ಮೇಡಂ ಕೆ ಸಂಧ್ಯಾ ಅವರಿಂದ ಆರಂಭವಾಗಿ ಸಹಾಯಕ ಶಿಕ್ಷಕಿ ಕೆ ಚಂದ್ರಮತಿ, ದೈಹಿಕ ಶಿಕ್ಷಣ ಶಿಕ್ಷಕ ಎನ್ ಶಿವಕುಮಾರ ಮತ್ತಯ ಕ್ಲರ್ಕ್ ಯೋಗೇಶ್ ಭರತ್ ಸಾಲಾಗಿ ನಿಲ್ಲುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+