ರಾಮಕೃಷ್ಣ ಉಪಾಧ್ಯಾಯ ಪ್ರೆಸ್ ಕ್ಲಬ್ ಅಧ್ಯಕ್ಷ

Ramakrishna Upadhyaya
ಬೆಂಗಳೂರು, ಜೂ. 3: ಪ್ರೆಸ್ ಕ್ಲಬ್ ವಾರ್ಷಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ, ಉಪಾಧ್ಯಕ್ಷರಾಗಿ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಆಯ್ಕೆಯಾಗಿದ್ದಾರೆ.

ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಶಣೈ, ಕಾರ್ಯದರ್ಶಿಯಾಗಿ ಕಿರಣ್, ಖಜಾಂಚಿಯಾಗಿ ದೊಡ್ಡಬೊಮ್ಮಯ್ಯ, ಸದಸ್ಯರಾಗಿ ಎನ್.ಎಸ್. ಸುಭಾಶ್ಚಂದ್ರ, ರಮೇಶ್ ಪಾಳ್ಯ, ಎಸ್. ಶಿವಪ್ರಕಾಶ್, ಕೆ.ಎಸ್.ಸೋಮಶೇಖರ್, ಎನ್.ಎಚ್. ಮೃತ್ಯುಂಜಯ ಹಾಗೂ ಜಿ.ಮೋಹನ್ ರಾವ್ ಚುನಾಯಿತರಾಗಿದ್ದಾರೆ ಎಂದು ಪ್ರೆಸ್ ಕ್ಲಬ್ ಪ್ರಕಟಿಸಿದೆ.

ರಾಮಕೃಷ್ಣ ಉಪಾಧ್ಯಾಯ ಅವರು ಡೆಕ್ಕನ್ ಹೆರಾಲ್ಡ್ ನ ಸಹಾಯಕ ಸಂಪಾದಕ, ವಿಜಯ್ ಟೈಮ್ಸ್ ನ ಸಂಪಾದಕರಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಮೂವರು, ಉಪಾಧ್ಯಕ್ಷ ಮೂವರು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂವರು, ಕಾರ್ಯದರ್ಶಿ ಸ್ಥಾನಕ್ಕೆ ಮೂವರು, ಖಜಾಂಚಿ ಸ್ಥಾನಕ್ಕೆ ಐವರು ಹಾಗೂ ಆಡಳಿತ ಮಂಡಳಿ ಸ್ಥಾನಗಳಿಗೆ 12 ಮಂದಿ ಸ್ಪರ್ಧೆಯಲ್ಲಿದ್ದರು. ಭಾನುವಾರ ಬೆಳಗ್ಗೆ 9 ಗಂಟೆಯಿಂದ 2 ಗಂಟೆ ತನಕ ಮತದಾನ ಹಾಗೂ ಎಣಿಕೆ ಕಾರ್ಯ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+