ರಾಕೇಶ್ ಸಿದ್ದರಾಮಯ್ಯ ದಾಂಧಲೆ ಪ್ರಕರಣ ಸಿಸಿಬಿಗೆ

ಚುನಾವಣೆ ಸಂದರ್ಭದಲ್ಲಿ (ಮೇ 3) ನಡೆದಿದ್ದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಕಿರಿಯ ಪುತ್ರ ರಾಕೇಶ್ ಮತ್ತು ಡಾ. ಎಚ್ ಸಿ ಮಹಾದೇವಪ್ಪ ಸೇರಿದಂತೆ 15 ಮಂದಿ ವಿರುದ್ಧ ನಜರಬಾದ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ನಜರಬಾದ್ ಇನ್ಸ್ ಪೆಕ್ಟರ್ ಜಿಎನ್ ಮೋಹನ್ ಅವರು ರಾಕೇಶನನ್ನು ಆರೋಪಿ A1 ಎಂದು ಗುರುತಿಸಿ, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.
ಇದರಿಂದ ಸಿಟ್ಟಿಗೆದ್ದು ಮುಖ್ಯಮಂತ್ರಿಯಾಗುತ್ತಿದ್ದಂತೆ ಖುದ್ದು ಸಿದ್ದರಾಮಯ್ಯ ಅವರೇ ಪೊಲೀಸ್ ಮೋಹನರನ್ನು ಮನೆಗೆ ಕಳಿಸಿದ್ದಾರೆ ಎಂದು ಮೈಸೂರು ಜನ ಮಾತನಾಡಿಕೊಂಡಿದ್ದರು.
ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇರೆಗೆ ಇನ್ಸ್ ಪೆಕ್ಟರ್ ಮೋಹನ್ ಅವರನ್ನು ಸೇವೆಯಿಂದ ಅಮಾನತು ಮಾಡಿದ ನಗರ ಪೊಲೀಸ್ ಆಯುಕ್ತ ಕೆಎಲ್ ಸುಧೀರ್ ಅವರು ಈಗ ಇಡೀ ಪ್ರಕರಣವನ್ನು ಸಿಸಿಬಿ ತನಿಖೆಗೆ ವರ್ಗಾಯಿಸಿರುವುದು ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ, ಮೋಹನ್ ಅಮಾನತಿನ ಬಳಿಕ ರಾಕೇಶ್ ಪ್ರಕರಣವನ್ನು ನಜರ್ ಬಾದ್ ಠಾಣೆ ಪ್ರಭಾರ ಇನ್ಸ್ ಪೆಕ್ಟರ್ ಜಯಕುಮಾರ್ ನಿರ್ವಹಿಸುತ್ತಿದ್ದರು.












Click it and Unblock the Notifications