ಖತಾರಿಂದ ಬಂದ ವಿವಾಹಿತ ಗುಂಡಿಟ್ಕೊಂಡು ಆತ್ಮಹತ್ಯೆ

udupi-married-santosh-a-qatar-returned-shoots-self
ಉಡುಪಿ, ಮೇ 29: ಖತಾರ್ ಕೊಲ್ಲಿಯಿಂದ ವಾಪಸಾಗಿದ್ದ 37 ವರ್ಷದ ವ್ಯಕ್ತಿ ತಲೆಗೆ ಗುಂಡಿಟ್ಟುಕೊಂಡು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಶಿರಿಬೀಡುವಿನಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ಸಂತೋಷ್ ಮಾಟೆರೊ ಎಂದು ಗುರುತಿಸಲಾಗಿದೆ.

ತಾವು ವಾಸವಾಗಿದ್ದ ಅಪಾರ್ಟ್ ಮೆಂಟಿನಲ್ಲೇ ಈ ಕೃತ್ಯವೆಸಗಿದ್ದು, ಘಟನೆಯ ವೇಳೆ ಸಂತೋಷ್ ಅವರ ಪತ್ನಿ ರೇಖಾ ಮತ್ತು ಇಬ್ಬರು ಪುತ್ರರು ಪಕ್ಕದ ಕೋಣೆಯಲ್ಲಿದ್ದರು ಎನ್ನಲಾಗಿದೆ. ಇವರು ಖತಾರ್ ನಲ್ಲಿ ಅನೇಕ ವರ್ಷಗಳ ಕಾಲ ಉದ್ಯೋಗದಲ್ಲಿದ್ದು, 2 ವರ್ಷಗಳ ಹಿಂದೆ ಉಡುಪಿಗೆ ವಾಪಸಾಗಿ, ಇಲ್ಲೇ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು.

ಸಂತೋಷ್ ಉಡುಪಿಯಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅವರ ದೇಹದ ಸಮೀಪ ರಿವಾಲ್ವರ್ ಮತ್ತು ಟೇಬಲ್ ಮೇಲೆ ಲ್ಯಾಪ್ ಟಾಪ್, ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆತ್ಮಹತ್ಯೆಗೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕೌಟುಂಬಿಕ ಕಲಹವೋ ಅಥವಾ ಹಣಕಾಸು ಬಿಕ್ಕಟ್ಟು ಅವರನ್ನು ಸಾವಿನ ಮನೆಗೆ ದೂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಂತೋಷ್ ತನ್ನ ಸಾವಿನ ಮುನ್ನ ಪತ್ನಿ ರೇಖಾರ ಸೋದರನಿಗೆ ಒಂದೇ ಸಮನೆ ಎಸ್ಎಂಎಸ್ ಸಮದೇಶಗಳನ್ನು ರವಾನಿಸಿದ್ದಾರೆ ಎಂದು ಎಸ್ಐ ಲಿಂಗರಾಜು ತಿಳಿಸಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+