ಐಪಿಎಲ್ ಸ್ಪಾಟ್ ಫಿಕ್ಸಿಂಗ್ : ಶನಿವಾರದ ಬೆಳವಣಿಗೆಗಳು
ಮುಂಬೈ, ಮೇ. 25 : ಕ್ರಿಕೆಟ್ ಬಗ್ಗೆ ಅಸಹ್ಯ ಮೂಡುವಂತೆ ಮಾಡಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಕಣಕ್ಕೆ ಇಳಿದಿರುವ ಕೇಂದ್ರ ಸರಕಾರ ಬೆಟ್ಟಿಂಗ್ ಭೂತವನ್ನು ಮೆಟ್ಟಿನಿಲ್ಲಲು ಬೆಟ್ಟಿಂಗ್ ನಿಷೇಧ ಕಾನೂನು ರಚಿಸುವ ನಿರ್ಧಾರಕ್ಕೆ ಬಂದಿದೆ. ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಹೊಸ ನೀತಿ ರೂಪಿಸುವುದಾಗಿ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಪೊಲೀಸ್ ಕಸ್ಟಡಿಗೆ ಗುರು : ಸ್ಪಾಟ್ ಫಿಕ್ಸಿಂಗ್ ಪ್ರಮುಖ ಆರೋಪಿ, ಚೆನ್ನೈ ಸೂಪರ್ ಕಿಂಗ್ಸ್ ಸಿಇಓ ಗುರುನಾಥ ಮೇಯಪ್ಪನ್ ನನ್ನು ಮೇ 29ರವರೆಗೆ ಪೊಲೀಸ್ ವಶಕ್ಕೆ ನೀಡಿ ಮುಂಬೈ ಕೋರ್ಟ್ ಆದೇಶ ನೀಡಿದೆ. ಗುರುನಾಥ್ ಬುಕ್ಕಿಗಳ ಜೊತೆ ನಾಲ್ಕು ಮೊಬೈಲ್ ಫೋನ್ ಮುಖಾಂತರ ಡೀಲ್ ನಡೆಸಿದ್ದ ಎಂದು ಮೂಲಗಳಿಂದ ತಿಳಿದುಬಂದಿದ್ದು, ಆತನ ಮೊಬೈಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಪಟ್ಟಿ ಸಲ್ಲಿಕೆ : ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಬಿಸಿಸಿಐ ಚೇರ್ಮನ್ ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ವಿರುದ್ಧ ಜೂಜು ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿ ಜೂಜು ಆಡಿದ ಮತ್ತು ಮೋಸ ಮಾಡಿದ ಆರೋಪಪಟ್ಟಿಯನ್ನು ಪೊಲೀಸರು ಮುಂಬೈ ಕೋರ್ಟಿನಲ್ಲಿ ಸಲ್ಲಿಸಿದ್ದಾರೆ.
ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಗುರುನಾಥನನ್ನು ಶುಕ್ರವಾರ ರಾತ್ರಿ 12 ಗಂಟೆ ಸುಮಾರಿಗೆ ಬಂಧಿಸಿದ್ದರು. ಶನಿವಾರ ಮಧ್ಯಾಹ್ನ ಗುರುನಾಥನನ್ನು ಮುಂಬೈ ಕೋರ್ಟಿನ ಮುಂದೆ ಹಾಜರುಪಡಿಸಲಾಯಿತು. ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ರುಜುವಾತುಪಡಿಸಿಕೊಳ್ಳುವ ಉದ್ದೇಶದಿಂದ ಗುರುನಾಥನ ಕಸ್ಟಡಿಯನ್ನು ಪೊಲೀಸರು ಕೇಳುವ ಸಾಧ್ಯತೆಯಿದೆ.
ತನ್ನ ಅಳಿಯನ ಬಂಧನವಾಗುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಶನಿವಾರ ಮುಂಬೈಗೆ ಬಂದಿಳಿದಿರುವ ಬಿಸಿಸಿಐ ಚೀಫ್ ಶ್ರೀನಿವಾಸನ್ ಅವರು, "ಈ ಹಗರಣದಲ್ಲಿ ನಾನೇನು ತಪ್ಪು ಮಾಡಿಲ್ಲ. ನಾನ್ಯಾಕೆ ರಾಜೀನಾಮೆ ನೀಡಲಿ? ನನ್ನನ್ನು ಹುದ್ದೆಯಿಂದ ಕೆಳಗಿಳಿಸಲು ಕೆಲ ಶಕ್ತಿಗಳು ವ್ಯವಸ್ಥಿತ ಸಂಚು ನಡೆಸುತ್ತಿವೆ. ಮಾಧ್ಯಮ ಕೂಡ ನನ್ನ ವಿರುದ್ಧ ಕೆಲಸ ಮಾಡುತ್ತಿದೆ" ಎಂದು ಕೆಂಡ ಕಾರಿದ್ದಾರೆ.

ಸ್ವತಃ ಅಳಿಯನೇ ಸ್ಪಾಟ್ ಫಿಕ್ಸಿಂಕ್ ಹಗರಣದಲ್ಲಿ ಭಾಗಿಯಾಗಿರುವುದರಿಂದ ಶ್ರೀನಿವಾಸನ್ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕೆಂದು ಎಲ್ಲ ವಲಯಗಳಿಂದ ಕೇಳಿಬರುತ್ತಿದೆ. ಅವರ ಸ್ಥಾನದಲ್ಲಿ ಯಾರನ್ನು ಕೂರಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಶ್ರೀನಿವಾಸನ್ ಮಾತ್ರ ಈ ಕೂಗಿಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಸ್ಥಾನಕ್ಕೆ ಬರಲಿಚ್ಛಿಸುವವರು ಬೇಕಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದ್ದಾರೆ.
ಒಂದು ಮೂಲದ ಪ್ರಕಾರ, ಬಿಸಿಸಿಐ ಅಧಿಕಾರಿಗಳು ಶ್ರೀನಿವಾಸನ್ ಅವರನ್ನು ಕೆಳಗಿಳಿಸಿ ಬೇರೆಯವರನ್ನು ತಂದುಕೂಡಿಸು ಬಗ್ಗೆ ಚರ್ಚೆ ನಡೆಸಿದ್ದಾರೆ. ಶ್ರೀನಿವಾಸನ್ ತಾವಾಗಿಯೇ ಕುರ್ಚಿ ಬಿಟ್ಟುಕೊಡದಿದ್ದರೆ ಅವರನ್ನು ಬಹುಮತದ ಮುಖಾಂತರ ಕೆಳಗಿಳಿಸುವ ಚಿಂತನೆಯೂ ನಡೆಯುತ್ತಿದೆ.
this year #ipl awards goes to #Delhi police for catching the bookies !!now all cricketer's reaction "Vada pochey :( " #bcci #India
— JITHESH (@ActorJithesh) May 25, 2013
ಕ್ರಿಸ್ ಕೂಡ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿ? : ಇದೀಗ ಬರುತ್ತಿರುವ ಮತ್ತೊಂದು ಶಾಕಿಂಗ್ ಸುದ್ದಿಯೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ದಾಂಡಿಗ ಕ್ರಿಸ್ ಗೇಯ್ಲ್ ಕೂಡ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬುದು. ಕೆಲ ಬುಕ್ಕಿಗಳಿಂದ ಕ್ರಿಸ್ ಕೂಡ ಅತಿ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ಬಿಸಿಬಿಸಿ ಸುದ್ದಿಯನ್ನು ಬಿತ್ತರಿಸುತ್ತಿದೆ. ಅದು ಹೇಳುವುದೇನೆಂದರೆ, ಪವನ್ ಮತ್ತು ಸಂಜಯ್ ಎಂಬ ಬುಕ್ಕಿಗಳಿಂದ ಕ್ರಿಸ್ ಗೇಯ್ಲ್ ಅವರು 4.5 ಲಕ್ಷ ರು. ಮೌಲ್ಯದ ಚಿನ್ನದ ಆಭರಣ ಪಡೆದಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಕ್ರಿಸ್ ಗೇಯ್ಲ್ ಮತ್ತು ಬಂಧಿತನಾಗಿರುವ ರಾಯಲ್ ಚಾಲೆಂಜರ್ಸ್ ಬೌಲರ್ ಎಸ್ ಶ್ರೀಶಾಂತ್ ಚಿನ್ನದ ಆಭರಣ ಖರೀದಿಸಿದ್ದರು ಮತ್ತು ಅದರ ಮೊತ್ತವನ್ನು ದೆಹಲಿ ಪೊಲೀಸರಿಂದ ಬಂಧಿತನಾಗಿರುವ ಬುಕ್ಕಿ ಜಿಜು ಜನಾರ್ಧನ ಅಲಿಯಾಸ್ ಬಿಜು ಪಾವತಿ ಮಾಡಿದ್ದ.
Gurunath Meiyappan charged under 465, 466, 468, 471, 419, 420, 120b of IPC 4 and 5 of the Gambling Act and 66a of IT act: PTI #IPL
— Thatscricket (@thatscricket) May 25, 2013











Click it and Unblock the Notifications