ಉಡುಪಿ ಕೃಷ್ಣಮಠ ಸ್ವಾಧೀನ:ನಿಲುವು ಸ್ಪಷ್ಟ ಪಡಿಸಿದ ಸಿಎಂ

ಬೆಂಗಳೂರು, ಮೇ 23: ಮುಖ್ಯಮಂತ್ರಿಯಾದ ನಂತರ ಉಡುಪಿ ಕೃಷ್ಣಮಠ ಮತ್ತು ಗೋಕರ್ಣ ದೇವಾಲಯ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಅವರ ನಿಲುವೇನು ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿತ್ತು.

ವಿರೋಧ ಪಕ್ಷದ ನಾಯಕರಾಗಿದ್ದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಡುಪಿ ಕೃಷ್ಣಮಠದ ಆಡಳಿತ ಸರಕಾರದ ನಿಯಂತ್ರಣಕ್ಕೆ ಬರಲಿದೆ ಎಂದು ಸಿದ್ದು ಪದೇ ಪದೇ ಹೇಳಿಕೆ ನೀಡಿದ್ದರು. ಅಲ್ಲದೇ, ಗೋಕರ್ಣ ದೇವಾಲಯದ ಆಡಳಿತವನ್ನೂ ಮುಜರಾಯಿ ವ್ಯಾಪ್ತಿಗೆ ತರಲಿದ್ದೇವೆ ಎಂದಿದ್ದರು.

ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ:ನೀವು ಕಾಂಗ್ರೆಸ್ ಪಕ್ಷದಿಂದ ಸಿಎಂ ಆದರೂ ನಿಮ್ಮದೇ ಪಕ್ಷದ ಕೆಲವರು ನಿಮ್ಮನ್ನು ಹೊರಗಿನವರು ಅನ್ನುವ ಬಗ್ಗೆ?
ಸಿದ್ದು : That is a meaningless statement. ಯಾರೇ ಆಗಲಿ ಯಾವುದೇ ಪಕ್ಷವನ್ನು ಸೇರಿದರೆ ಆ ಪಕ್ಷದ ತತ್ವ, ಸಿದ್ದಾಂತಕ್ಕೆ ಬದ್ದ ಎಂದೇ ಅರ್ಥ. ನಾನೂ ಹಾಗೇ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ನಂಬಿ ಪಕ್ಷ ಸೇರಿದವನು. ಹಾಗಾಗಿ ಹೊರಗಿನವರು, ಒಳಗಿನವರು ಎನ್ನುವ ಪಶ್ನೆಯೇ ಉದ್ಭವಿಸುವುದಿಲ್ಲ.

ಸಂದರ್ಶನದ ಮುಂದಿನ ಭಾಗ ಸ್ಲೈಡಿನಲ್ಲಿ

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಪ್ರ : ಎರಡು ಬಾರಿ ದೇವೇಗೌಡ ಕುಟುಂಬ ನಿಮಗೆ ಸಿಎಂ ಹುದ್ದೆ ತಪ್ಪಿಸಿತು. ಅವರ ಮೇಲೆ ತಿರುಗಿ ಬೀಳುವಿರಾ?
ಸಿದ್ದು : ಇಲ್ಲ, ನನಗೆ ದ್ವೇಷದ ಮತ್ತು ಸೇಡಿನ ರಾಜಕಾರಣ ಮಾಡಲು ಬರುವುದಿಲ್ಲ.

ಪ್ರ: ಹಿಂದಿನ ಬಿಜೆಪಿ ಸರಕಾರ ಗೋಹತ್ಯಾ ನಿಷೇದವನ್ನು ಜಾರಿಗೊಳಿಸಿ ಮಸೂದೆಯನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿದೆ. ಈ ಮಸೂದೆಗೆ ನಿಮ್ಮ ಬೆಂಬಲವಿದೆಯೇ?
ಸಿದ್ದು : ಸಾಧ್ಯವೇ ಇಲ್ಲ. ಒಂದು ವೇಳೆ ರಾಷ್ಟ್ರಪತಿ ಸಹಿ ಹಾಕಿದರೂ ಅದನ್ನು ಮತ್ತೆ ವಾಪಾಸ್ ಕಳುಹಿಸುತ್ತೇವೆ. ಈ ಬಗ್ಗೆ ನಮ್ಮ ಹಿಂದಿನ ನಿಲುವಿಗೆ ಬದ್ದರಾಗಿದ್ದೇವೆ.

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಪ್ರ: ಗೋಹತ್ಯೆ ತಡೆಗೆ ಬಿಜೆಪಿ ಈಗಾಗಲೇ ಸಮಿತಿಯನ್ನು ರಚಿಸಿದೆ. ಈ ಬಗ್ಗೆ?
ಸಿದ್ದು : ಬಿಜೆಪಿ ಸ್ಥಾಪಿಸಿದ ಈ ಸಮಿತಿಯಲ್ಲಿ ಬರೀ ಹಿಂದೂ ಸಂಘಟನೆಗಳು ಸೇರಿದೆ. We need to promote organic farming, not in the way the BJP did. ಬಿಜೆಪಿ ಸ್ಥಾಪಿಸಿದ ಈ ಸಮಿತಿಯನ್ನು ಸದ್ಯದಲ್ಲೇ ನಿಷೇಧಿಸುತ್ತೇವೆ.

ಪ್ರ: ಕರಾವಳಿ ಭಾಗದಲ್ಲಿ ಹಿಂದುತ್ವ ಎನ್ನುವುದೊಂದು ಟ್ರಂಪ್ ಕಾರ್ಡ್. ಇದನ್ನು ಬಳಸಿಕೊಂಡು ಬಿಜೆಪಿ ಆ ಭಾಗದಲ್ಲಿ ನೆಲೆಯೂರಿತ್ತು. ಈಗ ಆ ಭಾಗದ ಜನತೆ ಬಿಜೆಪಿಯ ಬಗ್ಗೆ ಭ್ರಮನಿರಸರಾಗಿದ್ದಾರೆ. ಕಾಂಗ್ರೆಸ್ ಇದರ ಲಾಭವನ್ನು ಹೇಗೆ ಪಡೆದುಕೊಳ್ಳುತ್ತದೆ?
ಸಿದ್ದು: ಕರಾವಳಿ ಭಾಗದ ಜನತೆಯ ವಿಶ್ವಾಸಕ್ಕೆ ಪಾತ್ರರಾಗಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಂಘ ಪರಿವಾರದಿಂದ ಆ ಭಾಗದಲ್ಲಿ ಶಾಂತಿಯಿಲ್ಲ. ಎಸ್ಪಿ, ಡಿಸಿಗಳು ಅವರು ಹೇಳಿದಂತೆ ಕುಣಿಯುವಂತಾಗಿತ್ತು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಪ್ರ: ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಕೋಮು ಗಲಭೆಗೆ ಯತ್ನಿಸಿದ ಶ್ರೀರಾಮಸೇನೆಯನ್ನು ಹೇಗೆ ನಿಯಂತ್ರಿಸುತ್ತೀರಿ?
ಸಿದ್ದು : ಪವರ್ ಇಲ್ಲದಿದ್ದಾಗ ಶ್ರೀರಾಮಸೇನೆಯಂಥಹ ಸಂಘಟನೆಗಳು ಇಂತಹ ದುಷ್ಕ್ರುತ್ಯಕ್ಕೆ ಮುಂದಾಗುತ್ತದೆ. ಇಂಥಹ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.

ಪ್ರ: ಬಿಜೆಪಿ ಆಡಳಿತದಲ್ಲಿ ಮಠಗಳಿಗೆ ಅನುದಾನದ ಹೊಳೆಯೇ ಹರಿದಿತ್ತು? ನಿಮ್ಮ ಸರಕಾರ ಏನು ಮಾಡುತ್ತೆ?
ಸಿದ್ದು: ಈಗಾಗಲೇ ನಾನು ಹೇಳಿದಂತೆ ಯಾವ ಮಠಗಳೂ ಸರಕಾರದ ಬಳಿ ದುಡ್ಡು ಕೇಳಲು ಬಂದಿರಲಿಲ್ಲ. ಅದು ಬಿಜೆಪಿಯ ಅಧಿಕ ಪ್ರಸಂಗತನ. ಈ ಬಗ್ಗೆ ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ.

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಪ್ರ: ವಿರೋಧ ಪಕ್ಷದ ನಾಯಕರಾಗಿದ್ದಾಗ ನಿಮ್ಮ ನಿಲುವನ್ನು ಹೇಳಿದ್ದೀರಿ? ಉಡುಪಿ ಕೃಷ್ಣಮಠ ಮತ್ತು ಗೋಕರ್ಣ ದೇವಾಲಯದ ಬಗ್ಗೆ ಸಿಎಂ ಆದ ಮೇಲೆ ನಿಮ್ಮ ನಿಲುವೇನು?
ಸಿದ್ದು: ಈ ಎರಡೂ ದೇವಾಲಯವೂ ಸಾರ್ವಜನಿಕರ ಪೂಜಾ ಸ್ಥಳ ಎಂದು ಈಗಲೂ ನಾನು ಪ್ರತಿಪಾದಿಸುತ್ತೇನೆ. ಮುಜರಾಯಿ ಇಲಾಖೆಗೆ ಈ ಎರಡೂ ದೇವಾಲಯಗಳು ಬರಬೇಕು. ಈ ಬಗ್ಗೆ ಎಷ್ಟೇ ಒತ್ತಡ ಬಂದರೂ ಎರಡೂ ದೇವಾಲಯವು ಸರಕಾರದ ವ್ಯಾಪ್ತಿಗೆ ಬರುವಂತೆ ಮಾಡಲು ಮುಂದಿನ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

ಪ್ರ: ಡಿನೋಟಿಫಿಕೇಶನ್ ಬಗ್ಗೆ?
ಸಿದ್ದು: ನನ್ನ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಶನ್ ನಡೆಯುವುದಿಲ್ಲ ಎಂದು ನಾನೇನೂ ಹೇಳುವುದಿಲ್ಲ. ಡಿನೋಟಿಫಿಕೇಶನ್ ಪಾರದರ್ಶಕತೆಯಿಂದ ಕೂಡಿರುತ್ತದೆ.

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಔಟ್ ಲುಕ್ ಪತ್ರಿಕೆಗೆ ಸಿಎಂ ಸಂದರ್ಶನ

ಪ್ರ: ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷದಲ್ಲಿ ಆಂತರಿಕ ಭಿನ್ನಮತ ಕಂಡರೆ ಸೂಕ್ತ ಕ್ರಮ ಕೈಗೊಳ್ಳೂತ್ತೀರಾ?
ಸಿದ್ದು: Definitely. ಕಾಂಗ್ರೆಸ್ ಸರಕಾರ ಒಂದೇ ಅಲ್ಲವೇ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸುಭದ್ರ ಸರಕಾರ ನೀಡಿದ್ದು.

ಪ್ರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಎಷ್ಟು ಸೀಟ್ ನಿರೀಕ್ಷಿಸುತ್ತಿದ್ದೀರಿ?
ಸಿದ್ದು : ಉತ್ತಮ ಆಡಳಿತ ನೀಡಿದರೆ ರಾಜ್ಯದಲ್ಲಿ I think we should get 25 seats.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+