ಮೆಗಾ ವಂಚಕ ಕೊನೆಗೂ ಬಲೆಗೆ ಬಿದ್ದ

ಸುಮಾರು 12,000 ಕೋಟಿ ವ್ಯವಹಾರ ಹೊಂದಿರುವ ಸಾಮ್ರಾಜ್ಯಕ್ಕೆ ಒಡೆಯನಾಗಿರುವ ವಿಕೆ ಶರ್ಮ ಅವರು ಲಕ್ಷಾಂತರ ಹೂಡಿಕೆದಾರರಿಗೆ ಸುಮಾರು 1,000 ಕೋಟಿ ವಂಚಿಸಿದ ಆರೋಪ ಹೊತ್ತಿದ್ದರು. ಮಂಗಳವಾರ ಸಂಜೆ ವೇಳೆ ದೆಹಲಿಯ ಪ್ರಗತಿ ಮೈದಾನ್ ಬಳಿ ಪೊಲೀಸರ ಕೈಗೆ ಸಿಕ್ಕಿ ಹಾಕುವ ಮುನ್ನ ಅಕ್ಷರಶಃ ಸಿನಿಮೀಯ ಶೈಲಿಯಲ್ಲಿ ಚೇಸಿಂಗ್ ನಡೆಸಲಾಗಿತ್ತು.
51 ವರ್ಷ ವಯಸ್ಸಿನ ಶರ್ಮ ಅವರು ಮರ್ಸೀಡೀಸ್ ಬೆಂಜ್ ಇ ಕ್ಲಾಸ್ ಕಾರಿನಲ್ಲಿ ಹೋಗುತ್ತಿದ್ದರು, ಕೈಲಾಶ್ ಕಾಲೋನಿಯಿಂದ ಬೈರೋನ್ ರಸ್ತೆ ತನಕ ಚೇಸ್ ನಡೆಯಿತು. ಸುಮಾರು 10 ಕಿ.ಮೀ ಚೇಸ್ ಮಾಡಿದ ಶರ್ಮ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರವೀಂದ್ರ ಜಾಧವ್ ಸ್ಪಷ್ಟಪಡಿಸಿದ್ದಾರೆ. ಶರ್ಮ ಚಿಕ್ಕಂದಿನಲ್ಲೇ ಶಾಲೆಯಿಂದ ಹೊರಬಿದ್ದರೂ ವ್ಯವಹಾರ ಸೂಕ್ಷ್ಮತೆ ಕಲಿತು ದೊಡ್ಡ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಸ್ಥಾಪಿಸಿದ್ದು ಸಿನಿಮಾ ಕಥೆಯಂತೆ ಇದೆ.
ಸುಮಾರು 3 ವರ್ಷಗಳಿಂದ ನಾಪತ್ತೆಯಾಗಿದ್ದ ಶರ್ಮ ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಸುಮಾರು 10ಕ್ಕೂ ಅಧಿಕ ವಂಚನೆ ಪ್ರಕರಣದಲ್ಲಿ ಈತ ಬೇಕಾಗಿದ್ದ, ದೇಶದಾದ್ಯಂತ ಲಕ್ಷಾಂತರ ಹೂಡಿಕೆದಾರರಿಗೆ ಕೈ ಎತ್ತಿದ್ದ. 1000 ಕೋಟಿ ರು ಗೂ ಅಧಿಕ ವಂಚನೆ ಆರೋಪ ಹೊರೆಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕರ ಮಗನಾಗಿರುವ ಶರ್ಮ ಜೆವಿಜಿ ಸಮೂಹ ಸಂಸ್ಥೆಯಲ್ಲಿ 4000 ಕೋಟಿ ರು ಬಂಡವಾಳ ಹೂಡಿಕೆಯ ಯೋಜನೆ ಹಾಕಿಕೊಂಡಿದ್ದರು, ವಿದ್ಯುತ್, ಸಿಮೆಂಟ್, ಸ್ಟೀಲ್, ಜವಳಿ, ವಿಮಾನಯಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಲಿರಿಸಲು ಶರ್ಮ ಇಚ್ಛಿಸಿದ್ದ. ಅಲ್ಲದೆ ಸೋಪು, ಡಿಟರ್ಜೆಂಟ್ ತಯಾರಿಕೆಗೂ ಮುಂದಾಗಿದ್ದ, ಗುರ್ ಗಾಂವ್, ಪಾಟ್ನ, ಮುಂಬೈ ಹಾಗೂ ಹೈದರಾಬಾದಿನಲ್ಲಿ ಟೌನ್ ಶಿಪ್, ಹೋಟೆಲ್ ಸ್ಥಾಪನೆ ಉದ್ದೇಶ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.(ಪಿಟಿಐ)












Click it and Unblock the Notifications