87 ದಿನಗಳ ನಂತರ ಅವಳಿ ಮಕ್ಕಳ ಜನನ!

ಈ ಅವಳಿ ಮಕ್ಕಳ ಹೆತ್ತಮ್ಮ ಮಾರಿಯಾ ನಾಲ್ಕು ತಿಂಗಳ ಮುಂಚೆಯೇ ಹೆರಿಗೆ ನೋವು ಅನುಭವಿಸಿ ಅಮಿಗೆ ಜನ್ಮ ನೀಡಿದರು. ಆದರೆ ಎರಡನೆಯವಳು ಕ್ಯಾಟಿ ಮೂರು ತಿಂಗಳ ನಂತರ ಸಾವಕಾಶವಾಗಿ ಅಮ್ಮನ ಹೊಟ್ಟೆಯಿಂದ ಹೊರಬಂದು ಅಚ್ಚರಿ ಮೂಡಿಸಿದ್ದಾಳೆ.
ಈ ಅಪ್ರತಿಮ ಹೆಣ್ಣು ಮಕ್ಕಳಿಬ್ಬರೂ ಈಗ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಹೀಗೆ ಅತಿ ಹೆಚ್ಚು ದೀರ್ಘಾವದಿ ಅಂತರದಲ್ಲಿ ಈ ಅವಳಿ ಮಕ್ಕಳು ಹುಟ್ಟಿರುವುದು ಈಗ ವಿಶ್ವ ದಾಖಲೆಯಾಗಿದೆ. ಈ ಹಿಂದೆಯೂ ಇಂತಹ ಸುದೀರ್ಘ ಜನನವಾಗಿತ್ತು. ಹಿಂದಿನ ದಾಖಲೆ 84 ದಿನಗಳದ್ದಾಗಿತ್ತು.
ಪವಾಡ ಪುತ್ರಿಯರು: ಇಬ್ಬರೂ ಮಕ್ಕಳು ಜೀವಂತವಾಗಿದ್ದು, ಆರೋಗ್ಯವಂತರಾಗಿದ್ದಾರೆ. ಇದು ವೈದ್ಯಲೋಕಕ್ಕೆ ಹೆಮ್ಮೆ ಮತ್ತು ಅಚ್ಚರಿ ತಂದಿದೆ ಎಂದು ವೈದ್ಯರು ಅವಳಿ ಮಕ್ಕಳ ಹೆತ್ತವರಿಗೆ ತಿಳಿಸಿದ್ದಾರೆ. ಅಂದಹಾಗೆ ಮಾರಿಯಾ ಮತ್ತು ಹ್ಯಾರಿಸ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ (ಫ್ಯಾಮಿಲಿ ಗ್ರೂಪ್ ಫೋಟೋ ಮೇಲಿದೆ ನೋಡಿ).
'ನನಗೆ ಅತೀವ ಆತಂಕ ಮತ್ತು ಸಂಕೋಚ ಎರಡೂ ಒಟ್ಟೊಟ್ಟಿಗೆ ಆಗುತ್ತಿದ್ದವು. ಅಬ್ಬ ಆ ಮೂರು ತಿಂಗಳನ್ನು ಹೇಗೆ ಕಳೆದನೋ!?' ಎಂದು ಮಹಾತಾಯಿ ಮಾರಿಯಾ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications