ಕಾಮಾಕ್ಷಿಪಾಳ್ಯ : ಕಚೇರಿಯಿಂದ ಬಿದ್ದು ಎಂಡಿ ಸಾವು

ಲಗ್ಗೆರೆ ನಿವಾಸಿ ಚಂದ್ರಶೇಖರ್ (40) ಮೃತ ವ್ಯಕ್ತಿ. ರಾಜು ಕ್ರಿಯೇಷನ್ಸ್ ಎಂಬ ಗಾರ್ಮೆಂಟ್ಸ್ ಕಂಪನಿಯನ್ನು ವೃಷಭಾವತಿ ನಗರದಲ್ಲಿರುವ ಅವರು ಸ್ಥಾಪಿಸಿದ್ದರು. ಶುಕ್ರವಾರ ಕಚೇರಿಯ ಐದನೇ ಮಹಡಿಯಿಂದ ಬಿದ್ದು, ಅವರು ಮೃತಪಟ್ಟಿದ್ದಾರೆ.
ಎಂಡಿಯ ಮೃತದೇಹವಿಟ್ಟು ಕಂಪನಿಯ ನೌಕರರು ಪ್ರತಿಭಟನೆ ನಡೆಸಿದ್ದರಿಂದ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಸಿದ ಪೊಲೀಸರು, ಬಿಗಿಭದ್ರತೆ ನಡುವೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.
ಮೃತ ಚಂದ್ರಶೇಖರ್ ಅವರು ವರ್ಷಗಳ ಹಿಂದೆ ವಿಜಯ್‌ಕುಮಾರ್ ಎಂಬುವವರ ಬಳಿ ಅ12 ಲಕ್ಷ ಮೌಲ್ಯದ ಯಂತ್ರ ಖರೀದಿಸಿದ್ದರು. ಆದರೆ, ಹಣವನ್ನು ಹಿಂತಿರುಗಿಸಿರಲಿಲ್ಲ. ಆದ್ದರಿಂದ ವಿಜಯ್ ಕುಮಾರ್ ಕೊಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಪತ್ನಿ ಸುನೀತಾ ಆರೋಪಿಸಿದ್ದಾರೆ.
ಚಂದ್ರಶೇಖರ್ ದಂಪತಿ ವೃಷಭಾವತಿ ನಗರದಲ್ಲಿ ಕಾರ್ಖಾನೆ ಪ್ರಾರಂಭಿಸಿದ ನಂತರ ಅವರಿಗೆ ಹಣದ ಕೊರತೆ ಎದುರಾಗಿತ್ತು. ಯಂತ್ರವನ್ನು ನೀಡಿದ್ದ, ವಿಜಯ್‌ಕುಮಾರ್ ಹಣಕ್ಕಾಗಿ ಪೀಡಿಸುತ್ತಿದ್ದರು. ಈ ಕಾರಣಕ್ಕಾಗಿ ವಿಜಯ್‌ಕುಮಾರ್ ಅವರು ಚಂದ್ರಶೇಖರ್ ಬಳಿ ಗಲಾಟೆ ಮಾಡಿ, ಪ್ರಕರಣ ಪೊಲೀಸ್ ಠಾಣೆವರೆಗೂ ತಲುಪಿತ್ತು.
ಚಂದ್ರಶೇಖರ್ ವಿರುದ್ಧ ವಿಜಯ್‌ಕುಮಾರ್ ಪುಲಿಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ವಿಚಾರಣೆ ನಡೆಸಿ ಕೆಲವು ದಿನಗಳಲ್ಲಿ ಹಣ ಹಿಂತಿರುಗಿಸುವಂತೆ ಚಂದ್ರಶೇಖರ್ ಗೆ ಸೂಚಿಸಿದ್ದರು. ಶುಕ್ರವಾರ ಚಂದ್ರಶೇಖರ್ ಮತ್ತು ವಿಜಯ್ ಕುಮಾರ್ ಜೊತೆಗೆ ಮಾತನಾಡಲು ಕಚೇರಿಯ ಐದನೇ ಮಹಡಿಗೆ ಪೊಲೀಸರೊಂದಿಗೆ ಚಂದ್ರಶೇಖರ್ ತೆರಳಿದ್ದರು.
ನಂತರ ಅಲ್ಲಿಂದ ಬಿದ್ದು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರ ಎದುರೇ ವಿಜಯ್‌ಕುಮಾರ್ ಚಂದ್ರಶೇಖರ್ ಅವರನ್ನು ಕೆಳಗೆ ದೂಡಿದ್ದಾರೆ ಎಂದು ಕುಟುಂಬ ಸದಸ್ಯರು ಹಾಗೂ ಕಾರ್ಖಾನೆ ಸಿಬ್ಬಂದಿ ಆರೋಪಿಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದ ಸದಸ್ಯರಿಗೆ ಚಂದ್ರಶೇಖರ್ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications