ಕಾಂಗ್ರೆಸ್ ಸೇರುತ್ತೇನೆ ಅಂದ್ರು ವರ್ತೂರು ಪ್ರಕಾಶ್

ಗುರುವಾರ ಕೋಲಾರದಲ್ಲಿ ಚುನಾಣಾ ಪ್ರಚಾರದಲ್ಲಿ ಮಾತನಾಡಿದ ಸಚಿತ ವರ್ತೂರು ಪ್ರಕಾಶ್, ಈ ಬಾರಿಯ ಚುನಾಣೆಯಲ್ಲಿ ಗೆಲುವು ಸಾಧಿಸುವುದು ಖಚಿತ. ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುತ್ತೇನೆ ಎಂದರು.
ಜಿಲ್ಲೆಯ ಅಭಿವೃದ್ಧಿ ಮಾಡುವುದು ನನ್ನ ಪ್ರಮುಖ ಗುರಿ ಆದ್ದರಿಂದ ಮಾಲೂರಿನ ಕೃಷ್ಣಯ್ಯಶೆಟ್ಟಿ, ಮುಳಬಾಗಿಲಿನ ಕೊತ್ತನೂರು ಮಂಜು ಎಲ್ಲರೂ ಒಟ್ಟಿಗೆ ಸೇರಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ. ಈ ಬಗ್ಗೆ ಈಗಾಗಲೇ ಅವರ ಬಳಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ನನಗೆ ಎದುರಾಳಿಗಳಿಲ್ಲ : ತಮ್ಮ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ನಜೀರ್ ಅಹಮದ್ ಮತ್ತು ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸಗೌಡ ಇಬ್ಬರೂ ನನಗೆ ಎದುರಾಳಿಗಳಾಗಲು ಸಾಧ್ಯವಿಲ್ಲ. ನಜೀರ್ ಅಹಮದ್ ಅವರು ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸಗೌಡರೊಂಗಿ ಒಪ್ಪಂದ ಮಾಡಿಕೊಂಡು ಮತ ಹಾಳು ಮಾಡಲು ಸ್ಪರ್ಧಿಸಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ನನಗೆ ಯಾರು ಸ್ಪರ್ಧಿಗಳಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಾವು ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗೆಲುವಿನ ಬಳಿಕ ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಹೇಳಿದರು.
ಅಮಾವಾಸ್ಯೆಗೆ ಬೆದರಿದ ವರ್ತೂರು : ಏ.10ರಂದು ಅಮಾವಾಸ್ಯೆದಿನ ನಾಮಪತ್ರ ಸಲ್ಲಿಸಿದದ್ದ ಸಚಿವ ವರ್ತೂರು ಪ್ರಕಾಶ್ ಅಮಾವಾಸ್ಯೆಗಳಿಗೆಲ್ಲ ಬೆದರುವುದಿಲ್ಲ. ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಅವರು ಹೇಳಿಕೆ ನೀಡಿದ್ದರು.
ಆದರೆ, ಬುಧವಾರ ತಿರುಪತಿಗೆ ಭೇಟಿ ನೀಡಿ ಬಂದ ವರ್ತೂರು ಪ್ರಕಾಶ್ ಬುಧವಾರ ಮತ್ತೊಮ್ಮೆ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅಮಾವಾಸ್ಯೆಗೆ ಬೆದರಿ ಮತ್ತೊಮ್ಮೆ ವರ್ತೂರು ನಾಮಪತ್ರ ಸಲ್ಲಿಸಿದರೆ ಎಂಬ ಪ್ರಶ್ನೆ ಕಾಡುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications