ಬೆಂಗಳೂರಿಗರ ಮನೆ ಮನೆಗೆ ಮಯ್ಯಾಸ್ ಹೊಸರುಚಿ

Mane Manege Mayyas
ಬೆಂಗಳೂರು, ಏ. 10 : ಆಹಾರ ಉದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವ ಡಾ.ಪಿ.ಸದಾನಂದ ಮಯ್ಯ ಅವರು 'ಮನೆ ಮನೆಗೆ ಮಯ್ಯಾಸ್' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ, ಬೆಮೆಲ್ ಲೇಔಟ್, ಇಟ್ಟುಮಡು, ಚಂದ್ರಾ ಲೇಔಟ್ ಮತ್ತು ಬ್ಯಾಟರಾಯನಪುರ ಬಡಾವಣೆಗಳಲ್ಲಿ ಈ ತಿಂಗಳ ಎರಡನೇ ವಾರದಿಂದ ಆರಂಭಿಸಲಿದ್ದಾರೆ.

ಆರೋಗ್ಯಕರ ಆಹಾರ ಸೇವನೆಯ ಕುರಿತು ಮಾಹಿತಿ ನೀಡುವುದರೊಂದಿಗೆ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ಮಯ್ಯಾಸ್ ಸ್ನಾಕ್ಸ್, ಮಸಾಲಗಳು, ಇನ್ಟ್ಸಂಟ್ ಮಿಕ್ಸ್‌ಗಳು, ಪಾನೀಯಗಳು, ರೆಡಿ ಟು ಈಟ್, ರೆಡಿಮಿಕ್ಸ್ ಮತ್ತು ಫ್ರೋಜನ್ ಪದಾರ್ಥಗಳನ್ನು ಬೆಂಗಳೂರಿಗರಿಗೆ ಪರಿಚಯಿಸುವುದೇ ಈ ಕಾರ್ಯಕ್ರಮದ ಉದ್ದೇಶ.

ಕನಾಟಕದಲ್ಲಿ ಆಹಾರ ಸಂಸ್ಕೃತಿ ಉಳಿಸಿಕೊಂಡು, ಆಹಾರದ ರುಚಿ ಸತ್ವ ಮತ್ತು ಸೊಗಡನ್ನು ಕಾಪಾಡಿಕೊಂಡು ದಕ್ಷಿಣ ಭಾರತದ ಆಹಾರಗಳಾದ ಇಡ್ಲಿ, ವಡೆ, ದೋಸೆ, ನಿಪ್ಪಟ್ಟು, ಕೋಡುಬಳೆ, ಚಕ್ಕುಲಿ, ಮಂಗಳೂರು ಬಜ್ಜಿ ಮತ್ತಿತರ 30ಕ್ಕೂ ಹೆಚ್ಚು ಪ್ರಕಾರಗಳನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸುವ ಸುಲಭೋಪಾಯವನ್ನು 'ಮನೆ ಮನೆಗೆ ಮಯ್ಯಾಸ್' ಕಾರ್ಯಕ್ರಮದಲ್ಲಿ ವಿವರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.

ಖ್ಯಾತ ಕಿರುತೆರೆ ಕಲಾವಿದೆ ಸುನೇತ್ರಾ ಪಂಡಿತ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಡಾವಣೆಯ ಒಂದು ಮನೆಯಲ್ಲಿ ಅಲ್ಲಿಯ ಆಸಕ್ತ ನಿವಾಸಿಗಳನ್ನು ಆಹ್ವಾನಿಸಿ ಅವರಿಗೆ ಪ್ರಾತ್ಯಕ್ಷಿಕೆ ನೀಡುವುದರ ಜತೆಗೆ ಮಯ್ಯಾಸ್ ಆಹಾರೋತ್ಪನ್ನಗಳನ್ನು ಸವಿಯಲು ನೀಡಲಾಗುತ್ತದೆ. ಪ್ರತಿದಿನ ಎರಡು ಪ್ರದರ್ಶನಗಳು ಬೆಳಗ್ಗೆ 11 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಪ್ರದರ್ಶಿತವಾಗುವುವು. 90 ನಿಮಿಷದ ಪ್ರದರ್ಶನದಲ್ಲಿ ಇಬ್ಬರು ಸಹಾಯಕರಿದ್ದು, ಸ್ಯಾಂಪಲಿಂಗ್, ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಪ್ರದರ್ಶನಗಳು ಎಲ್ಲಿ ನಡೆಯಬೇಕು, ಯಾವಾಗ ನಡೆಯಬೇಕು ಆಯಾ ಪ್ರದರ್ಶನದ ಸಂಘಟನೆಗೆ ಸ್ಥಳೀಯ ಸಹಾಯ ಯಾರದಿರುತ್ತದೆ ಎಂದು ಸಂಯೋಜಿಸಲು ಒಬ್ಬ ಆಯೋಜಕನಿದ್ದು, ಒಟ್ಟು ಐದು ಜನರ ತಂಡ ಜತೆಗಿರುತ್ತದೆ. ಒಂದು ವಾರದಲ್ಲಿ ನಾಲ್ಕು ದಿನ ದಿನಕ್ಕೆ ಎರಡು ಪ್ರದರ್ಶನಗಳು. ಹೀಗೆ ತಿಂಗಳಿಗೆ ಒಟ್ಟು ಮೂವತ್ತೆರಡು ಕಾರ್ಯಕ್ರಮಗಳನ್ನು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ.

ದಕ್ಷಿಣ ಭಾರತದ ಅತಿ ಸುಸಜ್ಜಿತ, ಬೃಹತ್ ಮಯ್ಯಾಸ್ ಆಹಾರ ತಯಾರಿಕಾ ಘಟಕದ ಸಾಕ್ಷ್ಯಚಿತ್ರವನ್ನು ಇದೇ ಸಂದರ್ಭದಲ್ಲಿ ತೋರಿಸಲಾಗುವುದು. ಆಧುನಿಕ ತಂತ್ರಜ್ಞಾನ ಮತ್ತು ಪ್ರಯೋಗಗಳಿಂದ ಕೂಡಿದ ಈ ಘಟಕವನ್ನು ಆಸಕ್ತ ಮಹಿಳಾ ಸಂಘಗಳು ತಮ್ಮ ಸದಸ್ಯರೊಂದಿಗೆ ನೋಡಬಹುದಾಗಿದೆ.

'ಮನೆ ಮನೆ ಮಯ್ಯಾಸ್'ನಲ್ಲಿ ಹಿರಿಯ ರಂಗಕರ್ಮಿ ಯಶವಂತ ಸರ್‌ದೇಶಪಾಂಡೆ ಅವರ 'ಪಾತ್ರ'ವೂ ಇದೆ. ಸರದೇಶಪಾಂಡೆ ನೇತೃತ್ವದಲ್ಲಿ 'ಮಯ್ಯಾಸ್ ರಂಗಾವಳಿ' ರೂಪುಗೊಂಡಿದೆ. ಆಲ್ ದಿ ಬೆಸ್ಟ್, ರಾಶಿಚಕ್ರ ಮತ್ತಿತರ ನಗೆ ನಾಟಕಗಳ ಜತೆಗೆ ಮಯ್ಯಾಸ್ ಆರೋಗ್ಯಕರ ಆಹಾರ ಸವಿಯಬಹುದು. ಆಸಕ್ತರು ತಮ್ಮ ಬಡಾವಣೆಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲು ಪಸನ್ನದತ್ತ (8548867801) ಅವರನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+