ಯಶವಂತಪುರದಲ್ಲಿ ಚರ್ಚ್ ಪಾದ್ರಿ ಕೊಲೆ

ಯಶವಂತಪುರ ಪೊಲೀಸ್ ಠಾಣೆ ಸಮೀಪದಲ್ಲಿರುವ 8 ನೇ ಮುಖ್ಯ ರಸ್ತೆಯ ಸೆಂಟ್ ಪೀಟರ್ ಸನ್ ಸೆಮಿನರಿ ಚರ್ಚ್‌ನಲ್ಲಿ ಪಾದ್ರಿಯಾಗಿದ್ದ ಥಾಮಸ್ (65) ಕೊಲೆಯಾದವರು. ರಾಡ್ ನಿಂದ ಫಾದರ್ ಗೆ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಚರ್ಚ್ ಪಕ್ಕದಲ್ಲಿದ್ದ ಶಾಲೆಯಲ್ಲಿ ಕಳ್ಳತನ ಮಾಡಲು ಬಂದವರು, ಸೆಮಿನರಿಗೆ ಬಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಹೊಸ ಪಾದ್ರಿಗಳಿಗೆ ತರಬೇತಿ ನೀಡುವ ಸೆಮಿನರಿಯ ಮುಖ್ಯಸ್ಥರಾಗಿ ಥಾಮಸ್ ಕಾರ್ಯನಿರ್ವಹಿಸುತ್ತಿದ್ದರು. ಮಧ್ಯರಾತ್ರಿಯ ಸುಮಾರಿಗೆ ಸೆಮಿನರಿಗೆ ನುಗ್ಗಿದ ಕಳ್ಳರಿಗೆ ಪಾದ್ರಿಯವರು ಪ್ರತಿರೋಧ ಒಡ್ಡಿದ್ದರಿಂದ ಅವರನ್ನು ಕೊಲೆ ಮಾಡಿರಬಹದು ಎಂದು ಪೊಲೀಸರು ಹೇಳಿದ್ದಾರೆ. ಸೆಮಿನರಿಯಲ್ಲಿ ಎಂಟರಿಂದ ಹತ್ತು ಪಾದ್ರಿಗಳಿದ್ದರು. ಆದರೆ, ಗುಡ್ ಫ್ರೈಡ್ ಗೆ ಉಳಿದ ಪಾದ್ರಿಗಳು ಊರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಚರ್ಚ್ ಮುಖ್ಯದ್ವಾರದಲ್ಲಿ ಒಬ್ಬ ಕಾವಲುಗಾರನಿದ್ದಾನೆ. ಭಾನುವಾರ ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕಾವಲುಗಾರನಿಗೆ ಯಾರು ಬಂದಿದ್ದರೆಂದು ತಿಳಿದಿಲ್ಲ. ಬೆಳಗ್ಗೆ 5.30ರ ಸುಮಾರಿಗೆ ಕಾವಲುಗಾರ ಪಾದ್ರಿಯವರ ಕೋಣೆ ಬಳಿ ತೆರಳಿದಾಗ ರಕ್ತದ ಕಲೆ ಆಗಿರುವುದು ಕಂಡುಬಂದಿದೆ. ಅನುಮಾನದಿಂದ ಕೋಣೆಯೊಳಗೆ ಪ್ರವೇಶಿಸಿದಾಗ ಪಾದ್ರಿಯವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಮುಂತಾದವರು ಸ್ಥಳಕ್ಕೆ ಭೇಟಿ ಘಟನೆಯ ಕುರಿತು ಮಾಹಿತಿ ಪಡೆದರು. ಯಶವಂತಪುರ ಪೊಲೀಸರು ಪಕ್ರಕರಣ ದಾಖಲಿಸಿಕೊಂಡಿದ್ದು, ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications